Published
18 hours agoon
By
Akkare News
ಉಸ್ತುವಾರಿ ಮತ್ತು ಇಲಾಖೆಯ ಸಚಿವರ ಹೆಸರಿನಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಯಾವುದೇ ಸಿಬ್ಬಂದಿ ಅಥವಾ ಅಧಿಕಾರಿಗಳು, ಎಂಜಿನಿಯರುಗಳು ಹಣ ವಸೂಲಿ ಮಾಡಿದರೆ ನಿರ್ದಾಕ್ಷಿಣ್ಯವಾಗಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂಬುದನ್ನು ಈ ಮೂಲಕ ಸ್ಪಷ್ಟಪಡಿಸಲು ಮತ್ತು ಸದರಿ ಪ್ರಕರಣದಲ್ಲಿ ಮಂಗಳೂರು ವಿಭಾಗದ ಕರ್ನಾಟಕ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಯಮಿತದ ಕಾರ್ಯ ನಿರ್ವಾಹಕ ಮತ್ತು ಕಿರಿಯ ಇಂಜಿನಿಯರ್ಗಳು ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆಯೇ, ಮಾನ್ಯ ಶಾಸಕರು ಮಾಡಿರುವ ಆರೋಪದಲ್ಲಿ ಸತ್ಯಾಂಶವಿದೆಯೇ ಎಂಬ ಬಗ್ಗೆ ಸೂಪರಿಂಟೆಂಡೆಂಟ್ ಎಂಜಿನಿಯರ್ ದರ್ಜೆಯ ಅಧಿಕಾರಿ ನೇತೃತ್ವದ ತ್ರಿಸದಸ್ಯ ತಂಡದಿಂದ ತನಿಖೆ ಮಾಡಿಸಿ, ಒಂದೊಮ್ಮೆ ಇಂಜಿನಿಯರುಗಳು ಭ್ರಷ್ಟಾಚಾರ ಮಾಡಿದ್ದಲ್ಲಿ ಅವರ ವಿರುದ್ಧ ಕೈಗೊಳ್ಳಬೇಕಾದ ಶಿಸ್ತು ಕ್ರಮದ ಶಿಫಾರಸಿ ನೊಂದಿಗೆ ವರದಿಯನ್ನು ಕಡತದಲ್ಲಿ 7 ದಿನಗಳ ಒಳಗಾಗಿ ಸಲ್ಲಿಸಲು ಸೂಚಿಸಲಾಗಿದೆ. (ಈಶ್ವರ ಬಿ ಖಂಡ್ರೆ) ಕಾರ್ಯದರ್ಶಿಯವರು, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಬೆಂಗಳೂರು ಪ್ರತಿ: ವ್ಯವಸ್ಥಾಪಕ ನಿರ್ದೇಶಕರು, ಕೆ.ಆರ್.ಐ.ಡಿ.ಎಲ್., ಬೆಂಗಳೂರು. ವಿಳಾಸ: ಕೊಠಡಿ ಸಂಖ್ಯೆ: 36 ಮತ್ತು 37. ನೆಲಮಹಡಿ, ವಿಕಾಸಸೌಧ, ಡಾ॥ ಬಿ.ಆರ್. ಅಂಬೇಡ್ಕರ್ ವೀದಿ, ಬೆಂಗಳೂರು 



