Connect with us

ಶಾಲಾ ಚಟುವಟಿಕೆ

ಎವಿಜಿ ಶಾಲೆಯಲ್ಲಿ ಗುರು ಪೂರ್ಣಿಮೆ ಆಚರಣೆ

Published

on

ಪುತ್ತೂರು ಬನ್ನೂರಿನ ಕೃಷ್ಣ ನಗರದ ಎವಿಜಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ದಿನಾಂಕ 10.07.2025 ರಂದು ವೇದವ್ಯಾಸರಜನ್ಮದಿನವಾದ ಗುರು ಪೂರ್ಣಿಮೆಯನ್ನು ಆಚರಿಸಲಾಯಿತು. ಮುಖ್ಯ ಅತಿಥಿಗಳಾಗಿದ್ದ ನಿವೃತ್ತ ಪಂಚಾಯತ್ ಅಧಿಕಾರಿಯದ ಶ್ರೀ ಸುಂದರ ಗೌಡ ಕಳುವಾಜೆರವರು ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿ, ದಿನದ ಮಹತ್ವದ ಸಂದೇಶವನ್ನು ನೀಡಿದರು. ಆಧ್ಯಾತ್ಮಿಕ ಗುರುವಾದ ವೇದವ್ಯಾಸರು ವೇದವನ್ನು ವಿಭಾಗ ಮಾಡಿ ಅವುಗಳಿಗೆ ಪ್ರಸರಣ ಕೊಟ್ಟು ಆ ಜ್ಞಾನವನ್ನು ಲೋಕಕ್ಕೆ ಸಮರ್ಪಿಸಿದರು. ಅವರ ಜ್ಞಾನ ಅನುಪಮ ಮತ್ತು ಮಹತ್ವವಾಗಿದ್ದು ಎಂದರು. ಇದು ಇವತ್ತಿನ ಎಲ್ಲಾ ಲೌಕಿಕ ಗುರುಗಳಿಗೆ ಆದರ್ಶ ಎಂದರು.

ಸಭೆಯ ಅಧ್ಯಕ್ಷತೆಯನ್ನು ಶಾಲಾ ಅಧ್ಯಕ್ಷರಾದ ಶ್ರೀ ವೆಂಕಟರಮಣಗೌಡ ಕಳುವಾಜೆ ವಹಿಸಿದ್ದು ಯುಗಗಳಿಗೆ ಜ್ಞಾನವನ್ನು ಪಸರಿಸಿರುವ ವೇದವ್ಯಾಸ ಎಣಿಸಿದ ಕೃಷ್ಣ ದೈಪಾಯನವು ಜ್ಞಾನದ ನಿಧಿ ಮತ್ತು ಬದುಕಿನ ಸಾರವನ್ನು ನೀಡಿದರು ಎಂದರು. ವೇದಿಕೆಯಲ್ಲಿ ಶಾಲಾ ಸಂಚಾಲಕರಾದ ಎ.ವಿ ನಾರಾಯಣ, ಆಡಳಿತ ಅಧಿಕಾರಿಯಾದ ಗುಡ್ಡಪ್ಪ ಗೌಡ ಬಲ್ಯ, ಶಾಲಾ ನಿರ್ದೇಶಕರಾದ ಡಾಕ್ಟರ್ ಶ್ರೀಮತಿ ಅನುಪಮಾ, ಶ್ರೀಮತಿ ಪ್ರತಿಭಾ ದೇವಿ, ಹಾಗೂ ಶ್ರೀಮತಿ ಹೇಮಾವತಿ ಕಳುವಾಜೆ, ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷರಾದ ಸೌಮ್ಯಶ್ರೀ ಹೆಗಡೆ, ಮತ್ತು ಶಾಲಾ ಪ್ರಾಂಶುಪಾಲರಾದ ಅಮರನಾಥ ಪಟ್ಟೆ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ವಿದ್ಯಾರ್ಥಿನಿಯರಾದ ಕುಮಾರಿ ಜೋಶ್ನಾ ಮತ್ತು ತಂಡ ಪ್ರಾರ್ಥಿಸಿದರು, ಶಿಕ್ಷಕಿ ಶ್ರೀಮತಿ ರಂಜಿತಾ ರೈ ಸ್ವಾಗತಿಸಿದರು. ಶಿಕ್ಷಕಿ ಶ್ರೀಮತಿ ರಾಧಾ ಅತಿಥಿ ಪರಿಚಯ ಮಾಡಿದರು, ಶಿಕ್ಷಕಿ ಶ್ರೀಮತಿ ರೀಮಾ ಲೋಬೊ ರವರು ವಂದನಾರ್ಪಣೆಗೈದು, ಶಿಕ್ಷಕಿ ಶ್ರೀಮತಿ ಯಶುಭ ಕಾರ್ಯಕ್ರಮ ವನ್ನು ನಿರೂಪಿಸಿದರು.

 

 

Continue Reading
Click to comment

Leave a Reply

Your email address will not be published. Required fields are marked *

Advertisement