Published
3 hours agoon
By
Akkare News
ಶಾಲಾ ಸಹ ಶಿಕ್ಷಕಿ ಶ್ರೀಮತಿ ನೀತು ನಾಯಕ್ ರವರು ಆಟಿ ತಿಂಗಳ ಮಹತ್ವ, ತುಳುನಾಡಿನ ಸಂಸ್ಕೃತಿ, ಸಂಪ್ರದಾಯ ಹಾಗೂ ಆಚರಣೆಗಳ ಬಗ್ಗೆ ತಿಳಿಸಿದರು. ಶಾಲಾ ಕಾರ್ಯದರ್ಶಿಗಳು ಮಾತನಾಡಿ ತುಳುನಾಡಿನ ಆಚರಣೆಗಳು ಇಂದಿನ ದಿನಗಳಲ್ಲಿ ಬಹಳ ಮುಖ್ಯ. ತುಳು ಸಂಸ್ಕೃತಿಯನ್ನು ಪುನಃ ನೆನಪಿಸುವಂತೆ ಮಾರ್ಗದರ್ಶನ ಕೊಟ್ಟ ಮುಖ್ಯಗುರುಗಳಿಗೆ ಹಾಗೂ ಶಿಕ್ಷಕರಿಗೆ ಅಭಿನಂದನೆಗಳನ್ನು ಸಲ್ಲಿಸಿದರು.
ಕೋಶಾಧಿಕಾರಿಗಳು ಮಾತನಾಡಿ ನಮ್ಮ ಆಟಿ ಸಂಪ್ರದಾಯದಲ್ಲಿ ವಿಜ್ಞಾನವು ಅಡಗಿದೆ ಪ್ರಕೃತಿಯಲ್ಲಿರುವ ವೈರಾಣುಗಳಿಂದ ರಕ್ಷಣೆ ಪಡೆಯಲು ಉತ್ತಮ ಆಹಾರ ಸೇವನೆ ಮಾಡುವುದು ಆಟಿ ಆಚರಣೆಗಲ್ಲಿ ಒಂದು. ಸಂಪ್ರದಾಯಿಕವಾಗಿ ಬಳಸುವ ಪರಿಕರಗಳ ಮಾಹಿತಿಯನ್ನು ನೀಡುವುದು ಮುಂದಿನ ಪೀಳಿಗೆಗೂ ಅದರ ಅರಿವು ಬರುವಂತಾಗಲಿ ಎಂದು ಕಾರ್ಯಕ್ರಮಕ್ಕೆ ಮೆಚ್ಚುಗೆ ವ್ಯಕ್ತ ಪಡಿಸಿದರು. ಶಾಲಾ ಆಡಳಿತ ಮಂಡಳಿಯ ಸದಸ್ಯರಾದ ಶ್ರೀ ವೆಂಕಟಕೃಷ್ಣ ಕೆ ಕೆ ರವರು ಮಾತನಾಡಿ ತುಳುನಾಡಿನ ಆಚರಣೆಗಳನ್ನು ತಿಳಿಯದವರಿಗೆ ತಿಳಿಯುವ ಅವಕಾಶ ಹಾಗೆಯೇ ತಿಳಿದವರು ಈಗಿನ ಪೀಳಿಗೆಗೂ ತಿಳಿಯುವಂತೆ ಮಾಡಿದ್ದು ತುಂಬಾ ಖುಷಿಯ ವಿಚಾರ ಎಂದರು.
ತೆಂಗಿನ ಕೊಂಬನ್ನು ಅರಳಿಸುವ ಮೂಲಕ ಶಾಲಾಧ್ಯಕ್ಷರು ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಿ ಮಾತನಾಡುತ್ತಾ ಎಲ್ಲರಿಗೂ ಆಟಿ ಅಮಾವಾಸ್ಯೆಯ ಶುಭಾಶಯ ತಿಳಿಸಿದರು. 10ನೇ ತರಗತಿಯ ವಿದ್ಯಾರ್ಥಿಗಳಾದ ಸಾಯಿಸಂಚಿತ್, ಜೀವಿತ್, ಯಜ್ಞೆಶ್ ಪ್ರಾರ್ಥನೆ ಹಾಡಿದರು.nಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ ಪ್ರಸನ್ನ ಕೆ. ರವರು ಎಲ್ಲರನ್ನು ಆದರದಿಂದ ಸ್ವಾಗತಿಸಿದರು. ಸಹ ಶಿಕ್ಷಕಿ ಶ್ರೀಮತಿ ರಚನಾ ರವರು ಧನ್ಯವಾದಗೈದರು.
ಸಹ ಶಿಕ್ಷಕರಾದ ಶ್ರೀ ಮುರಳಿಕೃಷ್ಣ ರವರು ಕಾರ್ಯಕ್ರಮ ನಿರೂಪಿಸಿದರು. ನಂತರ ಮಕ್ಕಳಿಂದ ಆಟಿ ಕಳೆಂಜ, ಚೆನ್ನು ಕುಣಿತ ಕಾರ್ಯಕ್ರಮ ನಡೆಯಿತು. ನಂತರ ಮಕ್ಕಳು ಆಟಿ ವಿಶೇಷ ಪತ್ರೊಡೆ, ಸೊಪ್ಪು ಹಾಗೂ ಅಂಬಟೆಗಳ ಸಾಂಪ್ರದಾಯಿಕ ಖಾದ್ಯಗಳನ್ನು ಸವಿದರು. ಆಟಿ ಕೂಟವು ತುಳುನಾಡಿನ ಸಾಂಪ್ರದಾಯಿಕ ಸಂಸ್ಕೃತಿ ಮತ್ತು ಆಹಾರ ಪದ್ಧತಿಯನ್ನು ವಿದ್ಯಾರ್ಥಿಗಳಿಗೆ ಪರಿಚಯಿಸುವ ಮೂಲಕ ಅರ್ಥಪೂರ್ಣವಾಗಿ ನೆರವೇರಿತು.



