ಪುತ್ತೂರು.09: ನಾಳೆ ಬೆಳಿಗ್ಗೆ 9:05ಕ್ಕೆ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮನ, 11:30ಕ್ಕೆ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಜಾತ್ರಾ ಗದ್ದೆಯಲ್ಲಿ ಏರ್ಪಡಿಸಲಾಗಿರುವ ಮೈಸೂರು ವಿಭಾಗ ಮಟ್ಟದ ಕೃಷಿ ಹಾಗೂ ಸಸ್ಯ ಮೇಳ ಜಾತ್ರೆಯ ಉದ್ಘಾಟನ...
ಹುಬ್ಬಳ್ಳಿಯಲ್ಲಿ ಬಿಜೆಪಿ ಕಾರ್ಯಕರ್ತೆ ಮೇಲೆ ಹಲ್ಲೆ ನಡೆಸಿ ಅರೆನಗ್ನಗೊಳಿಸಿದ ಪ್ರಕರಣ ಸಂಬಂಧ ಕಾಂಗ್ರೆಸ್ ಕಾರ್ಪೋರೇಟರ್ ಸುವರ್ಣಾ ಕಲಕುಂಟ್ಲಾ ಸೇರಿ 9 ಜನರ ವಿರುದ್ಧ ಕೊಲೆ ಯತ್ನ, ಜೀವ ಬೆದರಿಕೆ ಗಂಭೀರ ಸೆಕ್ಷನ್ಗಳ ಅಡಿ ಎಫ್ಐಆರ್ ದಾಖಲಾಗಿದೆ....
ಪುತ್ತೂರು: ಬಂಟ್ವಾಳದ ಪೆರ್ನೆಯಿಂದ ಹರಡುತ್ತಿರುವ ಬೆಂಕಿ ಬನ್ನೂರು ಗ್ರಾಮದ ಸೇಡಿಯಾಪು ಮೆಡಿಕಲ್ ಕಾಲೇಜಿಗೆ ಮೀಸಲಿಟ್ಟ ಜಾಗದ ಬಳಿ ಗೇರು ತೋಪಿಗೆ ಹರಡಿದ್ದು ಅದನ್ನು ನಂದಿಸುವಲ್ಲಿ ಅಗ್ನಿಶಾಮಕದಳ, ಅರಣ್ಯ ಮತ್ತು ಗೇರು ಇಲಾಖೆ ಹರಸಾಹಸ ಪಡುತ್ತಿರುವ ನಡುವೆ...
ಬೆಂಗಳೂರು: ಆರ್ಎಸ್ಎಸ್ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಆರೋಪದ ಮೇಲೆ ಮಾನನಷ್ಟ ಮೊಕದ್ದಮೆಯಲ್ಲಿ ಸಚಿವರಾದ ಪ್ರಿಯಾಂಕ್ ಖರ್ಗೆ, ದಿನೇಶ್ ಗುಂಡೂರಾವ್ ಮತ್ತು ಯುವ ಕಾಂಗ್ರೆಸ್ ನಾಯಕ ಮೊಹಮ್ಮದ್ ಹ್ಯಾರಿಸ್ ನಲಪಾಡ್ ಅವರಿಗೆ ಸಂಸದ/ಶಾಸಕರ ವಿಶೇಷ ನ್ಯಾಯಾಲಯ...
ಪುತ್ತೂರು.ಜ.07: ಕಲ್ಲಾರೆ ನಿವಾಸಿ ಪರಮೇಶ್ವರ್ (63) ಹೃದಯಾಘಾತದಿಂದ ಮೃತಪಟ್ಟ ಘಟನೆ ನಡೆದಿದೆ. ಮೃತರು ಪತ್ನಿ ಹಾಗೂ ಮಕ್ಕಳು ಮತ್ತು ಕುಟುಂಬಸ್ಥರನ್ನು ಆಗಲಿದ್ದಾರೆ.
ಬೆಂಗಳೂರು: ಕರ್ನಾಟಕ ಪೊಲೀಸ್ ಇಲಾಖೆಯಲ್ಲಿ ಭಾರೀ ವರ್ಗಾವಣೆಗಳನ್ನು ಮಾಡಲಾಗಿದೆ. ಒಟ್ಟು 53 ಇನ್ಸ್ಪೆಕ್ಟರ್ಗಳನ್ನು ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಪುತ್ತೂರು: ಕಾಲೇಜು ವಿದ್ಯಾರ್ಥಿ ಕೃಷ್ಣ ಜೆ. ರಾವ್ ಯುವತಿಗೆ ಮಗುಭಾಗ್ಯ ಕರುಣಿಸಿದ ವಿಚಾರದಲ್ಲಿ ಪುತ್ತೂರಿನ ಬಿಜೆಪಿ ಹಾಗೂ ಸಂಘ ಪರಿವಾರದ ನಕಲಿ ಹಿಂದುತ್ವದ ಮುಖ ಕಳಚಿಬಿದ್ದಿದೆ. ಹಿಂದು ಹೆಣ್ಣುಮಗಳಿಗೆ ನ್ಯಾಯ ಕೊಡಿಲಾಗದ ಅವರ ಮನೋಸ್ಥಿತಿ ಇದೀಗ...
