Published
7 months agoon
By
Akkare News
ಮೂಡುಬಿದಿರೆ: ಜನಸೇವೆಯೇ ಜನಾರ್ಧನ ಸೇವೆ ಎಂಬಂತೆ ಇಂದು ಆರದಿರಲಿ ಬದುಕು ಆರಾಧನ ತಂಡದ ಜುಲೈ ತಿಂಗಳ 100 ನೇ ಯೋಜನೆಯ ಸಹಾಯ ಹಸ್ತ ವನ್ನು ಮೂಡುಬಿದಿರೆ ತಾಲೂಕಿನ ಇರುವೈಲ್ ನಿವಾಸಿ ಶಾರದ ಅವರಿಗೆ ನೀಡಲಾಯಿತು.


ಇವರು ಎರಡುಕಿಡ್ನಿ ವೈಫಲ್ಯ ದಿಂದ ಬಳಲುತ್ತಿದ್ದು ಆಳ್ವಾಸ್ ನಲ್ಲಿ ವಾರಕ್ಕೆ ಎರಡು ಸಲ ಡಯಾಲಿಸಿಸ್ ಮಾಡುತ್ತಿದ್ದು ಅವರು ಕಡು ಬಡವರಾಗಿದ್ದು ಅವರ ಕಷ್ಟ ಅರಿತ ನಮ್ಮ ತಂಡ ಅವರ ಮನೆಗೆ ಭೇಟಿ ನೀಡಿ ಸಹಾಯ ಹಸ್ತ ನೀಡಲಾಯಿತು.



ಈ ಸಂದರ್ಭದಲ್ಲಿ ತಂಡದ ನಿರ್ದೇಶಕಿ ಪದ್ಮಶ್ರೀ ಭಟ್ ನಿಡ್ಡೋಡಿ, ಅಭಿಷೇಕ್ ಶೆಟ್ಟಿ ಐಕಳ, ಸದಸ್ಯರಾದ ದೀನ್ ರಾಜ್ ಬಸವರಾಜ ಅರುಣ್ ಅಜೆಕಾರು ಭಾಸ್ಕರ ದೇವಾಡಿಗ , ಗಣೇಶ್ ಪೈ . ಡಾ.ನಾಗರಾಜ ಶೆಟ್ಟಿ ಅಂಬೂರಿ , ಧನಂಜಯ ಶೆಟ್ಟಿ., ನಿಲೇಶ್ ಕಟೀಲು, ಪ್ರವೀಣ್ ಬಂಗೇರ , ಶ್ರೀಕಾಂತ ಭಟ್ ಪೊನ್ನ ಗಿರಿ , ಪ್ರಭಾಕರ ಮಂಗಳೂರು, ದಯಾನಂದ ಮಡ್ಕೇಕರ್, ಬೀಮಯ್ಯ ಸುಳ್ಯ, ಅಗರಿ ರಾಘವೇಂದ್ರ ರಾವ್, ಭಾಸ್ಕರ ದೇವಸ್ಯ , ದಿನೇಶ್ ಸಿದ್ದಕಟ್ಟೆ, ನಾಗರಾಜ ಸಾಲ್ಯಾನ್ ಶಾರದಾ ಅಂಚನ್, ರಂಗನಾಥ್ ರಾವ್ ಪಕ್ಷಿಕೆರೆ ಉಪಸ್ಥಿತರಿದ್ದರು.









