Published
10 hours agoon
By
Akkare News
ಈ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷರಾದ ಶ್ರೀಯುತ ಜಯರಾಮ ಕೆದಿಲಾಯ ಶಿಬರ, ಮುಖ್ಯ ಅತಿಥಿಗಳಾದ ಡಾ l ಶೋಭಿತಾ ಸತೀಶ್, ಪ್ರಾಂಶುಪಾಲರು , ವಿವೇಕಾನಂದ ಶಿಕ್ಷಣ ವಿದ್ಯಾಲಯ ಪುತ್ತೂರು, ಶಾಲಾ ಕಾರ್ಯದರ್ಶಿ ಶ್ರೀ ಕೃಷ್ಣಪ್ರಸಾದ್ ಕೆದಿಲಾಯ ಉಪಾಧ್ಯಕ್ಷರಾದ ಶ್ರೀ ಪ್ರಸನ್ನ ಭಟ್ ಎನ್ ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ ಪ್ರಸನ್ನ ಕೆ ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷರಾದ ಶ್ರೀ ಸುರೇಶ್ ಪ್ರಭು ಮತ್ತು ಶಿಕ್ಷಕ ಶಿಕ್ಷಕೇತರ ವೃoದ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. 
ಉಪಾಧ್ಯಕ್ಷರಾದ ಶ್ರೀ ಪ್ರಸನ್ನ ಭಟ್ ಮಾತನಾಡುತ್ತಾ ಗುರು ಎಂಬುದು ಒಂದು ಶಕ್ತಿ , ತತ್ವ. ಭಾರತೀಯ ಸಂಸ್ಕೃತಿಯಲ್ಲಿ ಗುರುವಿಗೆ ಮೊದಲ ಆದ್ಯತೆ. ವೇದ ಎಂದರೆ ಜ್ಞಾನದ ಭಂಡಾರ. ಆ ಭಂಡಾರವನ್ನು ನೀಡಿದವರು ವ್ಯಾಸ ಮಹರ್ಷಿ. ಅವರನ್ನು ನಾವು ನೆನಪಿಸೋಣ ಎಂದರು.
ಶಾಲಾ ಕಾರ್ಯದರ್ಶಿ ಶ್ರೀ ಕೃಷ್ಣಪ್ರಸಾದ್ ಕೆದಿಲಾಯರವರು ಮಾತನಾಡುತ್ತಾ ಇಂದಿನ ಸಂದರ್ಭದಲ್ಲಿ ಒಳ್ಳೆಯ ವಿಚಾರವನ್ನು ತಿಳಿಯಲು ಅವಕಾಶ ದೊರಕಿದೆ. ವೇದದ ಸಾರವನ್ನು ಇಡೀ ಭಾರತದ ಸಂಸ್ಕೃತಿಯಲ್ಲಿ ಅಳವಡಿಸುತ್ತಾ ಇಂತಹ ಸಂಸ್ಕೃತಿಯನ್ನು ಇಡೀ ಭಾರತಕ್ಕೆ ಪಸರಿಸುವ ವಿದ್ಯಾರ್ಥಿಗಳು ನೀವಾಗಿ ಎಂದು ವಿದ್ಯಾರ್ಥಿಗಳಿಗೆ ಗುರುಪೂರ್ಣಿಮೆಯ ಶುಭಾಶಯ ತಿಳಿಸಿದರು.
ಅಧ್ಯಕ್ಷರಾದ ಶ್ರೀ ಜಯರಾಮ ಕೆದಿಲಾಯ ಶಿಬರರವರು ಮಾತನಾಡುತ್ತಾ ವಿದ್ಯೆಯನ್ನು ಮಾನವಕುಲಕ್ಕೆ ಪರಿಚಯಿಸಿದವರು ವ್ಯಾಸರು ನಾವು ಜೀವನದಲ್ಲಿ ಮುಂದೆ ಸಾಗಿದ ಹಾಗೆ ಎಲ್ಲರಲ್ಲೂ ಗುರುಗಳನ್ನು ಕಾಣುತ್ತೇವೆ. ವಿದ್ಯೆ ಪಡೆದ ನಂತರವೂ ವಿದ್ಯಾರ್ಥಿಗಳು ಜ್ಞಾನ ಪಡೆಯಲು ಬೇರೆ ಬೇರೆ ಗುರುವನ್ನು ಅರಸಿಕೊಂಡು ಹೋಗಬೇಕು ಹೀಗೆ ಹೋದವರು ಜ್ಞಾನಿಗಳಗುತ್ತಾರೆ. ಅಂತಹ ಜ್ಞಾನಿಗಳು ನೀವಾಗಿ ಎಂದು ಹಾರೈಸುತ್ತಾ ಸ್ಪೂರ್ತಿಯ ಮಾತುಗಳನ್ನಾಡಿ ಗುರುಪೂರ್ಣಿಮೆಯ ಶುಭಾಶಯ ತಿಳಿಸಿದರು.
ನಂತರ ಜಗದ್ಗುರುಗಳಾದ ಶ್ರೀ ವೇದವ್ಯಾಸ ಮಹರ್ಷಿಗಳ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಲಾಯಿತು.
ಶಾಲಾ ಮುಖ್ಯೋಪಾಧ್ಯಾಯರಾದ ಪ್ರಸನ್ನ ಕೆ ಎಲ್ಲರನ್ನು ಆದರದಿಂದ ಸ್ವಾಗತಿಸಿದರು. ಸಹ ಶಿಕ್ಷಕಿ ಶ್ರೀಮತಿ ಪ್ರಮೀಳಾ ಹಾಗೂ 10ನೇ ತರಗತಿಯ ವಿದ್ಯಾರ್ಥಿ ಪ್ರತೀನ್ ಕೆ ಗುರೂಪೂರ್ಣಿಮೆಯ ಕುರಿತು ಮಾತನಾಡಿದರು. ಸಹ ಶಿಕ್ಷಕಿ ಶ್ರೀಮತಿ ಚೈತ್ರ ಕಾರ್ಯಕ್ರಮ ನಿರೂಪಿಸಿದರು. ಶ್ರೀಮತಿ ಶ್ವೇತಾ ರವರು ಧನ್ಯವಾದ ಗೈದರು.



