Published
3 hours agoon
By
Akkare News
ಶಾಲಾ ಶಿಕ್ಷಣ ಇಲಾಖೆ, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್, ಉಪನಿರ್ದೇಶಕರ ಕಛೇರಿ ಆಡಳಿತ ದಕ್ಷಿಣ ಕನ್ನಡ ಮತ್ತು ವಿಠಲ ಜೆಸಿಸ್ ಪ್ರೌಢಶಾಲೆ ವಿಟ್ಲ ಇದರ ಸಂಯುಕ್ತ ಆಶ್ರಯದಲ್ಲಿ ನಡೆದ ಪುತ್ತೂರು ನಗರ ವಲಯ ಮಟ್ಟದ 17ರ ವಯೋಮಾನದ ಬಾಲಕ ಬಾಲಕಿಯರ ಕಬಡ್ಡಿ ಪಂದ್ಯಾಟದಲ್ಲಿ ಬೆಥನಿ ಆಂಗ್ಲ ಮಾಧ್ಯಮ ಶಾಲೆ ದರ್ಬೆ ಪುತ್ತೂರು ಇಲ್ಲಿನ ವಿದ್ಯಾರ್ಥಿಗಳಳು 17 ವಯೋಮಾನದ ಬಾಲಕಿಯರ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದು ಮೈಸೂರು ವಿಭಾಗ ಮಟ್ಟಕ್ಕೆ ಆಯ್ಕೆಯಾಗಿದೆ.ಜುಏನಾ ಡ್ಯಾಝಲ್ ಕುಟಿನ್ಹ ,ಸನ್ನಿಧಿ,ಹಾರ್ದಿಕ ಪಿ,ಜೆನಿಟ ಸಿಂಧು ಪಸನ್ನ,ಧನ್ಯ ಶ್ರೀ,ಜನನಿ ಪಿ ಗೌಡ,ಆಯಿಷತ್ ಶಹೀಮ,ಫಾತಿಮತ್ ಅಫ್ರಾ,ಹೆಚ್ ನಮೃತಾ ಶೆಟ್ಟಿ, ಉತ್ತಮ ಪ್ರದರ್ಶನ ನೀಡಿದರು .ಜುಏನಾ ಡ್ಯಾಝಲ್ ಕುಟಿನ್ಹಾ ಸವ್ಯಸಾಚಿ ಆಟಗಾರ್ತಿ ಹಾಗೂ ಸನ್ನಿಧಿ ಉತ್ತಮ ಹಿಡಿತಗಾರ್ತಿ ಪ್ರಶಸ್ತಿ ಪಡೆದುಕೊಂಡರು. 
ಶಾಲಾ ಮುಖ್ಯ ಶಿಕ್ಷಕಿ ಭಗಿನಿ ಅನಿತಾ ಟ್ರೆಸ್ಸಿ ಯವರ ಮಾರ್ಗದರ್ಶನದಲ್ಲಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಶಿಕ್ಷಕ ರಾಷ್ಟ್ರೀಯ ಕಬಡ್ಡಿ ತರಬೇತುದಾರ ಬಾಲಕೃಷ್ಣ ರೈ ಪೊರ್ದಾಲ್ ತರಬೇತಿ ನೀಡಿದ್ದಾರೆ.



