Connect with us

ಕ್ರೈಮ್ ನ್ಯೂಸ್

ಗಂಡ ‘ಆಸ್ಟ್ರೇಲಿಯಾದಲ್ಲಿದ್ದಾನೆ’ ಎಂದು ನಂಬಿಸಿ 2 ವರ್ಷ ನಾಟಕ! ಪ್ರಿಯಕರನ ಜೊತೆ ಸೇರಿ ಸೈನೈಡ್ ನೀಡಿ ಪತಿಯನ್ನೇ ಹತ್ಯೆಗೈದ ಪತ್ನಿ!

Published

on

“ನನ್ನ ಗಂಡ ಆಸ್ಟ್ರೇಲಿಯಾದಲ್ಲಿದ್ದಾರೆ, ಅಲ್ಲಿ ಕಂಪನಿ ರೂಲ್ಸ್ ತುಂಬಾ ಸ್ಟ್ರಿಕ್ಟ್ ಇದೆ, ಯಾರ ಜೊತೆಯೂ ಫೋನ್‌ನಲ್ಲಿ ಮಾತನಾಡುವಂತಿಲ್ಲ…” ಎಂದು ಬರೋಬ್ಬರಿ ಎರಡು ವರ್ಷಗಳ ಕಾಲ ಇಡೀ ಕುಟುಂಬವನ್ನೇ ನಂಬಿಸಿದ್ದ ಪತ್ನಿಯೊಬ್ಬಳ ಭೀಕರ ರಹಸ್ಯ ಕೊನೆಗೂ ಬಯಲಾಗಿದೆ! ಪ್ರಿಯಕರನ ಜೊತೆಗೂಡಿ ಗಂಡನಿಗೆ ಸೈನೈಡ್ ನೀಡಿ ಕೊಲೆ ಮಾಡಿ, 12 ಅಡಿ ಆಳದ ಗುಂಡಿಯಲ್ಲಿ ಹೂತುಹಾಕಿದ್ದ ಘಟನೆ ಗುಜರಾತ್‌ನ ಜಾಮ್‌ನಗರದಲ್ಲಿ ತೀವ್ರ ಸಂಚಲನ ಮೂಡಿಸಿದೆ.

