Connect with us

ಶಾಲಾ ಚಟುವಟಿಕೆ

ಕೊಂಬೆಟ್ಟು ಪ್ರೌಢಶಾಲಾ ಸಂಸತ್ತು ಚುನಾವಣೆ ಶಾಲಾ ನಾಯಕರಾಗಿ ತೀರ್ಥೇಶ್, ಶಾಲಾ ನಾಯಕಿಯಾಗಿ ಪಾಯಲ್ ಗಮನ ಸೆಳೆದ ಆದರ್ಶ ಮತಗಟ್ಟೆ ಹಾಗೂ ಮತದಾರರು

Published

on

​ಶೈಕ್ಷಣಿಕ ವರ್ಷ 2026 27ನೇ ಸಾಲಿನ ಶಾಲಾ ಸಂಸತ್ತಿನ ಚುನಾವಣೆಯು ಕೊಂಬೆಟ್ಟು ಪ್ರೌಢಶಾಲೆಯಲ್ಲಿ ದಿನಾಂಕ 12. 06. 2026 ರಂದು ನಡೆಯಿತು. ಶಾಲಾ ನಾಯಕನಾಗಿ ತೀರ್ಥೇಶ್ ಎಸ್‌.ವಿ. ಹಾಗೂ ಶಾಲಾ ನಾಯಕಿಯಾಗಿ ಪಾಯಲ್ ಆಯ್ಕೆಯಾದರು.ತೀರ್ಥೇಶ್ ಹತ್ತನೇ E ವಿಭಾಗದ ವಿದ್ಯಾರ್ಥಿಯಾಗಿದ್ದು ಶಾಂತಿಗೋಡು ದೇವಪ್ಪ ಹಾಗೂ ವಿಮಲ ದಂಪತಿಗಳ ಪುತ್ರರಾಗಿದ್ದಾರೆ. ಪಾಯಲ್ ಹತ್ತನೇ B ವಿಭಾಗದ ವಿದ್ಯಾರ್ಥಿಯಾಗಿದ್ದು ಬನ್ನೂರು ನಕ್ಷತ್ರಮಲ್ ಹಾಗೂ ಕೈಲಾಶಿ ದಂಪತಿಗಳ ಪುತ್ರಿಯಾಗಿದ್ದಾರೆ.

 

​ ಉಳಿದಂತೆ ವಿರೋಧ ಪಕ್ಷದ ನಾಯಕಿಯಾಗಿ ಬಿ.ಕೆ. ದಿಶಾ 10 A, ಸ್ವಚ್ಛತಾ ಮಂತ್ರಿಯಾಗಿ ಸೃಜಲಕ್ಷ್ಮಿ 10 A, ಶಿಕ್ಷಣ ಮಂತ್ರಿಯಾಗಿ ರಚನಾ ವಿ. 10 A, ಆರೋಗ್ಯಮಂತ್ರಿಯಾಗಿ ಖುಷಿ ಬಿ. 10 A, ಕೃಷಿ ಮಂತ್ರಿ ಆಗಿ ಧನ್ವಿ.ಡಿ 10 E, ಆಹಾರ ಸಚಿವರಾಗಿ ಆದ್ಯಶ್ರೀ 10 A, ನೀರಾವರಿ ಮಂತ್ರಿಯಾಗಿ ಖುಷಿ 10 D, ವಾರ್ತಾ ಮಂತ್ರಿಯಾಗಿ ಪ್ರತೀಕ್ಷಾ 10 A, ಸಾಂಸ್ಕೃತಿಕ ಮಂತ್ರಿಯಾಗಿ ಸ್ತುತಿ 10 B, ಗ್ರಂಥಾಲಯ ಮಂತ್ರಿಯಾಗಿ ವಿದ್ಯಾ 10 D, ಕ್ರೀಡಾ ಮಂತ್ರಿಯಾಗಿ ಕೆ. ವಿ. ಮೋಕ್ಷಿತ್ 10 A ಆಯ್ಕೆಯಾಗಿದ್ದಾರೆ. ಶಾಲಾ ಸಂಸತ್ತಿನ ಸ್ಪೀಕರ್ ಆಗಿ ಪವನ್ ಕುಮಾರ್ 10 D ಆಯ್ಕೆಯಾಗಿದ್ದಾರೆ.

