Published
2 months agoon
By
Akkare News
ಭಾರತ ಮತ್ತು ಯುರೋಪ್ ಒಕ್ಕೂಟದ ನಡುವೆ ಮಹತ್ವದ ವ್ಯಾಪಾರ ಮಾತುಕತೆ ಇದೀಗ ಅಂತಿಮ ಹಂತಕ್ಕೆ ಬಂದು ನಿಂತಿದೆ. ಜಗತ್ತಿನ ಅತಿದೊಡ್ಡ ಆರ್ಥಿಕತೆ ಹೊಂದಿರುವ ರಾಷ್ಟ್ರಗಳ ಪೈಕಿ ಭಾರತ ಕೂಡ ಒಂದಾಗಿದ್ದು, ಜಗತ್ತಿನ ಶ್ರೀಮಂತ ದೇಶಗಳನ್ನೇ ಹೆಚ್ಚಾಗಿ ಹೊಂದಿರುವ ಯುರೋಪ್ ಒಕ್ಕೂಟದ ಜೊತೆಯಲ್ಲಿ ಇದೀಗ ಮಹತ್ವದ ಮಾತುಕತೆ ನಡೆಯುತ್ತಿದೆ. ದಾವೋಸ್ ಶೃಂಗಸಭೆಯಲ್ಲಿ ಈ ಕುರಿತು ಗಂಭೀರ ಚರ್ಚೆ ಆರಂಭ ಆಗಿದ್ದು, ಯುರೋಪಿಯನ್ ಒಕ್ಕೂಟದ ಅಧ್ಯಕ್ಷೆ ಉರ್ಸುಲಾ ವಾನ್ ಡೆರ್ ಲೇಯೆನ್ ಅವರು ಈ ಬಗ್ಗೆ ಮಾಹಿತಿ ನೀಡಿದ್ದಾರೆ.

ಭಾರತಕ್ಕೆ ವ್ಯಾಪಾರದ ದೃಷ್ಟಿಯಿಂದ ಯುರೋಪ್ ಒಕ್ಕೂಟದ ಜೊತೆಗೆ ಒಪ್ಪಂದ ಮಾಡಿಕೊಳ್ಳುವುದು ಬಹುಮುಖ್ಯ, ಏಕೆಂದರೆ ಯುರೋಪ್ ಒಕ್ಕೂಟ ಭಾರತದ ಜೊತೆಗೆ ವ್ಯಾಪಾರ ನಡೆಸಲು ತೆರಿಗೆಯಲ್ಲಿ ವಿನಾಯಿತಿ ನೀಡುತ್ತಾ ಬಂದಿದೆ. ಹೀಗಾಗಿಯೇ 2025ರ ಆರ್ಥಿಕ ವರ್ಷದಲ್ಲಿ ಭಾರತ ಮತ್ತು ಯುರೋಪ್ ಒಕ್ಕೂಟದ ನಡುವೆ ಬರೋಬ್ಬರಿ 76 ಬಿಲಿಯನ್ ಡಾಲರ್ ಮೊತ್ತದ ವ್ಯಾಪಾರ ನಡೆದಿದೆ.

ಈ ಹಂತದಲ್ಲಿ ಕಡಿಮೆ ತೆರಿಗೆ ಕೂಡ ಭಾರತಕ್ಕೆ ಸಹಾಯಕವಾಗಿದೆ. ಹೀಗಿದ್ದಾಗ ಯುರೋಪ್ ಒಕ್ಕೂಟದ ಜೊತೆ ಭಾರತ ಅಂತಿಮ ಹಂತದ ಮಾತುಕತೆಯಲ್ಲಿ ಇದ್ದು, ಭಾರತದಿಂದ ರಫ್ತು ಮಾಡುವ ವಸ್ತುಗಳಿಗೆ ಉತ್ತಮ ಬೆಲೆ ಸಿಗುತ್ತಿದೆ. ಇದೇ ಸಮಯದಲ್ಲಿ ಭಾರತ ಮತ್ತು ಯುರೋಪಿಯನ್ ಒಕ್ಕೂಟದ ನಡುವಿನ ವ್ಯಾಪಾರ ಮಾತುಕತೆ ಮಹತ್ವದ ಹಂತ ತಲುಪುತ್ತಿದೆ, ಎಂದು ಯುರೋಪಿಯನ್ ಒಕ್ಕೂಟದ ಅಧ್ಯಕ್ಷೆ ಉರ್ಸುಲಾ ವಾನ್ ಡೆರ್ ಲೇಯೆನ್ ಅವರು ತಿಳಿಸಿದ್ದಾರೆ.

ಗಣರಾಜ್ಯೋತ್ಸವಕ್ಕೆ ವಿಶೇಷ ಅತಿಥಿಯಾಗಿ ಆಗಮನ ದಾವೋಸ್‌ನಲ್ಲಿ ನಡೆದ ವಿಶ್ವ ಆರ್ಥಿಕ ವೇದಿಕೆಯಲ್ಲೇ ಈ ವಿಚಾರವನ್ನು ಉರ್ಸುಲಾ ಅವರು ತಿಳಿಸಿದ್ದು ಸಾಕಷ್ಟು ಪ್ರಾಮುಖ್ಯತೆ ಪಡೆದಿದೆ. ವ್ಯಾಪಾರದಲ್ಲಿ ನ್ಯಾಯಯುತ ಸುಂಕ, ಉತ್ತಮ ಪಾಲುದಾರಿಕೆ ಮತ್ತು ಒತ್ತಡ ರಹಿತ ವ್ಯಾಪಾರ ನೀತಿಯನ್ನು ಅವರು ಪಸ್ತಾಪಿಸಿದ್ದಾರೆ. ಈ ಮೂಲಕ ಭಾರತದ ಜೊತೆಯಲ್ಲಿ ಯುರೋಪ್ ಒಕ್ಕೂಟ ವ್ಯಾಪಾರ ಒಪ್ಪಂದ ಮಾಡಿಕೊಳ್ಳುತ್ತಿರುವುದು ಲಾಭದಾಯಕ ಆಗಲಿದ್ದು, ಆ ಹಿನ್ನೆಲೆ ಮಾತುಕತೆ ಅಂತಿಮ ಹಂತವನ್ನು ತಲುಪುತ್ತಿದೆ ಎಂದಿದ್ದಾರೆ.