ಪ್ರಕರಣದ ಹಿನ್ನೆಲೆ: 2 ವರ್ಷಗಳ ಹಿಂದೆ ಕಣ್ಮರೆಯಾಗಿದ್ದ ಜಿಗ್ನೇಶ್! ಜಾಮ್‌ನಗರದ ಜಿಗ್ನೇಶ್ ಎಂಬ ವ್ಯಕ್ತಿ ಎರಡು ವರ್ಷಗಳ ಹಿಂದೆ ದಿಢೀರನೆ ಕಣ್ಮರೆಯಾಗಿದ್ದ. ಕುಟುಂಬಸ್ಥರು ಎಷ್ಟೇ ಪ್ರಯತ್ನಿಸಿದರೂ ಆತನ ಸಂಪರ್ಕ ಸಿಗಲಿಲ್ಲ. ಈ ವೇಳೆ ಆತನ ಪತ್ನಿ ಪೃಥ್ವಿ, “ಜಿಗ್ನೇಶ್ ಆಸ್ಟ್ರೇಲಿಯಾದಲ್ಲಿ ಕೆಲಸ ಮಾಡುತ್ತಿದ್ದಾರೆ. ಅಲ್ಲಿನ ಕಂಪನಿ ನಿಯಮಗಳಿಂದಾಗಿ ಫೋನ್ ಮಾತನಾಡಲು ಸಾಧ್ಯವಾಗುತ್ತಿಲ್ಲ. ಪರ್ಮನೆಂಟ್ ರೆಸಿಡೆನ್ಸಿ (PR) ಸಿಕ್ಕ ಮೇಲೆಯೇ ಅವರು ಭಾರತಕ್ಕೆ ಹಿಂತಿರುಗುತ್ತಾರೆ” ಎಂದು ಕುಟುಂಬದವರನ್ನು ನಂಬಿಸಿ ಕಥೆ ಹೆಣೆದಿದ್ದಳು. ರಹಸ್ಯ ಬಯಲಾಗಿದ್ದು ಹೇಗೆ? ಇತ್ತೀಚೆಗೆ ಜಿಗ್ನೇಶ್ ಸಂಬಂಧಿಯೊಬ್ಬರು ಆಸ್ಟ್ರೇಲಿಯಾಕ್ಕೆ ಹೋಗಲು ಸಿದ್ಧರಾಗಿದ್ದರು. ಅಲ್ಲಿ ಜಿಗ್ನೇಶ್‌ರನ್ನು ಭೇಟಿಯಾಗಲು ಬಯಸಿ, ಆತನ ಫೋನ್ ನಂಬರ್ ಮತ್ತು ವಿಳಾಸ ನೀಡುವಂತೆ ಪತ್ನಿ ಪೃಥ್ವಿಯನ್ನು ಕೇಳಿದ್ದಾರೆ. ಆದರೆ ಪೃಥ್ವಿ ವಿಳಾಸ ನೀಡದೆ ದಿನ ದೂಡಲು ಶುರುಮಾಡಿದ್ದಾಳೆ. ಅನುಮಾನಗೊಂಡ ಸಂಬಂಧಿಕರು “ಪೋಲಿಸರಿಗೆ ದೂರು ನೀಡುತ್ತೇವೆ” ಎಂದು ಎಚ್ಚರಿಸಿದಾಗ ಬೆದರಿದ ಪತ್ನಿ, 2 ವರ್ಷಗಳ ಹಿಂದೆ ನಡೆದಿದ್ದ ನಿಜವಾದ ಭೀಕರ ಕೃತ್ಯವನ್ನು ಕುಟುಂಬದ ಮುಂದೆ ಬಾಯ್ಬಿಟ್ಟಿದ್ದಾಳೆ! ಸೈನೈಡ್ ಮದ್ಯ ನೀಡಿ 12 ಅಡಿ ಆಳಕ್ಕೆ ಹೂತುಹಾಕಿದ್ರು! ಘಟನೆ ತಿಳಿದ ತಕ್ಷಣ ಜಿಗ್ನೇಶ್ ಸಹೋದರ ಅಶೋಕ್ ಜುಲೈ 26 ರಂದು ದೂರು ನೀಡಿದ್ದು, ಪೊಲೀಸರು ಪತ್ನಿ ಪೃಥ್ವಿ ಹಾಗೂ ಆಕೆಯ ಪ್ರಿಯಕರ ನೀಲೇಶ್‌ ನನ್ನು ವಶಕ್ಕೆ ಪಡೆದಿದ್ದಾರೆ. ವಿಚಾರಣೆ ನಡೆಸಿದಾಗ ನಿಜಕ್ಕೂ ಬೆಚ್ಚಿಬೀಳುವ ಸತ್ಯ ಹೊರಬಿದ್ದಿದೆ: ಜಿಗ್ನೇಶ್‌ಗೆ ಮದ್ಯದಲ್ಲಿ ಸೈನೈಡ್ ಬೆರೆಸಿ ಕುಡಿಸಿ ಕೊಲೆ ಮಾಡಲಾಗಿತ್ತು. ಬಳಿಕ ಜಾಮ್‌ನಗರದ ಹೊರವಲಯದಲ್ಲಿದ್ದ ಪಾಳುಬಿದ್ದ ಫ್ಯಾಕ್ಟರಿಯೊಂದರಲ್ಲಿ ಬರೋಬ್ಬರಿ 12 ಅಡಿ ಆಳದ ಗುಂಡಿ ತೋಡಿ ಮೃತದೇಹವನ್ನು ಹೂತುಹಾಕಲಾಗಿತ್ತು. ವಿಶೇಷವೆಂದರೆ, ಆ ಫ್ಯಾಕ್ಟರಿಯನ್ನು ಜಿಗ್ನೇಶ್ ಮತ್ತು ನೀಲೇಶ್ ಇಬ್ಬರೂ ಸೇರಿ ಲೀಸ್‌ಗೆ ಪಡೆದುಕೊಂಡಿದ್ದರು! ಕಟಕಟೆಗೆ ಆರೋಪಿಗಳು ಪ್ರಸ್ತುತ ಪೊಲೀಸರು ಹಾಗೂ ವಿಧಿವಿಜ್ಞಾನ ತಜ್ಞರು (Forensic Experts) ಘಟನಾ ಸ್ಥಳಕ್ಕೆ ತೆರಳಿ ಮೃತದೇಹದ ಅವಶೇಷಗಳಿಗಾಗಿ ಶೋಧ ಕಾರ್ಯ ನಡೆಸುತ್ತಿದ್ದಾರೆ. ಕರುಳ ಕುಡಿಗಳು ಹಾಗೂ ಕುಟುಂಬಸ್ಥರನ್ನು ನಂಬಿಸಿ ಇಷ್ಟೊಂದು ಕ್ರೂರವಾಗಿ ಪತಿಯನ್ನೇ ಹತ್ಯೆಗೈದ ಇಬ್ಬರೂ ಆರೋಪಿಗಳನ್ನು ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ.

 
 

Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version