Connect with us

ಚುನಾವಣೆ

ಡಿಕೆಶಿ ನಾಯಕತ್ವಕ್ಕೆ ಜೈ ಎಂದ ಶಾಸಕರು ಭಾರಿ ಕುತೂಹಲ ಕೆರಳಿಸಿದ ವಿಧಾನ ಪರಿಷತ್ ಚುನಾವಣೆ ಕಾಂಗ್ರೆಸ್ಸಿನ ಐದು ಅಭ್ಯರ್ಥಿಗಳು ಜಯಭೇರಿ ಜೆಡಿಎಸ್ ಗೆ ಮುಖಭಂಗ

Published

on

ಕರ್ನಾಟಕ ವಿಧಾನ ಪರಿಷತ್‌ನ 7 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್‌ 5 ಹಾಗೂ ಬಿಜೆಪಿ 2 ಸ್ಥಾನಗಳಲ್ಲಿ ಜಯಗಳಿಸಿವೆ. ಜೆಡಿಎಸ್‌ ಅಭ್ಯರ್ಥಿ ಸೋಲನುಭವಿಸಿದ್ದಾರೆ. ಸಂಖ್ಯಾಬಲದ ಆಧಾರದಲ್ಲಿ ಕಾಂಗ್ರೆಸ್‌ ನಿರೀಕ್ಷೆಗಿಂತ ಒಂದು ಹೆಚ್ಚುವರಿ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದೆ. ಗೆಲುವಿಗೆ ತಲಾ 28 ಮತಗಳ ಅಗತ್ಯವಿದ್ದು, ಬಿ.ಕೆ. ಹರಿಪ್ರಸಾದ್ ಹಾಗೂ ರಘು ಕೌಟಿಲ್ಯ ಸೇರಿದಂತೆ ಒಟ್ಟು ಏಳು ಅಭ್ಯರ್ಥಿಗಳು ನೂತನ ಸದಸ್ಯರಾಗಿ ಆಯ್ಕೆಯಾಗಿದ್ದಾರೆ.

 

​ ಬೆಂಗಳೂರು: ಕರ್ನಾಟಕ ವಿಧಾನ ಪರಿಷತ್‌ನ 7 ಸ್ಥಾನಗಳಿಗೆ ಗುರುವಾರ ಚುನಾವಣೆ ನಡೆದಿದ್ದು, ಫಲಿತಾಂಶ ಪ್ರಕಟವಾಗಿದೆ. ಕಾಂಗ್ರೆಸ್‌ 5 ಸ್ಥಾನ, ಬಿಜೆಪಿ 2 ಸ್ಥಾನ ಗಳಿಸಿಕೊಂಡಿದೆ. ಜೆಡಿಎಸ್‌ ಅಭ್ಯರ್ಥಿಗೆ ಸೋಲಾಗಿದೆ.

​ ಗುರುವಾರ ವಿಧಾನಸೌಧದಲ್ಲಿ ಬೆಳಿಗ್ಗೆ 9 ರಿಂದ ಮತದಾನ ಆರಂಭವಾಯಿತು. ಸಂಜೆ ಮತ ಎಣಿಕೆ ನಡೆಯಿತು. ಸಂಖ್ಯಾಬಲ ಆಧರಿಸಿ ಕಾಂಗ್ರೆಸ್‌ 4 ಹಾಗೂ ಬಿಜೆಪಿ 2 ಸ್ಥಾನ ಗೆಲ್ಲಲಿದೆ ಎಂದು ನಿರೀಕ್ಷಿಸಲಾಗಿತ್ತು. ಬಾಕಿ 1 ಸ್ಥಾನಕ್ಕೆ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ನಡುವೆ ಸ್ಪರ್ಧೆ ಇತ್ತು. ಕೊನೆಗೆ ಕಾಂಗ್ರೆಸ್‌ನ ಅಭ್ಯರ್ಥಿ ವಿನಯ್ ಕಾರ್ತಿಕ್‌ ಗೆಲುವು ಸಾಧಿಸಿದ್ದು, ಜೆಡಿಎಸ್‌ನ ಗೋವಿಂದರಾಜು ಸೋತಿದ್ದಾರೆ.ಯಾರೆಲ್ಲಾ ವಿಧಾನಪರಿಷತ್‌ಗೆ ಆಯ್ಕೆ ?
ಕಾಂಗ್ರೆಸ್‌ನಿಂದ ಬಿ ಕೆ ಹರಿಪ್ರಸಾದ್, ತಿಪ್ಪಣ್ಣಪ್ಪ ಕಾಮಕನೂರ್, ಪಿ.ವಿ ಮೋಹನ್, ವಿನಯ್ ಕಾರ್ತಿಕ್‌, ಶಿವಣ್ಣ ಮಳವಳ್ಳಿ ಸೇರಿ 5 ಮಂದಿ ಗೆಲುವು ಸಾಧಿಸಿ ಪರಿಷತ್‌ಗೆ ಆಯ್ಕೆಯಾಗಿದ್ದಾರೆ.. ಬಿಜೆಪಿಯಿಂದ ರಘು ಕೌಟಿಲ್ಯ ಮತ್ತು ಲಿಂಗರಾಜ್ ಪಾಟೀಲ್ ವಿಜಯಶಾಲಿಗಳಾಗಿ ಪರಿಷತ್‌ಗೆ ಕಾಲಿಟ್ಟಿದ್ದಾರೆ.

