Published
2 weeks agoon
By
Akkare News
ಕೊಲ್ಲಿ ರಾಷ್ಟ್ರಗಳ ಯುದ್ಧಕ್ಕೆ ಎರಡು ವಾರಗಳ ತಾತ್ಕಾಲಿಕ ಕದನ ವಿರಾಮ ಘೋಷಿಸಲಾಗಿತ್ತು. ಈ ಸಂಬಂಧ ಪಾಕಿಸ್ತಾನದ ಮಧ್ಯಸ್ಥಿಕೆಯಲ್ಲಿ ನಡೆದ ಇಸ್ರೇಲ್ ಮತ್ತು ಅಮೆರಿಕ-ಇರಾನ್ ಕದನ ವಿರಾಮ ಮಾತುಕತೆಗಳು ವಿಫಲವಾಗಿವೆ. ಉಭಯ ದೇಶಗಳು ಒಮ್ಮತ ನಿರ್ಧಾರಕ್ಕೆ ಬಂದಿಲ್ಲ, ಹೀಗಾಗಿ ಸಂಧಾನ ಮಾತುಕತೆ ಯಶಸ್ವಿಯಾಗಲಿಲ್ಲ ಎಂದು ಅಮೆರಿಕದ ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್ ತಿಳಿಸಿದ್ದಾರೆ.

ಹಣಕಾಸು ಮತ್ತು ಭದ್ರತೆಗೆ ಅಮೆರಿಕವನ್ನು ಅವಲಂಬಿಸಿ, ನೆರೆಯ ಇರಾನ್ ಸಂಘರ್ಷದಿಂದ ದಶಕಗಳಷ್ಟು ಹಿಂದೆ ಸರಿಯುವ ಅಪಾಯದಲ್ಲಿದೆ ಪಾಕಿಸ್ತಾನ. ಇಸ್ಲಾಮಾಬಾದ್‌ನಲ್ಲಿ ನಡೆದ ಈ ಮಾತುಕತೆಗಳ ಮುನ್ನ ವ್ಯಾನ್ಸ್, ಪಾಕ್ ಸೇನಾ ಮುಖ್ಯಸ್ಥ ಅಸಿಮ್ ಮುನೀರ್ ಮತ್ತು ಉಪಪ್ರಧಾನಿ ಮೊಹಮ್ಮದ್ ಇಶಾಕ್ ದಾರ್ ಅವರೊಂದಿಗೆ ಚರ್ಚೆ ನಡೆಸಿದ್ದರು. ಸಂಧಾನ ವಿಫಲ ಹಿನ್ನೆಲೆ ಅಮೆರಿಕ ನಿಯೋಗ ಅತೃಪ್ತಿಯಿಂದ ಪಾಕಿಸ್ತಾನವನ್ನು ತೊರೆದಿದೆ.

ಸುಮಾರು 21 ಗಂಟೆಗಳ ಕಾಲ ಇಸ್ಲಾಮಾಬಾದಿನಲ್ಲಿ ನಡೆದ ಮಾತುಗಳು ಫಲಿಸಲಿಲ್ಲ. ಇರಾನ್ vs ಇಸ್ರೇಲ್- ಅಮೆರಿಕಾ ಮಧ್ಯೆ ಅನಿಶ್ಚಿತೆ ಮುಂದುವರಿಯಲಿದೆ. ಅದು ಜಾಗತಿಕವಾಗಿಯು ಪರಿಣಾಮ ಬೀರಲಿದೆ. ಹಿಂದಿನಿಂದಲೂ ಇರಾನ್‌ಗೆ ಸಾಕಷ್ಟು ಆಫರ್‍ಗಳನ್ನು ನೀಡಿದ್ದಾಗಿ ಯುಎಸ್ ಹೇಳಿಕೊಂಡಿದೆ.

ಪಾಕಿಸ್ತಾನಕ್ಕೆ ರಾಜತಾಂತ್ರಿಕ ಹಿನ್ನಡೆ ಇಂದಿನ ಈ ನಿರ್ಣಾಯಕ ಮಾತುಕತೆಗಳ ವೈಫಲ್ಯ ಪಾಕಿಸ್ತಾನಕ್ಕೆ ಕೇವಲ ರಾಜತಾಂತ್ರಿಕ ಹಿನ್ನಡೆಯಾದಂತಾಗಿದೆ. ಇದು ರಾಷ್ಟ್ರೀಯ ಭದ್ರತೆಗೆ ನೇರ ಬೆದರಿಕೆಯಾಗಿದೆ. ಇದೇ ಕಾರಣಕ್ಕಾಗಿ ಪಾಕಿಸ್ತಾನದ ಪ್ರಧಾನಿ ಮತ್ತು ಸೇನಾ ಮುಖ್ಯಸ್ಥರು ಎರಡೂ ರಾಷ್ಟ್ರಗಳ ನಡುವೆ ಒಂದು ಮಹತ್ವದ ಒಪ್ಪಂದಕ್ಕಾಗಿ ತೀವ್ರವಾಗಿ ಪ್ರಯತ್ನಪಟ್ಟಿದ್ದರು. ಪಾಕಿಸ್ತಾನವು ಅಮೆರಿಕ ಮತ್ತು ಇರಾನ್ ದೇಶಗಳಲ್ಲಿ ಯಾರನ್ನು ಬೆಂಬಲಿಸಬೇಕು ಎಂಬ ಒತ್ತಡದಲ್ಲಿ ಸಿಲುಕಿದೆ.



