Connect with us

ಸ್ಥಳೀಯ

ಬೆಳಗಾವಿ ಲೋಕಾಯುಕ್ತ ದಾಳಿ ವೇಳೆ ಎಇಇ ಅಜಯಸಿಂಗ್ ಆಸ್ತಿ ಕಂಡು ಅಧಿಕಾರಿಗಳೇ ಶಾಕ್

Published

on

ಬೆಳಗಾವಿ, ಏಪ್ರಿಲ್ 11: ಬೆಳಗಾವಿ ನಗರಾಭಿವೃದ್ಧಿ ಕೋಶದ ಸಹಾಯಕ ಕಾರ್ಯಪಾಲಕ ಅಭಿಯಂತರ (AEE) ಅಜಯಸಿಂಗ್ ರಜಪೂತ್ ಅವರ ಮೇಲೆ ನಡೆದ ಲೋಕಾಯುಕ್ತ ದಾಳಿಯ ವೇಳೆ ಬರೋಬ್ಬರಿ 14 ಕೋಟಿ ರೂಪಾಯಿಗೂ ಅಧಿಕ ಮೊತ್ತದ ಅಕ್ರಮ ಆಸ್ತಿ ಪತ್ತೆಯಾಗಿರುವುದು ಇಡೀ ರಾಜ್ಯದ ಗಮನ ಸೆಳೆದಿದೆ.

ರಾಜೀವ್‌ ಸಿಂಗ್‌ ಎಂದಿನಂತೆ ಬೆಳಗ್ಗೆ ವಾಕಿಂಗ್‌ ಹೋಗಿದ್ದರು. ಈ ವೇಳೆ ಬೈಕ್‌ನಲ್ಲಿ ಬಂದ ಇಬ್ಬರು ಅಪರಿಚಿತರು, ವಕೀಲನ ಮೇಲೆ ಏಕಾಏಕಿ ಗುಂಡಿನ ದಾಳಿ ನಡೆಸಿದ್ದಾರೆ. ಗುಂಡೇಟಿಗೆ ವಕೀಲ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ತನಿಖಾಧಿಕಾರಿಗಳು ಅಜಯಸಿಂಗ್ ಅವರ ಪತ್ನಿ ಹಾಗೂ ಅತ್ತೆಯ ಹೆಸರಿನಲ್ಲಿದ್ದ ಎಸ್‌ಬಿಐ ಬ್ಯಾಂಕ್ ಲಾಕರ್‌ಗಳನ್ನು ತೆರೆದಾಗ ಅಧಿಕಾರಿಗಳೇ ಒಂದು ಕ್ಷಣ ಬೆಚ್ಚಿಬಿದ್ದಿದ್ದಾರೆ. ಲಾಕರ್‌ನಲ್ಲಿ ಸುಮಾರು 25 ಲಕ್ಷ ರೂಪಾಯಿ ಮೌಲ್ಯದ ವಜ್ರದ ನೆಕ್ಲೆಸ್ ಹಾಗೂ ಹರಳಿನ ಉಂಗುರಗಳು ಪತ್ತೆಯಾಗಿವೆ. ಇದಲ್ಲದೆ, ಸುಮಾರು 5.96 ಕೆಜಿ ತೂಕದ ಚಿನ್ನದ ರಾಶಿಯೇ ಸಿಕ್ಕಿದ್ದು, ಅದರಲ್ಲಿ ಒಂದೂವರೆ ಕೆಜಿಯಷ್ಟು ಹಾಲ್‌ಮಾರ್ಕ್ ಚಿನ್ನದ ಗಟ್ಟಿಗಳು (Gold Biscuits) ಸೇರಿವೆ. ಬೆಳ್ಳಿಯ ಸಂಗ್ರಹವೂ ಕಡಿಮೆಯೇನಿಲ್ಲ; ಸುಮಾರು 5 ಕೆಜಿ ಬೆಳ್ಳಿಯ ಆಭರಣ ಹಾಗೂ ಗಟ್ಟಿಗಳನ್ನು ಅಧಿಕಾರಿಗಳು ಜಪ್ತಿ ಮಾಡಿದ್ದಾರೆ.

 

 

ಹುಬ್ಬಳ್ಳಿ, ಸವದತ್ತಿ, ಹುಕ್ಕೇರಿ, ಗೋಕಾಕ್ ಹಾಗೂ ಬೆಳಗಾವಿ ಸೇರಿದಂತೆ ಆಯಕಟ್ಟಿನ ಪ್ರದೇಶಗಳಲ್ಲಿ ಬರೋಬ್ಬರಿ 18 ನಿವೇಶನಗಳನ್ನು ಇವರು ಹೊಂದಿರುವುದು ದಾಖಲೆಗಳಿಂದ ಸಾಬೀತಾಗಿದೆ. ಮನೆಯ ಶೋಧದ ವೇಳೆ 43 ಲಕ್ಷ ರೂಪಾಯಿ ಮೌಲ್ಯದ ಐಷಾರಾಮಿ ಕಾರು ಮತ್ತು ದುಬಾರಿ ಬೈಕ್‌ಗಳು ಪತ್ತೆಯಾಗಿವೆ. ಅಲ್ಲದೆ, ವಿವಿಧ ಬ್ಯಾಂಕ್ ಖಾತೆಗಳಲ್ಲಿ 3.12 ಕೋಟಿ ರೂಪಾಯಿ ಮೊತ್ತದ ಫಿಕ್ಸೆಡ್ ಡೆಪಾಸಿಟ್ (FD) ಇರುವುದು ಇವರ ಅಕ್ರಮ ಸಂಪಾದನೆಯ ಆಳಕ್ಕೆ ಸಾಕ್ಷಿಯಾಗಿದೆ. ಆದಾಯದ ಮೂಲಗಳಿಗಿಂತಲೂ ಹಲವು ಪಟ್ಟು ಅಧಿಕ ಆಸ್ತಿ ಗಳಿಸಿರುವ ಈ ಅಧಿಕಾರಿಯ ವಿರುದ್ಧ ಲೋಕಾಯುಕ್ತ ಡಿವೈಎಸ್‌ಪಿ ಬಿ.ಎಸ್. ಪಾಟೀಲ್ ನೇತೃತ್ವದ ತಂಡ ತನಿಖೆಯನ್ನು ಮತ್ತಷ್ಟು ತೀವ್ರಗೊಳಿಸಿದೆ. ಸುಳ್ಳು ಆದಾಯದ ದಾಖಲೆಗಳನ್ನು ಸೃಷ್ಟಿಸಿರುವ ಬಗ್ಗೆ ಹಾಗೂ ಬೇನಾಮಿ ಆಸ್ತಿಗಳ ಬಗ್ಗೆ ತನಿಖೆ ಮುಂದುವರಿದಿದೆ.

Continue Reading
Click to comment

Leave a Reply

Your email address will not be published. Required fields are marked *

Advertisement