ಸ್ಪರ್ಧಿಸಿದ್ದ ಯಾರಿಗೆ ಎಷ್ಟು ಮತಗಳು?

  • ಬಿಕೆ ಪರಿಪ್ರಸಾದ್‌ – 30
  • ತಿಪ್ಪಣ್ಣಪ್ಪ ಕಾಮಕನೂರ್ – 30
  • ಪಿ ವಿ ಮೋಹನ್ – 29
  • ರಘು ಕೌಟಿಲ್ಯ – 29
  • ಶಿವಣ್ಣ ಮಳವಳ್ಳಿ – 30
  • ಗೋವಿಂದ ರಾಜು – 14
  • ವಿನಯ್ ಕಾರ್ತಿಕ್‌ – 32
  • ಲಿಂಗರಾಜ್ ಪಾಟೀಲ್ – 27

ಹೆಚ್ಚುವರಿ ಮತ ಪಡೆದ ಆಡಳಿತ ಪಕ್ಷ ಕಾಂಗ್ರೆಸ್‌

ಜೆಡಿಎಸ್‌ ಹಾಗೂ ಬಿಜೆಪಿಯ ಮತಗಳು ಕಾಂಗ್ರೆಸ್‌ ಪಾಲಾಗಿವೆ. ಹೀಗಾಗಿಯೇ, 4 ಅಭ್ಯರ್ಥಿಗಳನ್ನು ಗೆಲ್ಲಿಸಿಕೊಳ್ಳುವ ಸಾಮರ್ಥ್ಯವಿದ್ದ ಕಾಂಗ್ರೆಸ್‌ 5ನೇ ಅಭ್ಯರ್ಥಿಯಾಗಿ ವಿನಯ್ ಕಾರ್ತಿಕ್‌ನ ಗೆಲ್ಲಿಸಿಕೊಂಡಿದೆ. ಬಿಜೆಪಿ ವಿಧಾನಸಭೆಯಲ್ಲಿ 62 ಸದಸ್ಯ ಬಲ ಹೊಂದಿದ್ದು, ತನ್ನ ಇಬ್ಬರು ಅಭ್ಯರ್ಥಿಗಳಿಗೆ 30 ಹಂಚಿಕೆ ಮಾಡಿ ಉಳಿದವುಗಳನ್ನು ಜೆಡಿಎಸ್‌ ಅಭ್ಯರ್ಥಿಗೆ ಹಾಕಲು ಸೂಚಿಸಲಾಗಿತ್ತು. ಆದರೆ, ಬಿಜೆಪಿ ಅಭ್ಯರ್ಥಿಗಳಿಗೇ ಕಡಿಮೆ ಮತ ಬಿದ್ದಿದ್ದು, ಅಡ್ಡ ಮತದಾನದ ಮೂಲಕ ಕಾಂಗ್ರೆಸ್‌ ಪಾಲಾಗಿವೆ. ಜೆಡಿಎಸ್‌ ಬಳಿ ಕೇವಲ 18 ಸದಸ್ಯರಿದ್ದು, ಅವರ ಪೈಕಿ ಹಲವರು ಕಾಂಗ್ರೆಸ್‌ಗೆ ಮತ ಹಾಕಿರುವ ಸಾಧ್ಯತೆ ಇದೆ.

ವಿಧಾನಸಭೆಯ ಒಟ್ಟು 224 ಸ್ಥಾನಗಳ ಪೈಕಿ ಸದ್ಯ 222 ಸದಸ್ಯರಿದ್ದಾರೆ. ಮಾಜಿ ಸಚಿವ ಡಿ.ಸುಧಾಕರ್‌ ನಿಧನ ಹಾಗೂ ಕಾಂಗ್ರೆಸ್‌ನ ವಿನಯ್‌ ಕುಲಕರ್ಣಿ ಅನರ್ಹತೆಯಿಂದ 2 ಸ್ಥಾನಗಳು ತೆರವಾಗಿದ್ದವು. ಅಭ್ಯರ್ಥಿಯ ಗೆಲುವಿಗೆ ಮೊದಲ ಪ್ರಾಶಸ್ತ್ಯದಡಿ 28 ಮತಗಳ ಅಗತ್ಯವಿತ್ತು. ಗುರುವಾರ ಬೆಳಗ್ಗೆ 9 ರಿಂದ ಸಂಜೆ 4 ವರೆಗೆ ವಿಧಾನಸೌಧದ ಕೊಠಡಿ ಸಂಖ್ಯೆ 106ರಲ್ಲಿ ಮತದಾನ ನಡೆಯಿತು. ಸಂಜೆ 5 ಗಂಟೆಯಿಂದ ಮತ ಎಣಿಕೆ ನಡೆಯಿತು.

 

Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version