Connect with us

ರಾಜಕೀಯ

ಪರಿಷತ್ ಚುನಾವಣೆ : ಬಿಜೆಪಿ 3 ಶಾಸಕರರಿಂದ ಅಡ್ಡಮತದಾನ, ಸಿಕ್ಕೆ ಸಿಕ್ತಾರೆ….ಶಿಸ್ತು ಕ್ರಮ : ಆರ್ ಅಶೋಕ್

Published

on

ಬೆಂಗಳೂರು: ವಿಧಾನ ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಪರ ಅಡ್ಡ ಮತದಾನ ಮಾಡಿದ ಬಿಜೆಪಿ ಶಾಸಕರನ್ನು ಪತ್ತೆ ಮಾಡಿ ಶಿಸ್ತುಕ್ರಮ ಜರುಗಿಸಲಾಗುತ್ತದೆ ಎಂದು ವಿಪಕ್ಷ ನಾಯಕ ಆರ್ ಅಶೋಕ್ ಹೇಳಿದ್ದಾರೆ.

ಮೇಲ್ಮನೆ ಚುನಾವಚಣೆ ಫಲಿತಾಂಶ ಪ್ರಕಟವಾದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಆರ್ ಅಶೋಕ್, ‘ಬಿಜೆಪಿಯಿಂದ (BJP) ಲಿಂಗರಾಜು ಪಾಟೀಲ್, ರಘು ಕೌಟಿಲ್ಯ ಗೆದ್ದಿದ್ದಾರೆ. ನಮ್ಮ ಮೂರು ವೋಟುಗಳು ಕ್ರಾಸ್ ಆಗಿದೆ ಅಂತ ಮಾಹಿತಿ ಬಂದಿದೆ. ಯಾರು ಕ್ರಾಸ್ ವೋಟು ಹಾಕಿದ್ದಾರೆ ಅಂತ ಗೊತ್ತಾಗುತ್ತೆ. ಅವರ ವಿರುದ್ಧ ಪಕ್ಷದಿಂದ ಶಿಸ್ತು ಕ್ರಮ ನಿಶ್ಚಿತ. ನಮ್ಮ ಒಂದು ಮತ ಅಸಿಂಧು ಆಗಿದೆ. ನಾಲ್ಕು ವೋಟು ಜೆಡಿಎಸ್‌ಗೆ ಕೊಟ್ಟಿದ್ದೀವಿ ಎಂದು ಹೇಳಿದರು.

 

​ ನಮ್ಮಿಂದ ಮೂರು ಮತ ಕ್ರಾಸ್ ಆಗಿರೋದು ನಮಗೆ ಖಚಿತ ಆಗಿದೆ. ಅವರ ವಿರುದ್ಧ ಶಿಸ್ತು ಕ್ರಮ ಆಗುತ್ತೆ. ಯಾರು ಕ್ರಾಸ್ ವೋಟು ಹಾಕಿದ್ದಾರೆ ಅಂತ ಚರ್ಚೆ ಮಾಡ್ತೇವೆ. ಪಕ್ಷದ ವೇದಿಕೆಯಲ್ಲಿ ಚರ್ಚೆ ಮಾಡ್ತೇವೆ. ಆಗ ಯಾರು ಅಡ್ಡಮತದಾನ ಮಾಡಿದ್ದಾರೆ ಅಂತ ಗೊತ್ತಾಗುತ್ತದೆ. ಈ ಫಲಿತಾಂಶಕ್ಕೂ ನಮ್ಮಲ್ಲಿ ಸ್ಥಾನಗಳ ಬದಲಾವಣೆ ಆಗುವುದಕ್ಕೂ ಸಂಬಂಧ ಇಲ್ಲ. ಜೆಡಿಎಸ್‌ಗೆ ನಾಲ್ಕು ವೋಟ್ ಹಾಕಲು ನಾವು ಹೇಳಿದ್ವಿ. ಅವರಿಗೆ ಹಾಕಿದ್ದಾರೆ ಅಂತಾ ಅಂದುಕೊಂಡಿದ್ದೀವಿ ಎಂದರು.

ಬಿವೈ ವಿಜಯೇಂದ್ರ ಹೇಳಿಕೆ ಬಿ.ವೈ.ವಿಜಯೇಂದ್ರ ಮಾತನಾಡಿ, ಚುನಾವಣೆಯಲ್ಲಿ ಗೆದ್ದ ಲಿಂಗರಾಜು ಪಾಟೀಲ್, ರಘು ಕೌಟಿಲ್ಯ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಲಿಂಗಾರಾಜು ಪಾಟೀಲ್‌ಗೆ 30 ಮತ ನಿಗದಿ ಮಾಡಿದ್ವಿ.

ಅದರಲ್ಲಿ ಮೂರು ವೋಟ್ ಅಡ್ಡಮತದಾನವಾಗಿದೆ. ರಘು ಕೌಟಿಲ್ಯಗೆ ಕೊಟ್ಟ 30 ವೋಟ್‌ನಲ್ಲಿ ಒಂದು ವೋಟ್ ಅಸಿಂಧು ಆಗಿದೆ. ಯಾರು ಅಡ್ಡಮತದಾನ ಮಾಡಿದ್ದಾರೆ, ಯಾಕೆ ಮಾಡಿದ್ದಾರೆ ಎಲ್ಲವೂ ಮಾಹಿತಿ ಸಿಕ್ಕ ಮೇಲೆ ಪಕ್ಷ ತೀರ್ಮಾನ ಮಾಡುತ್ತೆ ಎಂದು ತಿಳಿಸಿದರು.

 

Continue Reading
Click to comment

Leave a Reply

Your email address will not be published. Required fields are marked *

Advertisement