Published
3 hours agoon
By
Akkare News

ರಹಸ್ಯ ಬಯಲಾಗಿದ್ದು ಹೇಗೆ? ಇತ್ತೀಚೆಗೆ ಜಿಗ್ನೇಶ್ ಸಂಬಂಧಿಯೊಬ್ಬರು ಆಸ್ಟ್ರೇಲಿಯಾಕ್ಕೆ ಹೋಗಲು ಸಿದ್ಧರಾಗಿದ್ದರು. ಅಲ್ಲಿ ಜಿಗ್ನೇಶ್‌ರನ್ನು ಭೇಟಿಯಾಗಲು ಬಯಸಿ, ಆತನ ಫೋನ್ ನಂಬರ್ ಮತ್ತು ವಿಳಾಸ ನೀಡುವಂತೆ ಪತ್ನಿ ಪೃಥ್ವಿಯನ್ನು ಕೇಳಿದ್ದಾರೆ. ಆದರೆ ಪೃಥ್ವಿ ವಿಳಾಸ ನೀಡದೆ ದಿನ ದೂಡಲು ಶುರುಮಾಡಿದ್ದಾಳೆ. ಅನುಮಾನಗೊಂಡ ಸಂಬಂಧಿಕರು “ಪೋಲಿಸರಿಗೆ ದೂರು ನೀಡುತ್ತೇವೆ” ಎಂದು ಎಚ್ಚರಿಸಿದಾಗ ಬೆದರಿದ ಪತ್ನಿ, 2 ವರ್ಷಗಳ ಹಿಂದೆ ನಡೆದಿದ್ದ ನಿಜವಾದ ಭೀಕರ ಕೃತ್ಯವನ್ನು ಕುಟುಂಬದ ಮುಂದೆ ಬಾಯ್ಬಿಟ್ಟಿದ್ದಾಳೆ!
ಸೈನೈಡ್ ಮದ್ಯ ನೀಡಿ 12 ಅಡಿ ಆಳಕ್ಕೆ ಹೂತುಹಾಕಿದ್ರು! ಘಟನೆ ತಿಳಿದ ತಕ್ಷಣ ಜಿಗ್ನೇಶ್ ಸಹೋದರ ಅಶೋಕ್ ಜುಲೈ 26 ರಂದು ದೂರು ನೀಡಿದ್ದು, ಪೊಲೀಸರು ಪತ್ನಿ ಪೃಥ್ವಿ ಹಾಗೂ ಆಕೆಯ ಪ್ರಿಯಕರ ನೀಲೇಶ್ ನನ್ನು ವಶಕ್ಕೆ ಪಡೆದಿದ್ದಾರೆ. ವಿಚಾರಣೆ ನಡೆಸಿದಾಗ ನಿಜಕ್ಕೂ ಬೆಚ್ಚಿಬೀಳುವ ಸತ್ಯ ಹೊರಬಿದ್ದಿದೆ: ಜಿಗ್ನೇಶ್‌ಗೆ ಮದ್ಯದಲ್ಲಿ ಸೈನೈಡ್ ಬೆರೆಸಿ ಕುಡಿಸಿ ಕೊಲೆ ಮಾಡಲಾಗಿತ್ತು. ಬಳಿಕ ಜಾಮ್‌ನಗರದ ಹೊರವಲಯದಲ್ಲಿದ್ದ ಪಾಳುಬಿದ್ದ ಫ್ಯಾಕ್ಟರಿಯೊಂದರಲ್ಲಿ ಬರೋಬ್ಬರಿ 12 ಅಡಿ ಆಳದ ಗುಂಡಿ ತೋಡಿ ಮೃತದೇಹವನ್ನು ಹೂತುಹಾಕಲಾಗಿತ್ತು. ವಿಶೇಷವೆಂದರೆ, ಆ ಫ್ಯಾಕ್ಟರಿಯನ್ನು ಜಿಗ್ನೇಶ್ ಮತ್ತು ನೀಲೇಶ್ ಇಬ್ಬರೂ ಸೇರಿ ಲೀಸ್‌ಗೆ ಪಡೆದುಕೊಂಡಿದ್ದರು!
ಕಟಕಟೆಗೆ ಆರೋಪಿಗಳು ಪ್ರಸ್ತುತ ಪೊಲೀಸರು ಹಾಗೂ ವಿಧಿವಿಜ್ಞಾನ ತಜ್ಞರು (Forensic Experts) ಘಟನಾ ಸ್ಥಳಕ್ಕೆ ತೆರಳಿ ಮೃತದೇಹದ ಅವಶೇಷಗಳಿಗಾಗಿ ಶೋಧ ಕಾರ್ಯ ನಡೆಸುತ್ತಿದ್ದಾರೆ. ಕರುಳ ಕುಡಿಗಳು ಹಾಗೂ ಕುಟುಂಬಸ್ಥರನ್ನು ನಂಬಿಸಿ ಇಷ್ಟೊಂದು ಕ್ರೂರವಾಗಿ ಪತಿಯನ್ನೇ ಹತ್ಯೆಗೈದ ಇಬ್ಬರೂ ಆರೋಪಿಗಳನ್ನು ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ.