ಉಪ್ಪಿನಂಗಡಿ, ಜ. 06 ಇಲ್ಲಿನ ಕಜೆಕ್ಕಾರ್ ಗುಡ್ದ ಎಂಬಲ್ಲಿ ಹಣವನ್ನು ಪಣವಾಗಿಟ್ಟುಕೊಂಡು ಕೋಳಿ ಅಂಕ ನಡೆಸಲಾಗುತ್ತಿದ್ದ ಪ್ರದೇಶಕ್ಕೆ ಉಪ್ಪಿನಂಗಡಿ ಪೊಲೀಸರು ದಾಳಿ ನಡೆಸಿ ಮೂರು ಕೋಳಿ, ಮೂರು ದ್ವಿ ಚಕ್ರವಾಹನಗಳ ಸಹಿತ ಓರ್ವನನ್ನು ಬಂಧಿಸಿದ ಘಟನೆ...
ಪುತ್ತೂರು.ಜ.06: ಪುತ್ತೂರು ತಾಲೂಕು ಕುರಿಯ ಬೂಡಿಯಾರು ಗಣೇಶ್ ರೈಗಳ ತೋಟಕ್ಕೆ ಕರೆಂಟ್ ಲೈನ್ ನ ವೈರ್ ಕಡಿದು ಬಿದ್ದು ಬೆಂಕಿ ಹತ್ತಿಕ್ಕೊಂಡು ಉರಿದು ಸುಮಾರು 900ಅಡಿಕೆ ಗಿಡ ಸಂಪೂರ್ಣ ಭಸ್ಮ.. ಸಮಯಕ್ಕೆ ಅಗ್ನಿಶಾಮಕ ದಳದವರು ಬಂದು...
ವಿಟ್ಲ ಶ್ರೀ ಪಂಚಲಿಂಗೇಶ್ವರ ದೇವರ ಕಾಲಾವಧಿ ಜಾತ್ರೆಯ ಅಂಗವಾಗಿ ಶ್ರೀ ದೇವರ ನಿತ್ಯೋತ್ಸವದಂದು ದಿನಾಂಕ – 16-01-2025 ನೇ ಶುಕ್ರವಾರದಂದು ಸಮರ್ಪಣ್ ವಿಟ್ಲ ಇವರ ವತಿಯಿಂದ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಸಮರ್ಪಣ್ ಕಲೋತ್ಸವ -2026 ಅಂಗವಾಗಿ...
ಬೆಂಗಳೂರು: ರಾಜ್ಯದಲ್ಲಿ ಸುದೀರ್ಘ ಅವಧಿಯ ಮುಖ್ಯಮಂತ್ರಿ ಎಂಬ ಹೆಗ್ಗಳಿಕೆ ಹೊಂದಿದ್ದ ದೇವರಾಜ ಅರಸು ಅವರ ದಾಖಲೆಯನ್ನು ಸಿದ್ದರಾಮಯ್ಯ ಮಂಗಳವಾರ (ಜ. 6) ಸರಿಗಟ್ಟಲಿದ್ದಾರೆ. ಆ ಮೂಲಕ, ಅತಿ ಹೆಚ್ಚು ಅವಧಿ ರಾಜ್ಯ ಸರ್ಕಾರದ ಚುಕ್ಕಾಣಿ ಹಿಡಿದ ಮುಖ್ಯಮಂತ್ರಿ...
ಬೆಂಗಳೂರು : ಕೋಗಿಲು ಉಳಿಸಿ – ಬೆಂಗಳೂರು ಉಳಿಸಿ!ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರದ ಕೋಗಿಲು ಬಡಾವಣೆಯ ಸರ್ಕಾರಿ ಜಾಗದಲ್ಲಿ ನಡೆದಿರುವ ಅಕ್ರಮ ನಿವೇಶನ ಹಂಚಿಕೆಯ ವಿರುದ್ಧ ಬೆಂಗಳೂರು ಉತ್ತರ ಜಿಲ್ಲೆಯ ಶ್ರೀನಿವಾಸ ಗಾರ್ಡನ್ನಲ್ಲಿ ನಡೆದ“ಕೋಗಿಲು ಉಳಿಸಿ –...
ಮನೆಯಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡು ದಟ್ಟ ಹೊಗೆ ಆವರಿಸಿದ್ದರಿಂದ ಮಂಗಳೂರು ಮೂಲದ ಸಾಫ್ಟ್ವೇರ್ ಉದ್ಯೋಗಿ ಯುವತಿಯೊಬ್ಬಳು ಉಸಿರು ಗಟ್ಟಿ ಮೃತಪಟ್ಟ ಘಟನೆ ರಾಮಮೂರ್ತಿ ನಗರ ಠಾಣೆ ವ್ಯಾಪ್ತಿಯ ಸುಬ್ರಹ್ಮಣ್ಯದಲ್ಲಿ ನಡೆದಿದೆ. ಮಂಗಳೂರಿನ ಕಾವೂರು ಮೂಲದ ಶರ್ಮಿಳಾ...
ಮಠಂತ ಬೆಟ್ಟುವಿನ, ಶ್ರೀ ಮಹಿಷಮರ್ದಿನಿ ದೇವಿಗೆ ಸಮರ್ಪಣೆಗೊಳ್ಳಲಿರುವ ಸ್ವರ್ಣ ಕವಚದ ಬಗ್ಗೆ ಶ್ರೀ ದೇವಿಯ ಭಕ್ತರ ವಿಶೇಷ ಸಭೆಯು,ಜೀರ್ಣೋದ್ದಾರ ಸಮಿತಿಯ ಅಧ್ಯಕ್ಷರಾದ ಮಾನ್ಯ ಶ್ರೀ ಅಶೋಕ್ ರೈ ಅವರ ಅಧ್ಯಕ್ಷತೆ ಯಲ್ಲಿ ಜನವರಿ 04 ರಂದು...
ಬೆಂಗಳೂರು: ಜನಾರ್ದನ ರೆಡ್ಡಿ ಇರಾನ್ ಅಥವಾ ಅಮೆರಿಕದಿಂದಾದ್ರೂ ಭದ್ರತೆ ತರಿಸಿಕೊಳ್ಳಲಿ ಎಂದು ಡಿಸಿಎಂ ಡಿಕೆ ಶಿವಕುಮಾರ್ ಲೇವಡಿ ಮಾಡಿದ್ದಾರೆ. ಜನಾರ್ದನ ರೆಡ್ಡಿ ಝೆಡ್+ ಭದ್ರತೆ ಕೇಳಿ ಅಮಿತ್ ಶಾ, ಸರ್ಕಾರಕ್ಕೆ ಪತ್ರ ಬರೆದಿರೋ ವಿಚಾರಕ್ಕೆ ಬೆಂಗಳೂರಿನಲ್ಲಿ...
ಬೆಂಗಳೂರು, ಜನವರಿ 04: ಟ್ಯಾಕ್ಸ್ ವಂಚನೆ ಆರೋಪದ ಹಿನ್ನೆಲೆ ನಗರದಲ್ಲಿ ಐದೂವರೆ ಕೋಟಿ ರೂ. ಮೌಲ್ಯದ ಬೆಂಟ್ಲಿ ಕಾರನ್ನು ಕೋರಮಂಗಲದಲ್ಲಿ ಆರ್ಟಿಒ ಅಧಿಕಾರಿಗಳು ಸೀಜ್ ಮಾಡಿದ್ದಾರೆ. ಕಾರು ನೋಂದಣಿ ವೇಳೆ 5 ಕೋಟಿ 50 ಲಕ್ಷ...
ಪುತ್ತೂರು.04: ಪಡುಮಲೆ ಬಿಟ್ಟ ಕೋಟಿ ಚೆನ್ನಯರು ಇಲ್ಲಿ ಬಂದು ಕುಳಿತ ಕಾರಣದಿಂದಲೇ ಏನೋ ಇಲ್ಲಿ ವರ್ಷದ ಪ್ರಥಮ ಬೈದೇರುಗಳ ನೇಮೋತ್ಸವ ನಡೆಯುತ್ತಿದೆ. ಬಹಳ ವರ್ಷಗಳ ಹಿಂದೆ ಬೈದೇರುಗಳಿಗೆ ಕೇವಲ ತಂಬಿಲ ಸೇವೆ ನಡೆಯುತ್ತಿತ್ತು. ಬೈದೇರುಗಳಿಗೆ ನೇಮೋತ್ಸವ...
