Published
21 hours agoon
By
Akkare News
ಮಂಗಳೂರು ಪ್ರೆಸ್ ಕ್ಲಬ್ನಲ್ಲಿ ಸೋಮವಾರ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಂದೂ ಹೆಣ್ಣುಮಗಳಿಗೆ ಅನ್ಯಾಯವಾಗಿದೆ ಎಂದು ಆರೋಪಿಸಿ ‘ಪುತ್ತೂರು ಚಲೋ’ ಕಾರ್ಯಕ್ರಮ ಆಯೋಜಿಸಿರುವ ಬಿಜೆಪಿ ಹಾಗೂ ಹಿಂದೂ ಸಂಘಟನೆಗಳ ನಾಯಕರಿಗೆ ನನ್ನನ್ನು ಆಹ್ವಾನಿಸುವ ಯಾವುದೇ ನೈತಿಕತೆ ಇಲ್ಲ ಎಂದು ಕೆಪಿಸಿಸಿ ವಕ್ತಾರೆ ಹಾಗೂ ಕಾಂಗ್ರೆಸ್ ನಾಯಕಿ ಪ್ರತಿಭಾ ಕುಳಾಯಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪುತ್ತೂರಿನ ಬಿಜೆಪಿ ಮುಖಂಡನ ಪುತ್ರ ಕೃಷ್ಣ ಜೆ. ರಾವ್ ಎಂಬಾತನಿಂದ ವಂಚನೆಗೊಳಗಾಗಿ ಗರ್ಭಿಣಿಯಾಗಿ ಮಗುವಿಗೆ ತಾಯಿಯಾಗಿರುವ ಯುವತಿ ಹಾಗೂ ಆಕೆಯ ಕುಟುಂಬವು ನ್ಯಾಯಕ್ಕಾಗಿ ಪುತ್ತೂರಿನ ಬಿಜೆಪಿ ನಾಯಕರ ಮನೆಮನೆಗೆ ಅಲೆದಿದೆ. ಆದರೆ ಆ ಸಂದರ್ಭದಲ್ಲಿ ಯಾರೊಬ್ಬರೂ ಆಕೆಗೆ ಬೆಂಬಲವಾಗಿ ನಿಲ್ಲಲಿಲ್ಲ. ತಾಕತ್ತಿದ್ದರೆ ಆ ಯುವತಿಗೆ ಬಿಜೆಪಿ ಮುಖಂಡನ ಪುತ್ರನ ಜೊತೆ ಮದುವೆ ಮಾಡಿಸಿ ನ್ಯಾಯ ಒದಗಿಸಿಕೊಡಿ,” ಎಂದು ನೇರ ಸವಾಲು ಹಾಕಿದರು.
ರಾಜಕೀಯ ಲಾಭಕ್ಕಾಗಿ ಹಾಗೂ ಕೋಮುಗಲಭೆ ಎಬ್ಬಿಸಲು ಸಣ್ಣ ವಿಷಯಗಳನ್ನು ಹಿಡಿದು ಪ್ರತಿಭಟನೆ ನಡೆಸುತ್ತಿರುವ ಬಿಜೆಪಿ ನಾಯಕರಿಗೆ ನನ್ನನ್ನು ಆಹ್ವಾನಿಸುವ ಯಾವುದೇ ಹಕ್ಕಿಲ್ಲ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಯಾವುದೇ ಹೆಣ್ಣುಮಗಳಿಗೆ ಅನ್ಯಾಯವಾದಾಗಲೂ ನಾನು ಆಕೆಯ ಪರವಾಗಿ ಧ್ವನಿ ಎತ್ತಿದ್ದೇನೆ. ಈ ಪುತ್ತೂರು ಚಲೋ ಕಾರ್ಯಕ್ರಮದ ಬಳಿಕ ಪ್ರತಿಭಟನಾಕಾರರು ಸಂತ್ರಸ್ತೆಗೆ ಅನ್ಯಾಯ ಎಸಗಿರುವ ಜಗನ್ನಿವಾಸ್ ಅವರ ಮನೆಗೆ ಮುತ್ತಿಗೆ ಹಾಕಲು ಬರುವುದಾದರೆ, ನಾನು ಖುದ್ದಾಗಿ ಈ ಪ್ರತಿಭಟನೆಗೆ ಬೆಂಬಲ ನೀಡುತ್ತೇನೆ. ಆ ಪ್ರಕರಣವನ್ನು ಬಗೆಹರಿಸದೆ ನನ್ನ ಬಗ್ಗೆ ಮಾತನಾಡಲು ಯಾರಿಗೂ ಅರ್ಹತೆಯಿಲ್ಲ ಎಂದು ಪ್ರತಿಭಾ ಕುಳಾಯಿ ಸ್ಪಷ್ಟಪಡಿಸಿದರು.



