Published
4 months agoon
By
Akkare News
ದಿನಾಂಕ:-11-11-2025 ರಂದು ಸಂಜೆ, ಆರೋಪಿ ಕಾರು ಚಾಲಕ ಪುತ್ತೂರು, ಕೊಡಿಪ್ಪಾಡಿ ನಿವಾಸಿ ಮಹಮ್ಮದ್ ತೌಫಿಕ್ (29) ಎಂಬಾತನು KA-04-MT- 2455 ನೇ ನೋಂದಣಿ ನಂಬ್ರದ ಕಾರನ್ನು ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ, ಕಬಕ ಕಡೆಯಿಂದ ಪುತ್ತೂರು ಕಡೆಗೆ ಚಲಾಯಿಸಿಕೊಂಡು ಹೋಗಿ, ಪುತ್ತೂರು ಕಬಕ ಗ್ರಾಮದ, ಪೋಳ್ಯ ಎಂಬಲ್ಲಿ ಕಾರನ್ನು ಅಜಾಗರೂಕತೆ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿ ಆರೋಪಿಯ ಕಾರಿನ ಮುಂದೆ ಸವಾರಿ ಮಾಡಿಕೊಂಡು ಹೋಗುತ್ತಿದ್ದ ಪಿರ್ಯಾದುದಾರರ ಸಹೋದರ ಶಶಿಕುಮಾರ್ ಎಂಬಾತನು ಸವಾರಿ ಮಾಡುತ್ತಿದ್ದ KA 21EB8634 ನೇ ಸ್ಕೂಟರ್ ಗೆ ಹಿಂದಿನಿಂದ ಡಿಕ್ಕಿ ಹೊಡೆದಿರುವುದಾಗಿದೆ. ಅಪಘಾತದ ಪರಿಣಾಮ ಶಶಿಕುಮಾರ್ ರವರು ರಸ್ತೆಗೆ ಬಿದ್ದು, ಗಾಯಗೊಂಡವರನ್ನು ಪುತ್ತೂರು ಮಹಾವೀರ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಿಸಲಾಗಿರುತ್ತದೆ.


ಈ ಬಗ್ಗೆ ಪುತ್ತೂರು ಸಂಚಾರ ಪೊಲೀಸ್ ಠಾಣೆಯಲ್ಲಿ ಅ.ಕ್ರ: 142/2025, ಕಲಂ: 281, 125 (b) ಬಿ.ಎನ್.ಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿರುತ್ತದೆ.ಸದ್ರಿ ಪ್ರಕರಣದ ಅಪಾದಿತ ಮಹಮ್ಮದ್ ತೌಪೀಕ್ ಅಪಘಾತ ನಡೆದ ವೇಳೆ, ಮದ್ಯಪಾನ ಮಾಡಿರುವುದು ವೈದ್ಯಕೀಯ ತಪಾಸಣೆಯ ವೇಳೆ ಧೃಢಪಟ್ಟಿರುತ್ತದೆ ಹಾಗೂ ಇದೇ ವರ್ಷದಲ್ಲಿ ನಡೆದ ಇನ್ನೊಂದು ಅಪಘಾತ ಪ್ರಕರಣದಲ್ಲಿ ಸದ್ರಿ ಆರೋಪಿಯು ನಿರ್ಲಕ್ಷತನದಲ್ಲಿ ವಾಹನ ಚಾಲನೆ ನಡೆಸಿದ ಪರಿಣಾಮ ಅಪಘಾತ ನಡೆದು ವ್ಯಕ್ತಿಯೊಬ್ಬರು ಮೃತಪಟ್ಟಿರುತ್ತಾರೆ.

ಈ ಹಿನ್ನೆಲೆಯಲ್ಲಿ ಅರೋಪಿಯ ವಿರುದ್ಧ ಪುತ್ತೂರು ಸಂಚಾರ ಪೊಲೀಸ್ ಠಾಣೆಯಲ್ಲಿ ದಾಖಲಾದ ಅ.ಕ್ರ: 142/2025 ಪ್ರಕರಣದಲ್ಲಿ, ಕಲಂ: 110 BNS ಹೆಚ್ಚುವರಿಯಾಗಿ ಸೇರ್ಪಡೆಗೊಳಿಸಿ, ಆರೋಪಿಯನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.