ಪುತ್ತೂರು: ನಾವು ಹಲವು ವರ್ಷಗಳಿಂದ ಬಿಜೆಪಿ ಕಾರ್ಯಕರ್ತರಾಗಿ ಕೆಲಸ ಮಾಡುತ್ತಿದ್ದೇವೆ ಆದರೆ ನಮ್ಮ ರಸ್ತೆಯನ್ನು ಇದುವರೆಗೂ ಯಾರೂ ಅಭಿವೃದ್ದಿ ಮಾಡಿಲ್ಲ, ನೀವು ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಅಭಿವೃದ್ದಿ ಕೆಲಸ ಮಾಡುತ್ತಿದ್ದೀರಿ, ಪಕ್ಷ ಬೇಧವಿಲ್ಲದೆ ಅನುದಾನವನ್ನು ನೀಡುತ್ತಿದ್ದೀರಿ, ನಮ್ಮ ಬೇಡಿಕೆಯನ್ನು ಈಡೇರಿಸಿದ್ದಲ್ಲಿ ನಾವು ನಿಮ್ಮ ಪರ ಬಹಿರಂಗ ಪ್ರಚಾರ ಮಾಡಿಯೇ ಮಾಡುತ್ತೇವೆ ಎಂದು ಪೆರುವಾಯಿ ಗ್ರಾಮದ ಬಿಜೆಪಿ ಕಾರ್ಯಕರ್ತರ ನಿಯೋಗವಚೊಂದು ಪುತ್ತೂರು ಶಾಸಕ ಅಶೋಕ್ ರೈ ನಿವಾಸಕ್ಕೆ ಬಂದು ಭರವಸೆಯ ಜೊತೆಗೆ ಶಪಥ ಮಾಡಿದ್ದಾರೆ. ಪೆರುವಾಯಿ ಗ್ರಾಮದ ಬದಿಮಾರ್ ಪ್ರದೇಶದಲ್ಲಿ ಅನೇಕ ಮನೆಗಳಿದೆ. ನಮ್ಮ ರಸ್ತೆ ಇನ್ನೂ ಅಭಿವೃದ್ದಿಯಾಗಿಲ್ಲ. ರಸ್ತೆಯಾಗಬೇಕಾದರೆ ಖಾಸಗಿ ವ್ಯಕ್ತಿಗಳು ಜಾಗ ಬಿಟ್ಟುಕೊಡಬೇಕಾಗುತ್ತದೆ. ಇಷ್ಟು ವರ್ಷದಲ್ಲಿ ನಾವು ಮಾಡಿದ ಪ್ರಯತ್ನವೆಲ್ಲವೂ ವಿಫಲವಾಗಿದೆ. ರಾಜಕೀಯ ನೇತಾರರು ಈ ಹಿಂದೆ ಭರವಸೆಯನ್ನು ಮಾತ್ರ ಕೊಟ್ಟಿದ್ದಾರೆ ವಿನಾ ನಮ್ಮ ಸಮಸ್ಯೆ ಪರಿಹಾರ ಮಾಡಿಲ್ಲ. ಖಾಸಗಿ ವ್ಯಕ್ತಿಗಳ ಜೊತೆ ಮಾತುಕತೆ ನಡೆಸಿ ನಮ್ಮ ಪ್ರದೇಶಕ್ಕೆ ರಸ್ತೆಯನ್ನು ನಿರ್ಮಾಣ ಮಾಡಿ ಕೊಡುತ್ತೀರಿ ಎಂಬ ಪೂರ್ಣ ನಂಬಿಕೆ ನಮ್ಮಲ್ಲಿದೆ. ನಮ್ಮ ಬೇಡಿಕೆಯನ್ನು ನೀವು ಈಡೇರಿದ್ದಲ್ಲಿ ನಾವು ಬಹಿರಂಗವಾಗಿ ನಿಮ್ಮ ಪರ ಪ್ರಚಾರ ಮಾಡುತ್ತೇವೆ ಇದರಲ್ಲಿ ಯಾವುದೇ ಸಂಶಯ ಬೇಡ ಎಂದು ಶಾಸಕರ ಮುಂದೆ ಶಪಥ ಮಾಡಿದ್ದಾರೆ. ಈ ವೇಳೆ ವಸಂತಶೆಟ್ಟಿ ಬದಿಯಾರು, ಜಯರಾಮ ಬಿ, ಪದ್ಮಶ್ರೀ, ಜಯರಾಮ ವಿಠಲ, ಮತ್ತು ಗೀತಾ ಉಪಸ್ಥಿತರಿದ್ದರು. ನಮ್ಮ ಜೊತೆ ಇನ್ನೂ ಅನೇಕ ಮಂದಿ ಇದ್ದು ಅವರೆಲ್ಲರನ್ನೂ ನಾವು ಸೇರಿಸಿಕೊಳ್ಳಲಿದ್ದೇವೆ ಎಂದು ಹೇಳಿದರು. ಈ ವೇಳೆ ಮಾತನಾಡಿದ ಶಾಸಕರು ಖಾಸಗಿ ವ್ಯಕ್ತಿಗಳ ಜೊತೆ ಮಾತುಕತೆ ನಡೆಸುವ ಪ್ರಯತ್ನವನ್ನು ಮಾಡುತ್ತೇನೆ. ಅವರ ಮನವೊಲಿಸಿ ರಸ್ತೆ ನಿರ್ಮಾಣದ ಭರವಸೆಯನ್ನು ನೀಡಿದರು.
ಪುತ್ತೂರು, ಜನವರಿ 3:ದಕ್ಷಿಣ ಕನ್ನಡ ಜಿಲ್ಲೆಯ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ (Additional SP) ಶ್ರೀ ಅನಿಲ್ ಕುಮಾರ್ ಭೂಮರೆಡ್ಡಿ ಅವರು ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಕಚೇರಿಗೆ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಅವರು...
ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಇದರ ಕಾರ್ಮಿಕ ಘಟಕದ ರಾಜ್ಯ ಕಾರ್ಯದರ್ಶಿಯಾಗಿ ಬಂಟ್ವಾಳ ಕ್ಷೇತ್ರದ ಪೆರ್ಲಾಪಿನ ಉದ್ಯಮಿ ಶ್ರೀ ಹನೀಫ್ ಪೆರ್ಲಾಪು ಇವರನ್ನು ಕೆಪಿಸಿಸಿ ರಾಜ್ಯ ಕಾರ್ಮಿಕ ಘಟಕದ ಅಧ್ಯಕ್ಷರಾದ ಶ್ರೀ ಪುಟ್ಟಸ್ವಾಮಿ ಗೌಡ ಅವರು...
ಕಾಣಿಯೂರು:ಇದೇ ಬರುವ ದಿನಾಂಕ 05-01-2026ನೇ ಸೋಮವಾರ ಕಾಣಿಯೂರು (ಪ್ರಶಾಂತ್ ಬಾಹತ್ತಿರ) ‘ಕೆ.ಪಿ ಕಾಂಪ್ಲೆಕ್ಸ್’ನಲ್ಲಿ ನೂತನವಾಗಿ ಪ್ರಾರಂಭಗೊಳ್ಳಲಿರುವ ನಕ್ಷತ್ರ ಟ್ರೇಡರ್ಸ್ಶು ಭಾರಂಭಗೊಳ್ಳಲಿರುವುದು. 9740709180 ಇಲ್ಲಿ ಅಡಿಕೆ, ಕರಿಮೆಣಸು, ಗೇರುಬೀಜ ಹಾಗೂ ಇತರ ಕಾಡು ಉತ್ಪತ್ತಿ ಖರೀದಿಸಲಾಗುವುದು.
ಮುಂಡೂರು.ಜ04: ಜನವರಿ ಒಂದರೊಂದು ನಡೆದ ಒತ್ತಕೊಲದ ಪ್ರಯುಕ್ತ ರಸ್ತೆ ಬದಿಯಲ್ಲಿ ಕಸ ಕಡ್ಡಿಗಳು ಮತ್ತು ಪ್ಲಾಸ್ಟಿಕ್ ಚೀಲಗಳು ಕಂಡುಬಂದ ಹಿನ್ನೆಲೆಯಲ್ಲಿ ಮತ್ತು ಜನವರಿ 14ರಂದು ವಾರ್ಷಿಕೋತ್ಸವ ನಡೆಯುವ ಪ್ರಯುಕ್ತ ಶ್ರೀ ವಿಷ್ಣುಮೂರ್ತಿ ಭಜನಾ ಮಂಡಳಿ ಉದಯಗಿರಿ...
ಮಂಗಳೂರು: ಬಂದರು ನಗರಿ ಮಂಗಳೂರಿನ ಪ್ರಸಿದ್ಧ ಗರೋಡಿ ಕ್ಷೇತ್ರದ ಜಾತ್ರೋತ್ಸವ ಸಂದರ್ಭದಲ್ಲಿ ‘ಕೋಳಿ ಅಂಕ’ ನಡೆಸುವ ವಿಚಾರವಾಗಿ ಪರ–ವಿರೋಧ ಚರ್ಚೆಗಳು ತೀವ್ರಗೊಂಡಿವೆ. ಕೆಲವರು ಇದನ್ನು ಉತ್ಸವದ ಸಂದರ್ಭದ ಮನರಂಜನಾ ಆಟವೆಂದು ಪರಿಗಣಿಸುತ್ತಿದ್ದರೆ, ಇನ್ನು ಕೆಲವರು ಇದನ್ನು...
