Connect with us

ಇಂದಿನ ಕಾರ್ಯಕ್ರಮ

ಬೊಳುವಾರಿನಲ್ಲಿ ಶಾಸಕರಿಂದ ಚತುಷ್ಪಥ ರಸ್ತೆ ಕಾಮಗಾರಿ ವೀಕ್ಷಣೆ:ಮೂರು ಪಟ್ಟು ಪರಿಹಾರ ಘೋಷಿಸಿಯೂ ಅಭಿವೃದ್ಧಿಗೆ ಜಾಗ ಬಿಡದಿದ್ದರೆ ಕಾನೂನು ಕ್ರಮ-ಅಶೋಕ್ ಕುಮಾರ್ ರೈ

Published

on

 
ಪುತ್ತೂರು: ಅಭಿವೃದ್ಧಿ ಕೆಲಸಗಳನ್ನು ಮಾಡುವ ಕೆಲವೊಮ್ಮೆ ಕಠಿಣ ನಿರ್ಧಾರಗಳು ಅಗತ್ಯ. ಪುತ್ತೂರು-ಉಪ್ಪಿನಂಗಡಿ ಚತುಷ್ಪಥ ಕಾಮಗಾರಿಗೆ ಸಂಬಂಧಿಸಿದಂತೆ ಬೊಳುವಾರಿನಲ್ಲಿ ನಗರ ಸಭೆಯ ಕಟ್ಟಡ ತೆರವಿಗೆ ಆಕ್ಷೇಪಣೆಯಿತ್ತು. ಅದನ್ನು ತಳ್ಳಿ ಹಾಕಿ ತೆರವುಗೊಳಿಸಲಾಗಿದೆ. ಅಭಿವೃದ್ಧಿಗಾಗಿ ಜಿಲ್ಲಾಧಿಕಾರಿಗಳು ಕಟ್ಟಡ ತೆರವಿಗೆ ಅನುಮತಿ ನೀಡಿದ್ದಾರೆ. ಎರಡು ಮೂರು ಮನೆಯವರು ಆಕ್ಷೇಪಣೆಯಿದ್ದು ಅವರನ್ನು ಮನವೊಳಿಸಿ ಅಭಿವೃದ್ಧಿಗೆ ಪೂರಕವಾದ ಸಹಕಾರ ಪಡೆದುಕೊಳ್ಳಲಾಗುವುದು. ಮನೆಯವರಿಗೆ ಸಬ್‌ರಿಜಿಸ್ಟ್ರಾ‌ರ್ ಬೆಲೆಗಿಂತ ಮೂರು ಪಟ್ಟು ಪರಿಹಾರ ನೀಡಲಾಗುವುದು.
ಹಾಗಿದ್ದರೂ ಬಿಡದಿದ್ದರೆ ಮುಂದೆ ಕಾನೂನಾತ್ಮಕವಾಗಿಯಾದರೂ ಅಭಿವೃದ್ಧಿ ಕೆಲಸಗಳನ್ನು ಮಾಡಲಾಗುವುದು ಎಂದು ಶಾಸಕ ಅಶೋಕ್ ಕುಮಾರ್ ರೈ ಹೇಳಿದರು. ಪುತ್ತೂರು-ಉಪ್ಪಿನಂಗಡಿ ಚತುಷ್ಪಥ ರಸ್ತೆ ಕಾಮಗಾರಿಗೆ ಸಂಬಂಧಿಸಿದಂತೆ ಮೇ.16ರಂದು ಬೊಳುವಾರಿನಲ್ಲಿ ರಸ್ತೆ ಅಭಿವೃದ್ಧಿಗೆ ಕಟ್ಟಡ ತೆರವುಗೊಳಿಸುವ ಕುರಿತು ವೀಕ್ಷಣೆ ಮಾಡಿ, ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಂದ ಕಾಮಗಾರಿಯ ಬಗ್ಗೆ ಮಾಹಿತಿ ಪಡೆದುಕೊಂಡು ಅವರು ಮಾತನಾಡಿದರು. ಚತುಷ್ಟಪ ಕಾಮಗಾರಿಗೆ ಬೊಳುವಾರಿನಲ್ಲಿ ನಗರ ಸಭೆಯ ಕಟ್ಟಡ ತೆರವುಗೊಳಿಲಾಗಿದೆ. ಅಲ್ಲದೆ ಇಲ್ಲಿರುವ ಶೌಚಾಲಯ, ಗೂಡಂಗಡಿ ತೆರವುಗೊಳಿಸಲಾಗುವುದು.
 
