Published
4 hours agoon
By
Akkare News
ಯಾರ್ಯಾರು ಪಕ್ಷದ ವಿರುದ್ದ ಕೆಲಸ ಮಾಡಿದ್ದಾರೆ ಅಂತವರ ವಿರುದ್ಧ ಶಿಸ್ತು ಕ್ರಮ ತೆಗೆದುಕೊಳ್ಳಬೇಕು. ಕೆಲವು ವ್ಯಕ್ತಿಗಳ ಬೆಂಬಲಿಗರು ಪದಾಧಿಕಾರಿಗಳು ದಾವಣೆಗೆರೆಯಲ್ಲಿ ಪ್ರಚಾರಕ್ಕೆ ಬರಲಿಲ್ಲ. ಅವರ ವಿರುದ್ದ ಕೂಡ ಕ್ರಮ ಆಗಬೇಕು ಎಂದು ಕಾಂಗ್ರೆಸ್ ಪಕ್ಷದ ಮುಸ್ಲಿಂ ನಾಯಕರು ಅಗ್ರಹಿಸಿದ್ದಾರೆ. ದಾವಣಗೆರೆಯಲ್ಲಿ ಟಿಕೆಟ್ ಕೊಡದೆ ಇದ್ದಿದ್ದನ್ನು ಒಂದು ಸಮುದಾಯಕ್ಕೆ ಆದ ಅನ್ಯಾಯ ಎಂದು ಬಿಂಬಿಸುವುದು ಸರಿಯಲ್ಲ. ಯಾವ ನಾಯಕ ಕಾಂಗ್ರೆಸ್ ಪಕ್ಷವನ್ನು ಬಿಟ್ಟು ಹೋದರೂ ಪಕ್ಷಕ್ಕೆ ಏನು ನಷ್ಟವಿಲ್ಲ ಎಂದು ಕಿಡಿಕಾರಿದ್ದಾರೆ.

“ಯಾರೂ ಕಾಂಗ್ರೆಸ್ ಪಕ್ಷವನ್ನು ತೊರೆದರೂ ನಷ್ಟವಿಲ್ಲ. ಸಿಎಂ ಇಬ್ರಾಹಿಂ, ಜಾಫರ್ ಷರೀಪ್ ಅವರು ಇದೇ ರೀತಿ ಪಕ್ಷ ಬಿಟ್ಟು ಹೋದರು. ಅದರಿಂದ ಏನು ನಷ್ಟವಾಗಿಲ್ಲ” ಹೀಗೆ ಪರೋಕ್ಷವಾಗಿ ಸಚಿವ ಜಮೀರ್ ಅಹ್ಮದ್ ಖಾನ್ ಅವರ ವಿರುದ್ಧ ವಾಗ್ದಾಳಿ ನಡೆಸಿದ್ದು ಕಾಂಗ್ರೆಸ್ ಪಕ್ಷದ ಹಿರಿಯ ಮುಸ್ಲಿಂ ನಾಯಕರು.

ವಿವಿಧ ಘಟಕಗಳ ಜವಾಬ್ದಾರಿ ಹೊತ್ತಿರುವ ಹಿರಿಯ ಮುಖಂಡರುಗಳಾದ ಉಬೇದುಲ್ಲಾ ಶರೀಫ್, ವೈ ಸೈಯದ್ ಅಹ್ಮದ್, ಮೆಹಬೂಬ್ ಸೌದಾಗರ್, ಎ ಆರ್ ಎಂ ಹುಸೇನ್, ಮೆಹೋಝ್ ಖಾನ್ ಮುಸ್ಲಿಮರಿಗೆ ಕಾಂಗ್ರೆಸ್ ನಿಂದ ಅನ್ಯಾಯ ಅಗಿದೆ ಎಂಬ ಆರೋಪವನ್ನು ನಿರಾಕರಿಸಿದರು.

ಕಾಂಗ್ರೆಸ್ ನ ಹಿರಿಯ ಮುಖಂಡ ಉಬೇದುಲ್ಲಾ ಷರೀಫ್ ಮಾತನಾಡುವ ವೇಳೆ ಸಚಿವಜಮೀರ್ ಅಹ್ಮದ್ ಖಾನ್ ಜೆಡಿಎಸ್ ಗೆ ಹೋಗ್ತಾರೆ ಎಂಬ ಚರ್ಚೆಗೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿ, “ಯಾರು ಪಕ್ಷದಿಂದ ಹೊರ ಹೋದರೂ ಏನೂ ಸಮಸ್ಯೆ ಆಗುವುದಿಲ್ಲ. ಸಿಎಂ ಇಬ್ರಾಹಿಂ, ಜಾಫರ್ ಷರೀಪ್ ಇದೇ ರೀತಿ ಪಕ್ಷ ಬಿಟ್ಟು ಹೋಗಿದ್ದರು. ಏನಾಯ್ತು ಏನೂ ಆಗಲಿಲ್ಲ. ಪಕ್ಷದ ಮೇಲೆ ಎಲ್ಲರೂ ನಿಂತಿದ್ದಾರೆ. ಯಾರಾದ್ರೂ ಹೋದರೆ ಹೊಸ ನಾಯಕತ್ವದ ಬರುತ್ತದೆ” ಎಂದು ತಿರುಗೇಟು ನೀಡಿದರು.
ಅಬ್ದುಲ್ ಜಬ್ಬಾರ್ ಅವರು ದಾವಣಗೆರೆ ದಕ್ಷಿಣದಲ್ಲಿ ಮನೆ ಬಿಟ್ಟು ಹೊರಗೆ ಬಂದಿಲ್ಲ. ಹೀಗಾಗಿ ಪಕ್ಷ ಏನು ಕ್ರಮ ತೆಗೆದುಕೊಂಡಿದೆಯೋ ಸ್ವಾಗತ ಮಾಡ್ತೇವೆ. ನಸೀರ್ ಅಹಮದ್ ಗೆ ಐದು ಸಲ ಟಿಕೆಟ್ ಕೊಡಲಾಗಿದೆ. ಗೋವಿಂದರಾಜು ಅವರನ್ನು ಸಿಎಂ ರಾಜಕೀಯ ಕಾರ್ಯದರ್ಶಿ ಹುದ್ದೆಯಿಂದ ತೆಗೆದಾಗ ಯಾಕೆ ಯಾವ ಗುರುಗಳೂ ಬಂದು ಕೇಳಲಿಲ್ಲ? ಪಾರ್ಟಿಕೊಟ್ಟ ಜವಾಬ್ದಾರಿ ನಿಭಾಯಿಸಿಲ್ಲ ಅವರು ಅದಕ್ಕೇ ತೆಗೆದಿದ್ದಾರೆ. ಧರ್ಮಗುರುಗಳನ್ನು ಸೇರಿಸಿ ಇಡೀ ಸಮಾಜಕ್ಕೆ ಅನ್ಯಾಯ ಆಗಿದೆ ಅಂದ್ರೆ ಹೇಗೆ? ಇಡೀ ದೇಶದಲ್ಲಿ 10 ಮುಸ್ಲಿಂ ಎಂಎಲ್ಎಗಳು ಬೇರೆ ಎಲ್ಲಿಯೂ ಇಲ್ಲ. ಶಿಸ್ತು ಕ್ರಮ ತೆಗೆದುಕೊಂಡಿದ್ದಕ್ಕೆ ಇಡೀ ಸಮಾಜಕ್ಕೆ ಅನ್ಯಾಯ ಆಗಿದೆ ಎನ್ನೋದು ತಪ್ಪು ಎಂದರು.