ಪುತ್ತೂರು: ಕರ್ನಾಟಕದಲ್ಲಿ ಎಸ್ಐಆರ್ ಪ್ರಕ್ರಿಯೆಗೆ ಇನ್ನೂ ಅಧಿಕೃತ ಆದೇಶ ಬಂದಿಲ್ಲ, ಆದರೂ ಕೆಲವು ಕಡೆಗಳಲ್ಲಿ ಬಿಎಲ್ಒಗಳು ಮತದಾರ ಪಟ್ಟಿ ಮ್ಯಾಪಿಂಗ್ ಮಾಡುತ್ತಿದ್ದಾರೆ. ಬಹುತೇಕ ಗ್ರಾಮಗಳಲ್ಲಿ ಈ ಪ್ರಕ್ರಿಯೆ ನಡೆಯುತ್ತಿದೆ. ಮ್ಯಾಪಿಂಗ್ ಬಳಿಕ ನಿಮ್ಮ ನಿಮ್ಮ ವೋಟರ್ ಪಟ್ಟಿಯನ್ನು ಪರಿಶೀಲಿಸಿ ನಿಮ್ಮ ಹೆಸರು ಇದೆಯೇ ಎಂದು ಖಾತ್ರಿಪಡಿಸಿ ಇಲ್ಲದಿದ್ದರೆ ನೀವು ಮತದಾನದಿಂದ ವಂಚತರಾಗುವ ಸಾಧ್ಯತೆ ಇದೆ ಈಗಾಗಲೇ ಬಿಹಾರದಲ್ಲಿ ೫೦ ಲಕ್ಷ ವೋಟು ಡಿಲಿಟ್ ಮಾಡಿದ್ದಾರೆ ಎಂದು ಪುತ್ತೂರು ಶಾಸಕ ಅಶೋಕ್ ರೈ ಅವರು ಕಾರ್ಯಕರ್ತರಿಗೆ ಎಚ್ಚರಿಕೆ ನೀಡಿದ್ದಾರೆ. ಪುತ್ತೂರು ಬ್ಲಾಕ್ ಕಾಂಗ್ರೆಸ್ ವತಿಯಿಂದ ನಡೆದ ಮತದಾರ ಪಟ್ಟಿ ಪರಿಷ್ಕರಣೆಯ ಕುರಿತು ಬಿಎಲ್ಎಗಳಿಗೆ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಮ್ಯಾಪಿಂಗ್ ಬಗ್ಗೆ ಈಗಾಗಲೇ ಕೆಲವೊಂದು ಆಕ್ಷೇಪಾರ್ಹ ದೂರುಗಳು ಬಂದಿದೆ. ವಿದೇಶದಲ್ಲಿರುವ ಅಥವಾ ಕ್ಷೇತ್ರ ಬಿಟ್ಟು ಹೊರಗಡೆ ನೆಲೆಸಿರುವ ಕುಟುಂಬಗಳ ವೋಟು ಡಿಲಿಟ್ ಮಾಡುವ ಸಾಧ್ಯತೆ ಇದೆ. ಕಾರ್ಯಕರ್ತರು, ಬಿಎಲ್ಎಗಳು ಈಬಗ್ಗೆ ಅಧಿಕಾರಿಗಳಿಗೆ ಸೂಕ್ತ ದಾಖಲೆ, ಮಾಹಿತಿ ನೀಡುವ ಮೂಲಕ ಮತದಾರ ಪಟ್ಟಿಯಿಂದ ಹೆಸರು ಅಳಿಸದಂತೆ ನೋಡಿಕೊಳ್ಳಬೇಕು. ನನ್ನದು ಸರಿ ಇದೆ ಎಂದು ಕೈಕಟ್ಟಿ ಕೂರಬೇಡಿ. ನಾಡಿದ್ದು ವೋಟು ಹಾಕ್ಲಿಕ್ಕೆ ಹೋಗುವಾಗ ಮತದಾರ ಪಟ್ಟಿಯಲ್ಲಿ ನಿಮ್ಮ ಹೆಸರು ಇಲ್ಲದಿದ್ದರೆ ಆ ವೇಳೆ ಏನೂ ಮಾಡಲು ಸಾಧ್ಯವಿಲ್ಲ ಎಂದು ಎಚ್ಚರಿಕೆ ನೀಡಿದರು. ಕರ್ನಾಟಕದಲ್ಲಿ ಎಸ್ಐಆರ್ ಗೆ ಅಧಿಕೃತ ಆದೇಶ ಬಂದ ಬಳಿಕ ಆನ್ಲೈನ್ ಮೂಲಕವೂ ನಿಮ್ಮ ಹೆಸರು ಮತದಾರ ಪಟ್ಟಿಯಲ್ಲಿದೆಯೇ ಎಂಬುದನ್ನು ಖಾತ್ರಿಪಡಿಸಿಕೊಳ್ಳಬಹುದು ಎಂದು ಶಾಸಕರು ಹೇಳಿದರು. ಮತದಾರ ಪಟ್ಟಿಯಿಂದ ಹೆಸರು ಅಳಿಸುವ ಅಧಿಕಾರ ಯಾರಿಗೂ ಇಲ್ಲ ಎಂಬುದನ್ನೂ ಶಾಸಕರು ವಿವರಿಸಿದರು. ಬ್ಲಾಕ್ ಅಧ್ಯಕ್ಷ ಕೃಷ್ಣಪ್ರಸಾದ್ ಆಳ್ವ ಅಧ್ಯಕ್ಷತೆ ವಹಿಸಿದ್ದರು.
