Published
4 hours agoon
By
Akkare Newsಪುತ್ತೂರು: ಬೆಳಗ್ಗಿನಿಂದ ಸುರಿಯುತ್ತಿರುವ ಭಾರೀ ಮಳೆಗೆ ಪುತ್ತೂರು ನಗರಸಭೆಯ ಕಾಂಪೌಂಡ್ ಗೋಡೆ ಕುಸಿದು ಬಿದ್ದಿದೆ.
ಗ್ರಾಮ ಚಾವಡಿಯ ಹಿಂಭಾಗದ ಕೋರ್ಟ್ ರಸ್ತೆಯ ಕಾಂಪೌಂಡ್ ಗೋಡೆ ಇದಾಗಿದ್ದು, 3 ರಿಕ್ಷಾಗಳಿಗೆ ಹಾನಿಯಾಗಿದೆ. ಇದರಲ್ಲಿ 2 ರಿಕ್ಷಾಗಳು ತುಂಬಾ ಹಾನಿಗೊಳಗಾಗಿದೆ. ಈ ಹೊತ್ತಿನಲ್ಲಿ ಪಕ್ಕದಲ್ಲಿ ಯಾರೂ ಇರದೇ ಇರುವುದರಿಂದ ಜೀವ ಹಾನಿ ಸಂಭವಿಸಿಲ್ಲ ಎಂದು ಹೇಳಲಾಗಿದೆ.
ಪಕ್ಕದಲ್ಲಿ ನಗರಸಭೆಯ ಟ್ರಾನ್ಸ್’ಫಾರ್ಮರ್ ಇದ್ದು, ಕಾಂಪೌಂಡ್ ಬಿದ್ದಾಗ ರಸ್ತೆಗೆ ವಾಲಿಕೊಂಡು ಬಿಟ್ಟಿತ್ತು. ತಕ್ಷಣ ಮೆಸ್ಕಾಂಗೆ ಮಾಹಿತಿ ನೀಡಿ, ಟ್ರಾನ್ಸ್’ಫಾರ್ಮರ್ ಅನ್ನು ಸರಿಪಡಿಸಲಾಯಿತು.
ರಸ್ತೆಗೆ ಬಿದ್ದಿದ್ದ ಕಲ್ಲು, ಮಣ್ಣನ್ನು ಇದೀಗ ತೆರವುಗೊಳಿಸಲಾಗಿದೆ.