Published
2 hours agoon
By
Akkare News
ಸೀಟ್ ಕವರ್ ಹರಿದು ಚಿನ್ನಕ್ಕಾಗಿ ಹುಡುಕಾಟ: ಬಂಟ್ವಾಳ ಪರಿಸರದಲ್ಲಿ ಅನಾಥವಾಗಿ ಬಿದ್ದಿದ್ದ ಕಾರನ್ನು ವಶಕ್ಕೆ ಪಡೆದಿರುವ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ದರೋಡೆಕೋರರು ಕಾರಿನಲ್ಲಿದ್ದ ಸೀಟ್ ಕವರ್‌ಗಳನ್ನು ಹರಿದು ಹಾಕಿ, ಕಾರಿನ ಮೂಲೆ ಮೂಲೆಗಳನ್ನೂ ಸಂಪೂರ್ಣವಾಗಿ ಜಾಲಾಡಿರುವುದು ಗೊತ್ತಾಗಿದೆ. ಕಾರಿನ ಒಳಗೆ ಬೇರೆ ಯಾವುದಾದರೂ ಗುಪ್ತ ಜಾಗದಲ್ಲಿ ಚಿನ್ನ ಅಥವಾ ನಗದು ಇಡಲಾಗಿದೆಯೇ ಎಂದು ಹುಡುಕಲು ಖದೀಮರು ಈ ಕೃತ್ಯ ಎಸಗಿದ್ದಾರೆ ಎಂದು ತಿಳಿದು ಬಂದಿದೆ.
ಕಾರಿನಲ್ಲಿದ್ದ ಸುಮಾರು 180 ಗ್ರಾಂ ಚಿನ್ನದ ಆಭರಣಗಳು, ನಗದು ಸೇರಿ ಒಟ್ಟು 20 ಲಕ್ಷ ರೂಪಾಯಿ ಸೊತ್ತನ್ನು ದರೋಡೆಕೋರರು ಲೂಟಿ ಮಾಡಿದ್ದಾರೆ ಎಂದು ವಿಕಾಸ್ ಸುರತ್ಕಲ್ ಪೊಲೀಸ್ ಠಾಣೆಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.