ಪುತ್ತೂರು: ಕರ್ನಾಟಕದಲ್ಲಿ ಎಸ್ಐಆರ್ ಗೆ ಇನ್ನೂ ಅಧಿಕೃತ ಆದೇಶವಾಗಿಲ್ಲ ಆದರೂ ಕೆಲವು ಕಡೆಗಳಲ್ಲಿ ಬಿಎಲ್ಒಗಳಿಗೆ ಮತದಾರ ಪಟ್ಟಿ ಪರಿಷ್ಕರಣೆ ( ಮ್ಯಾಪಿಂಗ್) ನಡೆಸು ಆದೇಶ ನೀಡಿದ್ದೀರಿ, ಯಾವ ಆಧಾರದಲ್ಲಿ ಈ ಮ್ಯಾಪಿಂಗ್ ಪ್ರಕ್ರಿಯೆ ನನಡೆಸುತ್ತಿದ್ದೀರಿ, ನಿಮ್ಮ...
ಪುತ್ತೂರು. ಜ.02: ಪುತ್ತೂರಿನ ಉದ್ಯಮಿ ಕೊಡುಗೈದಾನಿ ಸಮಾಜ ಸೇವಕರು. ಆದ ಶ್ರೀ ಡೆನ್ನಿಸ್ ಮಸ್ಕರೇನ್ಹಸ್ ಮಾಲಕರು, ಕೋಸ್ಟಲ್ ಕೊಕನಟ್ ಇಂಡಸ್ಟ್ರೀ, ಸೇಡಿಯಾಪು ಅವರನ್ನು ಅವರ ಮನೆಯಲ್ಲಿ ಅವರ ಆತ್ಮೀಯರ ಸ್ನೇಹಿತರ ಬಳಗ ಲುಂಗಿ ಫ್ರೆಂಡ್ಸ್ ಗೆಳೆಯರು...
ಬಂಟ್ವಾಳ : ತಾಲೂಕು ಪೆರ್ನೆ ಗ್ರಾಮದ ಬ್ಯಾಂಕ್ ಆಫ್ ಬರೋಡಾ ಶಾಖೆಯ ಮ್ಯಾನೇಜರ್ ಸುಬ್ರಹ್ಮಣ್ಯಂ(30)ಎಂಬಾತ ಉಂಡ ಮನೆಗೆ ಕನ್ನ ಕೊರೆದು ಪರಾರಿಯಾಗಿದ್ದಾನೆ. ಎಟಿಎಂ ಮೇಲ್ವಿಚಾರಣೆಯ ಜವಾಬ್ದಾರಿ ಹೊಂದಿದ್ದ ಈತ 06/02/2024ರಿಂದ 16/12/2025 ವರೆಗೆ ಎಟಿಎಂಗೆ ನಿಗದಿತ ಹಣ...
ಮಂಗಳೂರು: ಪುತ್ತೂರಿನಲ್ಲಿ ಯುವತಿಗೆ ಮಗು ಕರುಣಿಸಿ ಮದುವೆಗೆ ನಿರಾಕರಿಸುತ್ತಿರುವ ಆರೋಪಿ ಕೃಷ್ಣ ಜೆ.ರಾವ್ಗೆ ಕೋರ್ಟ್ನಿಂದ ನೀಡಲಾಗಿರುವ ಜಾಮೀನನ್ನು ರದ್ದುಗೊಳಿಸಲು ಅರ್ಜಿ ಸಲ್ಲಿಸಲಾಗುವುದು. ಸಂಧಾನದ ಬಾಗಿಲು ಮುಚ್ಚಿದ್ದು, ಜ. 24ರಂದು ಕಲ್ಲಡ್ಕದಲ್ಲಿ ಪ್ರತಿಭಟನಾರ್ಥವಾಗಿ ಮಗುವಿಗೆ ನಾಮಕರಣ ಶಾಸ್ತ್ರ ನಡೆಸುವುದಾಗಿ...
ಬೆಂಗಳೂರು: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಿಂದ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ (ಗ್ರಾಮ ಪಂಚಾಯಿತಿಗಳ ತೆರಿಗೆ, ದರ ಮತ್ತು ಶುಲ್ಕಗಳು) ನಿಯಮಗಳು, 2025 ಅನ್ನು ಅಧಿಸೂಚಿಸಲಾಗಿದ್ದು, ಈ ನಿಯಮಗಳನ್ವಯ, ಈ ಹಿಂದೆ...
ಹಿಂದೊಮ್ಮೆ ಗಣಿ ದೂಳಿನಿಂದಲೇ ಸುದ್ದಿಯಾಗಿದ್ದ ಬಳ್ಳಾರಿ ರಕ್ತ ರಾಜಕೀಯಕ್ಕೆ ಸಾಕ್ಷಿಯಾಗಿದೆ. ಬರೀ ಟ್ವೆಂಟಿ ಬೈ ಟ್ವೆಂಟಿ ಬ್ಯಾನರ್, ಇಡೀ ಜಿಲ್ಲೆಯಲ್ಲಿ ಸಂಘರ್ಷವನ್ನೇ ಸೃಷ್ಟಿಸಿದೆ. ಕಲ್ಲು ತೂರಾಟ, ಖಾರದು ಪುಡಿ ಎರೆಚಾಟ, ದೊಣ್ಣೆಯಿಂದ ಬಡಿದಾಟ ಇಷ್ಟೆ ಯಾಕೆ...