​ಶಾಲಾ ಪ್ರಭಾರ ಉಪ ಪ್ರಾಂಶುಪಾಲರಾದ ನಾಗರಾಜ ಭಟ್ ಇವರ ಮಾರ್ಗದರ್ಶನದಲ್ಲಿ ಸಮಾಜ ವಿಜ್ಞಾನ ಶಿಕ್ಷಕಿಯರಾದ ಮರ್ಸಿ ಮಮತಾ ಮೋನಿಸ್ ಹಾಗೂ ಯುಜಿನಾ ಪಿ.ಇವರು ಮತದಾನ ಪ್ರಕ್ರಿಯೆಯನ್ನು ವಿನ್ಯಾಸಗೊಳಿಸಿದ್ದರು. ಶಾಲಾ ಶಿಕ್ಷಕರು 12 ಮತದಾನ ಕೇಂದ್ರಗಳಲ್ಲಿ ಮೇಲ್ವಿಚಾರಕರಾಗಿ ಕರ್ತವ್ಯ ನಿರ್ವಹಿಸಿದರು. ಗಮನ ಸೆಳೆದ ಆದರ್ಶ ಮತಗಟ್ಟೆ ಹಾಗೂ ಮತದಾರರು ವಿದ್ಯಾರ್ಥಿಗಳಿಗೆ ಮತದಾನದ ಪ್ರಾಮುಖ್ಯತೆಯ ಅರಿವು ಮೂಡಿಸುವ ಸಲುವಾಗಿ ಒಂದು ಆದರ್ಶ ಮತಗಟ್ಟೆಯನ್ನು ತೆರೆಯಲಾಗಿತ್ತು. ಇಲ್ಲಿ ಸಮಾಜದ ಎಲ್ಲಾ ವರ್ಗದ ಜನರ ಪ್ರತಿನಿಧಿಗಳ ಹಾಗೆ ವೇಷಭೂಷಣಗಳನ್ನು ಧರಿಸಿ ವಿದ್ಯಾರ್ಥಿಗಳು ಮತದಾನ ಮಾಡಲು ವ್ಯವಸ್ಥೆ ಕಲ್ಪಿಸಲಾಗಿತ್ತು. ವೃದ್ಧರು, ಮಹಿಳೆಯರು, ರೈತರು, ಉದ್ಯೋಗಸ್ಥರು, ಸರ್ವಧರ್ಮಗಳ ಪ್ರತಿನಿಧಿಗಳು ಸೇರಿದಂತೆ ಸಮಾಜದ ನಾನಾ ವರ್ಗಗಳ ಜನರನ್ನು ಪ್ರತಿನಿಧಿಸಿದ ವಿದ್ಯಾರ್ಥಿಗಳು ವೇಷಭೂಷಣ ಮಾಡಿಕೊಂಡು ಮತದಾನದಲ್ಲಿ ಭಾಗವಹಿಸಿದರು. ಜೊತೆಯಲ್ಲಿ ಮತದಾನಕ್ಕೆ ವ್ಯವಸ್ಥೆ ಮಾಡಲಾಗಿದ್ದ 12 ಮತ ಕೇಂದ್ರಗಳಲ್ಲಿ ಮತದಾನ ಜಾಗೃತಿಯನ್ನು ಮೂಡಿಸುವ ರೀತಿಯಲ್ಲಿ ವಿಶಿಷ್ಟವಾಗಿ ತರಗತಿಗಳನ್ನು ಅಲಂಕರಿಸುವ ಅವಕಾಶವನ್ನು ವಿದ್ಯಾರ್ಥಿಗಳಿಗೆ ನೀಡಲಾಗಿತ್ತು. ಅತ್ಯುತ್ತಮವಾಗಿ ಹಾಗೂ ಕ್ರಿಯಾಶೀಲವಾಗಿ ಮತದಾನ ಕೇಂದ್ರವನ್ನ ವ್ಯವಸ್ಥೆ ಮಾಡಿದ್ದ ತರಗತಿಗಳಿಗೆ ಬಹುಮಾನವನ್ನು ನೀಡಿ ಪ್ರೋತ್ಸಾಹಿಸಲಾಯಿತು.

 

Continue Reading
Click to comment

Leave a Reply

Your email address will not be published. Required fields are marked *

Advertisement