ಮುಂದಿನ 25-30ವರ್ಷದ ದೃಷ್ಠಿಯಿಂದ ಅಭಿವೃದ್ಧಿ ಕಾರ್ಯ ನಡೆಸಿ ರಸ್ತೆ ಅಡಚಣೆಯಾಗದಂತೆ ಎಲ್ಲದಕ್ಕೂ ಪರಿಹಾರ ನೀಡಲಾಗುವುದು. ಈ ಹಿಂದೆ 10 ಮೀಟ‌ರ್ ರಸ್ತೆಯ ಯೋಜನೆಯಿತ್ತು. ಅದನ್ನು ಕೈಬಿಟ್ಟು ಚತುಷ್ಪಥ ರಸ್ತೆ ನಿರ್ಮಾಣಗೊಳ್ಳಲಿದೆ. ಅಂಗಡಿಗಳಿಗೆ ಸರಕಾರಿ ಜಾಗದಲ್ಲಿ ಶೀಟ್ ಹಾಕಿರುವುದನ್ನು ಸಾರ್ವಜನಿಕರಿಗಾಗಿ ತೆರವುಗೊಳಿಸಿ ಅಭಿವೃದ್ಧಿ ಅವಕಾಶ ಮಾಡಿಕೊಡಬೇಕು. ಮಂಗಳೂರಿನಿಂದ ಬರುವ ವಾಹನಗಳಿಗೆ ಸ್ವಲ್ಪವೂ ಟ್ರಾಫಿಕ್ ಆಗದಂತೆ ದೊಡ್ಡ ಸರ್ಕಲ್ ನಿರ್ಮಿಸಲಾಗುವುದು. ಮುಂದಿನ ಆರು ತಿಂಗಳಲ್ಲಿ ಎಲ್ಲಾ ಕಾಮಗಾರಿಗಳು ಪೂರ್ಣಗೊಳ್ಳಲಿದೆ ಎಂದ ಶಾಸಕರು ನೆಕ್ಕಿಲಾಡಿಯಿಂದ ಉಪ್ಪಿನಂಗಡಿ ತನಕದ ರಸ್ತೆಗೆ ರೂ.13 ಕೋಟಿ ಅನುದಾನ ಮಂಜೂರಾಗಿ ಟೆಂಡರ್ ಹಂತದಲ್ಲಿದೆ.

ರೂ.೨.೫೦ಕೋಟಿ ಹೆಚ್ಚುವರಿ ಅನುದಾನ ಮೀಸಲಿಡಲಾಗಿದೆ. ಒಟ್ಟು 49 ಕೋಟಿ ಅನುದಾನದಲ್ಲಿ ಈ ರಸ್ತೆ ಅಭಿವೃದ್ಧಿ ನಡೆಯಲಿದೆ ಎಂದು ಅವರು ಹೇಳಿದರು. ಬ್ಲಾಕ್‌ ಕಾಂಗ್ರೆಸ್ ಅಧ್ಯಕ್ಷ ಕೃಷ್ಣಪ್ರಸಾದ್‌ ಆಳ್ವ, ಲೋಕೋಪಯೋಗಿ ಇಲಾಖೆ ಸಹಾಯಕ ಲೋಕೋಪಯೋಗಿ ಇಲಾಖೆ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯ‌ರ್ ರಾಜೇಶ್ ರೈ ಮೊದಲಾದವರು ಉಪಸ್ಥಿತರಿದ್ದರು.

ರಸ್ತೆಗೆ ಡಾಮರೀಕರಣಗೊಳಿಸಿದರೆ ಅದು ಕೆಲ ವರ್ಷಗಳಲ್ಲಿ ಹೋಗಲಿದೆ. ಹೀಗಾಗಿ ಪೂರ್ತಿ ಕಾಂಕ್ರಿಟೀಕರಣಗೊಳಿಸಲಾಗುವುದು. ಮುಂದಿನ 30 ವರ್ಷಕ್ಕೆ ಪೂರಕವಾಗಿ ರಸ್ತೆ ಅಭಿವೃದ್ಧಿ ನಡೆಸಲಾಗುವುದು. ಅಭಿವೃದ್ಧಿ ನಾವು ಮಾಡುತ್ತೇವೆ. ನೀವು ಓಟ ಹಾಕಲು ಹೇಳಿ. ಅಭಿವೃದ್ಧಿ ಯಾವ ರೀತಿ ಮಾಡಬೇಕು, ಹೇಗೆ ಮಾಡಬೇಕು ಎಂದು ನಾವು ತೋರಿಸಿಕೊಡುತ್ತೇವೆ. ಮುಂದಿನ ಎರಡು ವರ್ಷದಲ್ಲ ಪುತ್ತೂರು ಯಾವ ರೀತಿ ಅಭಿವೃದ್ಧಿ ಆಗುತ್ತದೆ ಎನ್ನುವುದನ್ನು ನೋಡಿ. ಅಭಿವೃದ್ಧಿ ಆದರೆ ಓಟುಕೊಡಿ. -ಅಶೋಕ್‌ ಕುಮಾ‌ರ್ ರೈ, ಶಾಸಕರು ಪುತ್ತೂರು

Continue Reading
Click to comment

Leave a Reply

Your email address will not be published. Required fields are marked *

Advertisement