Connect with us

ಶಾಲಾ ಚಟುವಟಿಕೆ

ಪುತ್ತೂರು ನಗರ ವಲಯ ಖೋಖೋ ಪಂದ್ಯಾಟ : ಕೊಂಬೆಟ್ಟು ಶಾಲಾ ವಿದ್ಯಾರ್ಥಿಗಳ ತಂಡಗಳು ತಾಲ್ಲೂಕು ಮಟ್ಟಕ್ಕೆ ಆಯ್ಕೆ

Published

on

ಪುತ್ತೂರು ನಗರ ವಲಯ ಮಟ್ಟದ ಖೋಖೋ ಪಂದ್ಯಾಟಗಳಲ್ಲಿ ಸರಕಾರಿ ಪದವಿಪೂರ್ವ ಕಾಲೇಜು ಕೊಂಬೆಟ್ಟು ಇಲ್ಲಿನ ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿಗಳ ತಂಡಗಳು ಪ್ರಥಮ ಹಾಗೂ ದ್ವಿತೀಯ ಸ್ಥಾನಗಳನ್ನು ಪಡೆದು ತಾಲ್ಲೂಕು ಮಟ್ಟಕ್ಕೆ ಆಯ್ಕೆಯಾಗಿವೆ. 14 ರ ವಯೋಮಾನದ ವಿದ್ಯಾರ್ಥಿಗಳ ಖೋಖೋ ಪಂದ್ಯಾಟಗಳು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ 34 ನೆಕ್ಕಿಲಾಡಿ ಇಲ್ಲಿ ನಡೆದಿದ್ದು ಬಾಲಕರ ವಿಭಾಗದಲ್ಲಿ ಕೊಂಬೆಟ್ಟು ಶಾಲಾ ವಿದ್ಯಾರ್ಥಿಗಳು ಪ್ರಥಮ ಸ್ಥಾನ ಪಡೆದಿದ್ದಾರೆ. ವಿವೇಕಾನಂದ ಕನ್ನಡ ಮಾಧ್ಯಮ ಶಾಲೆ ತೆಂಕಿಲ ಇಲ್ಲಿ ನಡೆದ 17 ರ ವಯೋಮಾನದ ಬಾಲಕರ ಖೋಖೋ ಪಂದ್ಯಾಟದಲ್ಲಿ ಕೊಂಬೆಟ್ಟು ವಿದ್ಯಾರ್ಥಿಗಳು ದ್ವಿತೀಯ ಸ್ಥಾನವನ್ನು ಪಡೆದು ತಾಲ್ಲೂಕು ಮಟ್ಟದ ಪಂದ್ಯಾಟಗಳಿಗೆ ಆಯ್ಕೆಯಾಗಿದ್ದಾರೆ. ಶಾಲಾ ಉಪಪ್ರಾಂಶುಪಾಲರಾದ ನಾಗರಾಜ್ ಭಟ್ ಇವರ ಮಾರ್ಗದರ್ಶನದಲ್ಲಿ ಶಾಲಾ ದೈಹಿಕ ಶಿಕ್ಷಣ ಶಿಕ್ಷಕಿ ಗೀತಾಂಜಲಿ ವಿದ್ಯಾರ್ಥಿಗಳಿಗೆ ತರಬೇತಿ ನೀಡಿರುತ್ತಾರೆ.

 
 

Continue Reading
Click to comment

Leave a Reply

Your email address will not be published. Required fields are marked *

Advertisement