Connect with us

ಕ್ರೈಮ್ ನ್ಯೂಸ್

ಮಹಿಳೆಗೆ ದೂರವಾಣಿ ಕರೆ ಮಾಡಿದ ಅಪರಿಚಿತರು:ಒಟಿಪಿ ಪಡೆದು ಲಕ್ಷಾಂತರ ರೂಪಾಯಿ ಎಗರಿಸಿದ ಸೈಬರ್‌ ಖದೀಮರು!

Published

on

ಪುತ್ತೂರು: ಬ್ಯಾಂಕ್‌ ಖಾತೆ ತಡೆ ಹಿಡಿಯಲಾಗಿದ್ದು, ಇದನ್ನು ಸರಿಪಡಿಸಬೇಕಾಗಿದೆ ಎಂದು 73 ವರ್ಷದ ಮಹಿಳೆಗೆ ದೂರವಾಣಿ ಕರೆ ಮಾಡಿದ ಅಪರಿಚಿತರು ಅವರಿಂದ ಒಟಿಪಿ ಪಡೆದು ಲಕ್ಷಾಂತರ ರೂ. ಅನ್ನು ತಮ್ಮ ಖಾತೆಗೆ ವರ್ಗಾಯಿಸಿದ ಘಟನೆ ಪುತ್ತೂರಿನಲ್ಲಿ ನಡೆದಿದೆ.

ಚಿಕ್ಕಮುಟ್ನೂರು ಗ್ರಾಮದ ಊರಮಾಲಿನ ಮಹಿಳೆಯೋರ್ವರು ಜು.22ರಂದು ಪುತ್ತೂರು ಕೆನರಾ ಬ್ಯಾಂಕ್‌ಗೆ ಹೋಗಿ ತನ್ನ ಖಾತೆಯಿಂದ 15 ಸಾವಿರ ರೂ. ಅನ್ನು ವಿತ್‌ ಡ್ರಾ ಮಾಡಿಕೊಂಡು ಮನೆಗೆ ಬಂದಿದ್ದರು. ಬಳಿಕ ಅವರ ಮೊಬೈಲ್‌ಗೆ ಕೆನರಾ ಬ್ಯಾಂಕ್‌ನಿಂದ ಮಾತನಾಡುತ್ತಿದ್ದೇವೆ ಎಂದು ಕರೆಯೊಂದು ಬಂದಿದ್ದು, ನಿಮ್ಮ ಖಾತೆಯನ್ನು ತಡೆಹಿಡಿಯಲಾಗಿದೆ. ಅದನ್ನು ಸರಿಪಡಿಸಲು ನಿಮ್ಮ ಮೊಬೈಲ್‌ಗೆ ಬರುವ ಒಟಿಪಿಯನ್ನು ತಿಳಿಸುವಂತೆ ಮಹಿಳೆಯನ್ನು ನಂಬಿಸಿ 7 ಬಾರಿ ಒಟಿಪಿ ಪಡೆದು ಮಹಿಳೆಯ ಖಾತೆಯಲ್ಲಿದ್ದ 1,36,257 ರೂ. ಅನ್ನು ಅರೋಪಿಗಳು ತಮ್ಮ ಖಾತೆಗೆ ವರ್ಗಾಯಿಸಿಕೊಂಡಿದ್ದಾರೆ. ಘಟನೆ ಕುರಿತು ಮಹಿಳೆ ನೀಡಿದ ದೂರಿನಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.


 

Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version