Connect with us

ರಾಜಕೀಯ

B. Ramanath Rai: “ಗಡಿ ಕ್ಷೇತ್ರಗಳಲ್ಲಿ ಯುಡಿಎಫ್ ಗೆಲುವು ಖಚಿತ – ರಾತ್ರಿ ಹಗಲು ಶ್ರಮಿಸಿ”

Published

on

ಮಂಗಳೂರು, ಏಪ್ರಿಲ್ 2:ಕೇರಳ ವಿಧಾನಸಭಾ ಚುನಾವಣೆಯ ಹಿನ್ನಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಯುಡಿಎಫ್ ಅಭ್ಯರ್ಥಿಗಳ ಗೆಲುವನ್ನು ಖಚಿತಪಡಿಸಲು ಕಾರ್ಯಕರ್ತರಿಗೆ ತೀವ್ರ ಹೋರಾಟದ ಕರೆ ನೀಡಲಾಯಿತು.

ಮಾಜಿ ಸಚಿವರಾದ ಬಿ. ರಮಾನಾಥ ರೈ ಅವರ ನೇತೃತ್ವದಲ್ಲಿ ನಡೆದ ಈ ಸಭೆಯಲ್ಲಿ, ಮಂಜೇಶ್ವರ, ಕಾಸರಗೋಡು, ಉದುಮ ಹಾಗೂ ತ್ರಿಕಾರಿಪುರ ಕ್ಷೇತ್ರಗಳನ್ನು ಗುರಿಯಾಗಿಸಿಕೊಂಡು ಸಮಗ್ರ ಚುನಾವಣಾ ತಂತ್ರ ರೂಪಿಸಲಾಯಿತು. ಗಡಿ ಭಾಗದ ಕ್ಷೇತ್ರಗಳಿಗೆ ಜಿಲ್ಲೆಯ ಪ್ರಮುಖರು ಮತ್ತು ಕಾರ್ಯಕರ್ತರನ್ನು ನಿಯೋಜಿಸಿ, ಸಂಘಟಿತ, ವೇಗವಾದ ಮತ್ತು ಪರಿಣಾಮಕಾರಿ ಪ್ರಚಾರಕ್ಕೆ ಚಾಲನೆ ನೀಡಲಾಯಿತು.


Continue Reading
Click to comment

Leave a Reply

Your email address will not be published. Required fields are marked *

Advertisement