Published
7 months agoon
By
Akkare News
ಸುಬ್ರಹ್ಮಣ್ಯದ ಮಠದಲ್ಲಿ ಸರ್ಪ ಸಂಸ್ಕಾರ ಪೂಜೆ ಮಾಡುವ ಸುಬ್ರಹ್ಮಣ್ಯ ಗ್ರಾಮದ ಕುಲ್ಕುಂದದ ಪ್ರವೀಣ್‌ಕುಮಾರ್ ಅವರ ಮನೆಯಲ್ಲಿ ಕಳವು ನಡೆದಿದ್ದು, ಆ.6ರಂದು ಪ್ರವೀಣ್ ಅವರು ಕಪಾಟಿನ ಕೀಯನ್ನು ತೆಗೆದು ನೋಡಿದ ವೇಳೆ ಕಳ್ಳತನವಾಗಿರುವುದು ಬೆಳಕಿಗೆ ಬಂದಿದೆ.
ಇಲ್ಲಿನ ನಿವಾಸಿಯಾದ ಅರ್ಚಕರೊಬ್ಬರ ಮನೆಯಲ್ಲಿ ₹18 ಲಕ್ಷ ನಗದು ಹಾಗೂ ₹31.65 ಲಕ್ಷ ಮೌಲ್ಯದ ಚಿನ್ನಾಭರಣ ಕಳ್ಳತನ ಆಗಿರುವ ಬಗ್ಗೆ ಸುಬ್ರಹ್ಮಣ್ಯ ಠಾಣೆಯಲ್ಲಿ ಶನಿವಾರ ಪ್ರಕರಣ ದಾಖಲಾಗಿದೆ.
ಮಗನ ಪೂಜಾ ಕಾರ್ಯಕ್ರಮದ ಖರ್ಚಿಗಾಗಿ ಮನೆಯ ಕಪಾಟಿನಲ್ಲಿಟ್ಟಿದ್ದ ₹18 ಲಕ್ಷ ನಗದು ಹಾಗೂ ₹13.65 ಲಕ್ಷ ಮೌಲ್ಯದ 273 ಗ್ರಾಂ ಚಿನ್ನಾಭರಣ ಕಳವಾಗಿದೆ ಎಂದು ಪ್ರವೀಣ್‌ಕುಮಾರ್ ಅವರು ಸುಬ್ರಹ್ಮಣ್ಯ ಠಾಣೆಗೆ ದೂರು ನೀಡಿದ್ದಾರೆ.
ಘಟನಾ ಸ್ಥಳಕ್ಕೆ ಪೊಲೀಸ್ ಇನ್‌ಸ್ಪೆಕ್ಟರ್, ಪೊಲೀಸ್ ಅಧಿಕಾರಿಗಳು ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.