Published
2 hours agoon
By
Akkare News
ಮಂಗಳೂರು ಸಾಮಾಜಿಕ ಅರಣ್ಯ ವಿಭಾಗದ ಪುತ್ತೂರು ತಾಲೂಕಿನ ಮುಂಡೂರು ಗ್ರಾಮದ ಸ.ನಂ. 142/1 (ನಕ್ಷೆಯಂತೆ 142/157) 4.೦೦ ಎಕರೆ ಸರಕಾರಿ ಭೂಮಿಯನ್ನು ಡ್ರೈವಿಂಗ್ ಟ್ರಾಕ್ ಮತ್ತು ಚಾಲನಾ ತರಬೇತಿ ಕೇಂದ್ರ ಸ್ಥಾಪನೆ ಮಾಡುವ ಜಾಗದಲ್ಲಿರುವ 277 ಮರಗಳನ್ನು ಮತ್ತು ಪುತ್ತೂರು ತಾಲ್ಲೂಕು ಬಜತ್ತೂರು ಗ್ರಾಮದ ಸ.ನಂ. 253/1p2ರಲ್ಲಿ ಸಮಾಜ ಕಲ್ಯಾಣ ಇಲಾಖೆಯ ಅಧೀನದಲ್ಲಿರುವ ಪ್ರಜಾತಿ ಮತ್ತು ಪ.ಪಂಗಡದ ಹಾಗೂ ಇತರ ಸಾಮಾಜಿಕ ಮತ್ತು ಆರ್ಥಿಕವಾಗಿ ಹಿಂದುಳಿದಿರುವ ವಿದ್ಯಾರ್ಥಿಗಳಿಗಾಗಿ ಡಾ.ಬಿ.ಆರ್ ಅಂಬೇಡ್ಕರ್ ವಸತಿ ಶಾಲೆಗೆ ಬಜತ್ತೂರು ಗ್ರಾಮದ ಬಿದಿರಾಡಿ ಎಂಬಲ್ಲಿ ಪ್ರಸ್ತಾಪಿತ 7.20ಎಕರೆ ಜಾಗದಲ್ಲಿರುವ 821 ಮರಗಳನ್ನು ಒಟ್ಟು ೧೦೮೮ ಮರಗಳನ್ನು ತೆರವು ಮಾಡುವ ಸಂಬಂಧ ವ್ಯಕ್ಷ ಅಧಿಕಾರಿ ಯವರು ಕರ್ನಾಟಕ ಮರ ಸಂರಕ್ಷಣಾ ಕಾಯ್ದೆ 1922ರ ಕಲಂ 8/3 ನಿಯಮಾನುಸಾರ ಸೂಕ್ತ ಕ್ರಮ ಕೈಗೊಳ್ಳುವಂತೆ ಕೋರಲು ಸರಕಾರದ ಆದೇಶ ಪತ್ರದಲ್ಲಿ ಸೂಚಿಸಲಾಗಿದೆ.
ಮುಂಡೂರಿನಲ್ಲಿ ಆರ್ಟಿಒ ಟ್ರ್ಯಾಕ್ ನಿರ್ಮಾಣ ಮಾಡುವಲ್ಲಿ ೪ ಎಕ್ರೆ ಸರಕಾರಿ ಭೂಮಿಯಲ್ಲಿ ಮರಗಳಿದ್ದು ಅದನ್ನು ತೆರವು ಮಾಡುವುದು ಮತ್ತು ಬಜತ್ತೂರಿನ ಬಿದಿರಾಡಿ ಎಂಬಲ್ಲಿ ನಿರ್ಮಾಣವಾಗಲಿರುವ ಅಂಬೇಡ್ಕರ್ ವಸತಿ ಶಾಲಾ ಕಟ್ಟಡ ನಿರ್ಮಾಣದ ಜಾಗದಲ್ಲಿ ಮರಗಳಿದ್ದು ಅವುಗಳನ್ನು ಕಠಾವು ಮಾಡಲು ಅರಣ್ಯ ಸಚಿವರಿಗೆ ಮನವಿ ಮಾಡಿದ್ದು ಇದೀಗ ಮನವಿಯನ್ನು ಪುರಸ್ಕರಿಸಿ ಮರ ಕಠಾವಿಗೆ ಆದೇಶ ನೀಡಲಾಗಿದೆ. ಮರ ಕಠಾವು ಮಾಡಲು ಇಲಾಖೆಯಿಂದ ಅನುಮತಿ ದೊರೆಯುವಲ್ಲಿ ವಿಳಂಬವಾದ ಕಾರಣ ಅಭಿವೃದ್ದಿ ಕಾಮಗಾರಿ ನಡೆಸಲು ಅಡ್ಡಿಯಾಗಿತ್ತು ಈಗ ಹಾದಿ ಸುಗಮವಾಗಿದ್ದು ಈ ಎರಡು ಕಾಮಗಾರಿಗಳು ಶೀಘ್ರ ಪ್ರಾರಂಭವಾಗಲಿದೆ. ಅಶೋಕ್ ರೈ, ಶಾಸಕರು ಪುತ್ತೂರು



