Published
5 months agoon
By
Akkare News
ಪುತ್ತೂರು: ಬೆಂಗಳೂರು ತುಳು ಕೂಟ ಸಂಘಟನೆಯ ಅಧ್ಯಕ್ಷ ಸುಂದರ್ ರಾಜ್ ರೈ ನಿಧನಕ್ಕೆ ಶಾಸಕ ಅಶೋಕ್ ರೈ ತೀವ್ರ ಸಂತಾಪ ವ್ಯಕ್ತಪಡಿಸಿದರು.


ಶಾಸಕರ ಆತ್ಮೀಯರಾಗಿದ್ದ ಇವರು ಬೆಳಗಳೂರು ಕಂಬಳದ ಪ್ರೇರಕ ಶಕ್ತಿಯಾಗಿದ್ದರು. ತುಳುವಿಗಾಗಿ, ಕರಾವಳಿ ಸಂಸ್ಕೃತಿಯ ಉಳಿವಿಗಾಗಿ ಹೋರಾಡಿದವರು.ಮೊನ್ನೆ ಜನಮನ ಕಾರ್ಯಕ್ರಮಕ್ಕೆ ಬಂದು ಸಂಜೆ ತನಕ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಓರ್ವ ಸಜ್ಜನ ಪ್ರಾಮಾಣಿಕ ವ್ಯಕ್ತಿ ಮಾತ್ರವಲ್ಲ ತುಳುನಾಡಿನ ಒಂದು ಶಕ್ತಿಯೂ ಆಗಿದ್ದ ಸುಂದರ್ ರಾಜ್ ರೈ ಅವರ ನಿಧನ ಅತ್ಯಂತ ದು:ಖವನ್ನು ತಂದಿದೆ. ಕುಟುಂಬಕ್ಕೆ ನೋವನ್ನು ಸಹಿಸುವ ಶಕ್ತಿಯನ್ನು ಭಗವಂತ ಕರುಣಿಸಲಿ ಎಂದು ಸಂತಾಪ ಸೂಚಿಸಿದ್ದಾರೆ.





