Published
4 weeks agoon
By
Akkare News
ಪುತ್ತೂರು: ಬೆಳ್ಳಿಪ್ಪಾಡಿ ಕುಡ್ತಡ್ಕ ನಿವಾಸಿ, ನಿವೃತ್ತ ಮುಖ್ಯಗುರು ವೆಂಕಪ್ಪ ಗೌಡ ಕುಡ್ತಡ್ಕ (93 ವ.) ಅಲ್ಪಕಾಲದ ಅಸೌಖ್ಯದಿಂದಾಗಿ ಫೆ.9ರಂದು ಸ್ವಗೃಹದಲ್ಲಿ ನಿಧನರಾದರು.


ವೆಂಕಪ್ಪ ಗೌಡ ಅವರು ಮುಖ್ಯಗುರುಗಳಾಗಿ ಬೆಳ್ಳಿಪ್ಪಾಡಿ ಶಾಲೆ, ಹಿರೇಬಂಡಾಡಿ ಶಾಲೆ ಹಾಗೂ ಶಿಕ್ಷಕರಾಗಿ ಬೆಳ್ತಂಗಡಿ ಬಂದಾರು ಹಿರಿಯ ಪ್ರಾ.ಶಾಲೆ ಮತ್ತು ಸುಳ್ಯ ತಾಲೂಕು ಹರಿಹರ ಹಿ.ಪ್ರಾ. ಶಾಲೆಯಲ್ಲಿ ಸೇವೆ ಸಲ್ಲಿಸಿದ್ದು, ಸಾವಿರಾರು ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸ ನೀಡಿದ ಬೆಳ್ಳಿಪ್ಪಾಡಿ ಶಾಲೆಯ ಹರಿಕಾರರಾಗಿದ್ದಾರೆ.

ಮೃತರು ಪತ್ನಿ ನಿವೃತ್ತ ಮುಖ್ಯ ಶಿಕ್ಷಕಿ ಪಾರ್ವತಿ, ಮಕ್ಕಳಾದ ಮನೋಹರ ಗೌಡ ಡಿ.ವಿ, ಉಮೇಶ್ ಗೌಡ ಡಿ.ವಿ, ಬಾಲಚಂದ್ರ ಗೌಡ ಡಿ.ವಿ, ಗಿರಿಧರ ಗೌಡ ಡಿ.ವಿ ಹಾಗೂ ಸಹೋದರರನ್ನು ಅಗಲಿದ್ದಾರೆ.








