Published
1 day agoon
By
Akkare News
ಇದರಿಂದ ಸುತ್ತಮುತ್ತಲ ಗ್ರಾಮಗಳಿಗೆ ವಿದ್ಯುತ್ ಪೂರೈಕೆ ಸ್ಥಗಿತಗೊಂಡಿತ್ತು. ವಿಷಯ ತಿಳಿದ ತಕ್ಷಣ ಸ್ಥಳಕ್ಕಾಗಮಿಸಿದ ಬೆಟ್ಟಂಪಾಡಿ ಮೆಸ್ಕಾಂ ಉಪವಿಭಾಗದ ಲೈನ್ ಮ್ಯಾನ್ ಬಂದೇ ನವಾಜ್, ರಿಸ್ಕ್ ತೆಗೆದುಕೊಂಡು ಭೋರ್ಗರೆಯುತ್ತಿದ್ದ ಸೀರೆ ನದಿಯಲ್ಲಿ ಈಜಿ ಸಾಗಿ ವಿದ್ಯುತ್ ತಂತಿಯನ್ನು ಮರುಜೋಡಿಸಿದ್ದಾರೆ.
ಲೈನ್ ಮ್ಯಾನ್ ಬಂದೇ ನವಾಜ್ ಅವರ ಈ ಸಾಹಸಮಯ ಕರ್ತವ್ಯ ಪ್ರಜ್ಞೆಯ ವಿಡಿಯೋ ಪ್ರಸ್ತುತ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದ್ದು, ಸಾರ್ವಜನಿಕರಿಂದ ಹಾಗೂ ಮೆಸ್ಕಾಂ ಹಿರಿಯ ಅಧಿಕಾರಿಗಳಿಂದ ವ್ಯಾಪಕ ಶ್ಲಾಘನೆ ವ್ಯಕ್ತವಾಗಿದೆ.



