Published
2 hours agoon
By
Akkare News
ಬೆಳ್ತಂಗಡಿ, ಜು.26: ಉಪ್ಪಿನಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯ ಕಾಣಿಯೂರು ಗ್ರಾಮದ ಅಡೆಂಜ ನಿವಾಸಿ ಮಹಮ್ಮದ್ ಇದ್ರೀಸ್ ಎಂಬುವವರ ನೂತನ ಕಟ್ಟಡದ ಮೇಲೆ ಜು.15 ರಂದು ರಾತ್ರಿ ಖೋಟಾನೋಟು ತಯಾರಿಸುತ್ತಿದ್ದ ಕೇಂದ್ರಕ್ಕೆ ದಾಳಿ ಮಾಡಿ ಏಳು ಜನರನ್ನು ಬಂಧನ ಮಾಡಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಓರ್ವ ಆರೋಪಿಯನ್ನು ಕರೆದುಕೊಂಡು ಬಂದು ಗುರುವಾಯನಕೆರೆ ಅಪಾರ್ಟ್ಮೆಂಟ್ ಮೇಲೆ ಪೊಲೀಸರು ದಾಳಿ ಮಾಡಿರುವ ಕುರಿತು ವರದಿಯಾಗಿದೆ.
ಉಪ್ಪಿನಂಗಡಿಯ ಪೊಲೀಸರ ವಿಚಾರಣೆ ಸಂದರ್ಭದಲ್ಲಿ ಆರೋಪಿಗಳು ಈ ಮೊದಲು ಬೆಳ್ತಂಗಡಿಯ ಎರಡು ಬಾಡಿಗೆ ಮನೆಯಲ್ಲಿ ಖೋಟಾನೋಟು ಪ್ರಿಂಟ್ ಮಾಡಲು ತಯಾರಿ ಮಾಡಿದ್ದರು. ನಂತರ ಉಪ್ಪಿನಂಗಡಿಗೆ ಸ್ಥಳಾಂತರ ಮಾಡಿರುವುದಾಗಿ ವಿಚಾರಣೆ ಸಂದರ್ಭದಲ್ಲಿ ಬಾಯಿಬಿಟ್ಟಿದ್ದಾರೆ.
ಆರೋಪಿ ಉತ್ತರ ಕನ್ನಡ ಜಿಲ್ಲೆಯ ಸಂದೀಪ್ ಪುಂಡಲೀಕ ಶೋಳಂಬಿ (30) ಮಾಹಿತಿಯಂತೆ, ಆತನನ್ನು ಕರೆದುಕೊಂಡು ಬಂದು ಬೆಳ್ತಂಗಡಿ ತಾಲೂಕಿನ ಕುವೆಟ್ಟು ಗ್ರಾಮದ ಪಿಲಿಚಾಮುಂಡಿಕಲ್ಲು ರಸ್ತೆಯಲ್ಲಿರುವ ಪಾಡ್ಯಾರಮಜಲು ನಿವಾಸಿ ಅಬ್ದುಲ್ ಶಕಿಲ್ ಎಂಬುವವರಿಗೆ ಸೇರಿದ ಬಿ.ಎ.ಅಪಾರ್ಟ್ಮೆಂಟ್ ಹೆಸರಿನ 14 ಬಾಡಿಗೆ ಮನೆಗಳ ಪೈಕಿ 101 ಮತ್ತು 108 ಮನೆ ಮೇಲೆ ಬೆಳ್ತಂಗಡಿ ನ್ಯಾಯಾಲಯದಿಂದ ಸರ್ಚ್ವಾರಂಟ್ ಪಡೆದು ಇಂದು (ಜು.26) ರಂದು ಬೆಳಗ್ಗೆ 9 ಗಂಟೆಗೆ ಬೆಳ್ತಂಗಡಿ ಉಪವಿಭಾಗ ಡಿವೈಎಸ್ಪಿ ರೋಹಿನಿ ಸಿ.ಕೆ. ನೇತೃತ್ವದಲ್ಲಿ ಉಪ್ಪಿನಂಗಡಿ ಪೊಲೀಸರು ದಾಳಿ ಮಾಡಿದ್ದಾರೆ.



