Connect with us

ಕ್ರೈಮ್ ನ್ಯೂಸ್

ಹುಡುಗಿಗೆ ಸರ್ಕಾರ ನೌಕರನ ಜೊತೆ ಮದುವೆಯ ಕನಸು… ಕೋಟಿ ಖರ್ಚಿನ ಅದ್ದೂರಿ ಮದುವೆ… … 7 ತಿಂಗಳಲ್ಲಿ ಹುಡುಗಿ ನಾಲೆಗೆ ಹಾರಿದಳು..!!!

Published

on

ಚೆಂದದ ಮಗಳನ್ನು ಗಿಳಿಯಂತೆ ಪ್ರೀತಿಯಿಂದ ಸಾಕಿದ್ದ ಪೋಷಕರು ಗಿಡುಗನ ಕೈಗೆ ಕೊಟ್ಟು ತಪ್ಪು ಮಾಡಿಬಿಟ್ರಾ? ಸರ್ಕಾರಿ ಕೆಲಸದವನೇ ಬೇಕು ಎಂದು ಮದುವೆಯಾದವಳು 7 ತಿಂಗಳಿಗೆ ಮಸಣ ಸೇರಿದ್ದಾಳೆ.

ಶಿವಮೊಗ್ಗ (ನ.27): ತಮ್ಮ ಮಗಳಿಗೆ ಸರ್ಕಾರಿ ಕೆಲಸದಲ್ಲಿರುವ ಹುಡುಗನೇ ಬೇಕೆಂದು ಹುಡುಕಿ-ಹುಡುಕಿ ವರನನ್ನು ಕರೆತಂದು ಮದುವೆ ಮಾಡಿದವರು ಇಂದು ಮಗಳನ್ನೇ ಕಳೆದುಕೊಂಡು ಕಣ್ಣೀರು ಹಾಕುವಂತೆ ಆಗಿದೆ. ಗಂಡ ಹಾಗೂ ಅತ್ತೆ-ಮಾವನ ಕಿರುಕುಳಕ್ಕೆ ಬೇಸತ್ತು ಮದುವೆಯಾದ ಏಳೇ ತಿಂಗಳಿಗೆ ಯುವತಿ ಆತ್ಮಹತ್ಯೆ ಶರಣಾಗಿದ್ದಾರೆ ಎಂದು ವರದಿ ಆಗಿದೆ. ಡೆತ್​​​ ನೋಟ್​ ಬರೆದಿಟ್ಟ ಲತಾ ಎಂಬಾಕೆ ನಾಲೆಗೆ ಹಾರಿ ಪ್ರಾಣ ಕಳೆದುಕೊಂಡಿದ್ದಾರೆ ಎಂದು ಕುಟುಂಬಸ್ಥರು ಮಾಹಿತಿ ನೀಡಿದ್ದಾರೆ.

ಸರ್ಕಾರಿ ನೌಕರನ ವಿರುದ್ಧ ಕಿರುಕುಳ ಆರೋಪ

ಚೆಂದದ ಮಗಳನ್ನು ಗಿಳಿಯಂತೆ ಪ್ರೀತಿಯಿಂದ ಸಾಕಿದ್ದ ಪೋಷಕರು ಗಿಡುಗನ ಕೈಗೆ ಕೊಟ್ಟು ತಪ್ಪು ಮಾಡಿಬಿಟ್ರಾ? ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲೂಕಿನ ಡಿಬಿ ಹಳ್ಳಿಯ ಪರಮೇಶ್ವರಪ್ಪ- ರುದ್ರಮ್ಮ ದಂಪತಿಯ ಪುತ್ರಿ ಲತಾ ಎಂಬವವರನ್ನ ದಿಂಡದ ಹಳ್ಳಿಯ ಗುರುರಾಜ್​ ಎಂಬಾತನಿಗೆ ಕೊಟ್ಟು ಅದ್ಧೂರಿಯಾಗಿ ಮದುವೆ ಮಾಡಿದ್ರು. ಆರೋಪಿ ಗುರುರಾಜ್​​ ಕೆಪಿಸಿಎಲ್ ಎಇಇ ಆಗಿ ಕೆಲಸ ಮಾಡ್ತಿದ್ದರಂತೆ. ಮಗಳು ಸುಖವಾಗಿರಲಿ ಅಂತ ಲಕ್ಷ ಲಕ್ಷ ಖರ್ಚು ಮಾಡಿ ಮದುವೆ ಮಾಡಿಕೊಟ್ಟಿದ್ರು. ಆದ್ರೆ ಗಂಡ ಗುರುರಾಜ್​ ಮದುವೆಯಾದ ಬಳಿಕ ಲತಾಗೆ ಕೊಡಬಾರದ ಚಿತ್ರಹಿಂಸೆ ಕೊಟ್ಟಿದ್ದಾನೆ ಎನ್ನುವ ಆರೋಪವನ್ನ ಕುಟುಂಬಸ್ಥರು ಮಾಡಿದ್ದಾರೆ. ಸರ್ಕಾರಿ ನೌಕರ ಅಂತ 60 ಲಕ್ಷ ಕೊಟ್ಟು ಮಗಳ ಮದುವೆ ಮಾಡಿದ್ರು ಕಿರುಕುಳ ತಪ್ಪಲಿಲ್ಲ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.


Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version