Published
3 hours agoon
By
Akkare News
ಪುತ್ತೂರು: ಪುಣಚ ಗ್ರಾಮದ ದಲಿತ ಕುಟುಂಬಕ್ಕೆ ಹಕ್ಕು ಪತ್ರ ವಿಳಬದ ಬಗ್ಗೆ ಬಂಟ್ವಾಳ ತಾಲೂಕು ಕಚೇರಿಯ ಮುಂಭಾಗದಲ್ಲಿ ನಾವು ಅಂಬೇಡ್ಕರ್ ತತ್ವ ರಕ್ಷಣಾ ವೇದಿಕೆಯಡಿ ಪ್ರತಿಭಟನೆ ನಡೆಯುತ್ತಿದ್ದ ವೇಳೆ ನಾವು ಅಲ್ಲಿಗೆ ಯಾವ ರಾಜಕೀಯದವರನ್ನೂ ಕರೆಯಲಿಲ್ಲ, ಸಂಜೀವ ಮಟಂದೂರು ಅವರೇ ಬಿಜೆಪಿಯವರನ್ನು ಕರೆದುಕೊಂಡು ಬಂದು ಅಲ್ಲಿ ಕೂರಿಸಿದ್ದಾರೆ ಎಂದು ಅಂಬೇಡ್ಕರ್ ತತ್ವ ರಕ್ಷಣಾ ವೇದಿಕೆ ಅಧ್ಯಕ್ಷ ಗಿರಿಧರ್ ನಾಯ್ಕ್ ಶಾಸಕ ಅಶೋಕ್ ಅವರಿಗೆ ಸ್ಪಷ್ಟನೆ ನೀಡಿದ್ದಾರೆ.
ಸೋಮವಾರ ಶಾಸಕರ ಕಚೇರಿಗೆ ಬಂದು ಶಾಸಕರಲ್ಲಿ ಈ ವಿಚಾರವನ್ನು ತಿಳಿಸಿದ ಅವರು ನಾವು ಪುಣಚಾ ಗ್ರಾಮದ ದಲಿತ ಕುಟುಂಬಕ್ಕೆ ಹಕ್ಕು ಪತ್ರ ನೀಡುವಲ್ಲಿ ಆಗುತ್ತಿರುವ ವಿಳಂಬದ ಬಗ್ಗೆ ತಾಲೂಕು ಕಚೇರಿ ಪ್ರತಿಭಟನೆ ನಡೆಸುವುದಾಗಿ ತೀರ್ಮಾನಿಸಿ ಅದರಂತೆ ಅಲ್ಲಿ ಧರಣಿ ಕೂತಿದ್ದೆವು. ಧರಣಿ ಕೂತ ಮಾರನೇ ದಿನ ಮಜಿ ಶಾಸಕ ಸಂಜೀವ ಮಠಂದೂರು ಅವರು ಬಿಜೆಪಿಯವರನ್ನು ಕರೆದುಕೊಂಡು ಬಂದು ಅಲ್ಲಿ ಕೂರಿಸಿದ್ದಾರೆ. ನಾವು ಬನ್ನಿ ಎಂದು ಕರೆಯಲಿಲ್ಲ, ಹಕ್ಕು ಪತ್ರ ಫಲಾನುಭವಿಗಳೂ ಕರೆಯಲಿಲ್ಲ. ನಮ್ಮ ಜೊತೆ ಕೂತುಕೊಂಡ್ರೆ ಏನು ಮಾಡುವುದು? ಅಲ್ಲಿ ಕೂತವರು ಯಾವುದೇ ಪಕ್ಷದ ಕಾರ್ಯಕರ್ತರಲ್ಲ, ನಾನು ಕೂಡಾ ಬಿಜೆಪಿಯಲ್ಲ ನಾನು ಅಪ್ಪಟ ಕಾಂಗ್ರೆಸ್ಸಿಗನಾಗಿದ್ದೇನೆ. ಇವತ್ತಿಗೂ ಕಾಂಗ್ರೆಸ್ಸಿಗನಾಗಿಯೇ ಇದ್ದೇನೆ. ಅವರು ಬಂದು ಸೇರಿದ್ದಕ್ಕೂ ನಮ್ಮ ಪ್ರತಿಭಟನೆಗೂ ಯಾವುದೇ ಸಂಬಂಧವಿಲ್ಲ. ನಾವು ಶಾಸಕರ ವಿರುದ್ಧ ಪ್ರತಿಭಟನೆ ಮಾಡಿಲ್ಲ , ಕಂದಾಯ ಇಲಾಖೆಯ ವಿಳಂಬಧೋರಣೆಯ ವಿರುದ್ಧ ಪ್ರತಿಭಟನೆ ಮಾಡಿದ್ದೇವೆ ಎಂದು ಶಾಸಕರಲ್ಲಿ ತಿಳಿಸಿದರು. 