ಪುತ್ತೂರು: ಬ್ಲಾಕ್ ಕಾಂಗ್ರೆಸ್ ಪುತ್ತೂರು ಇದರ ವತಿಯಿಂದ ಪಕ್ಷದ ಬೂತ್ ಅಧ್ಯಕ್ಷರಿಗೆ, ಬಿಎಲ್ಎಗಳಿಗೆ, ವಲಯ ಅಧ್ಯಕ್ಷರುಗಳಿಗೆ ಮತಪಟ್ಟಿ ಪರಿಷ್ಕರಣೆಯ ತರಬೇತಿ ಕಾರ್ಯಕ್ರಮವು ಜ.೩ರಂದು ಮಧ್ಯಾಹ್ನ ೧೧.೩೦ಕ್ಕೆ ಬ್ಲಾಕ್ ಕಾಂಗ್ರೆಸ್ ಕಚೇರಿಯ ಮೇಲ್ಬಾಗದ ವಿದ್ಯಾಮಾತ ಸಭಾಂಗಣದಲ್ಲಿ ನಡೆಯಲಿದೆ....
ತಮ್ಮ 70ನೇ ವಯಸ್ಸಿನಲ್ಲೂ ಬೆಂಗಳೂರಿನಿಂದ ಸುಮಾರು 655 ಕಿ.ಮೀ. ದೂರದ ಕನ್ಯಾಕುಮಾರಿಗೆ ಸೈಕಲ್ ಯಾತ್ರೆ ನಡೆಸಿದ್ದಕ್ಕಾಗಿ ಮಾಜಿ ಸಚಿವ, ಬಿಜೆಪಿ ಶಾಸಕ ಎಸ್.ಸುರೇಶ್ಕುಮಾರ್ ಅವರನ್ನು ಪ್ರಧಾನಿ ನರೇಂದ್ರ ಮೋದಿ ಅಭಿನಂದಿಸಿದ್ದಾರೆ. ಬೆಂಗಳೂರು : ತಮ್ಮ 70ನೇ ವಯಸ್ಸಿನಲ್ಲೂ...
ನಟ ಕಿಚ್ಚ ಸುದೀಪ್ ಅಭಿನಯದ ‘ಮಾರ್ಕ್’ ಸಿನಿಮಾ ಕನ್ನಡ, ತಮಿಳು, ತೆಲುಗು ಭಾಷೆಗಳಲ್ಲಿ ಬಿಡುಗಡೆಯಾಗಿದ್ದು, ಯಶಸ್ಸಿನ ಹಾದಿ ಹಿಡಿದಿದೆ. ಈ ನಡುವೆಯೇ ಸುದೀಪ್ ಅವರು ತಮ್ಮ ಮಗಳ ಪ್ರತಿಕ್ರಿಯೆ ಬಗ್ಗೆ ಮಾತನಾಡಿದ್ದಾರೆ. ಇದೇ ವೇಳೆ ವಿಜಯಲಕ್ಷ್ಮಿ...
ಕೋಡಿಂಬಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಕೆಲವೊಂದು ಕಡೆ,ಬೇರೆ ಬೇರೆ ಊರಿನವರು ಕಸ ಬಿಸಾಡಿಕೊಂಡು ಹೋಗುವುದನ್ನು ತಡೆಹಿಡಿಯಲು, ಕೋಡಿಂಬಾಡಿ ಗ್ರಾಮ ಪಂಚಾಯತ್ ಅನೇಕ ಕಾರ್ಯಕ್ರಮವನ್ನು ಅನುಸರಿಸಿತು, ಇದರೊಂದಿಗೆ ಗ್ರಾಮಪಂಚಾಯಿತ್ ಗೆ ಗ್ರಾಮ ಗಾಂಧಿ ಪುರಸ್ಕಾರ ಪ್ರಶಸ್ತಿಯೂ ಲಭಿಸಿತು,...
ಮಂಗಳೂರು: ನಾಡಿನ ಖ್ಯಾತ ಶಿಕ್ಷಣ ತಜ್ಞ, ಉದ್ಯಮಿ ಹಾಗೂ ನಿಟ್ಟೆ ಪರಿಗಣಿತ ವಿಶ್ವವಿದ್ಯಾಲಯದ ಕುಲಾಧಿಪತಿ ಡಾ. ಎನ್. ವಿನಯ ಹೆಗ್ಡೆ (86) ಅವರು ಗುರುವಾರ ಬೆಳಗಿನ ಜಾವ ದಕ್ಷಿಣ ಕನ್ನಡ ಜಿಲ್ಲೆಯ ಉಡುಪಿಯ ನಿಟ್ಟೆಯಲ್ಲಿರುವ ಅವರ...
ಪುತ್ತೂರು: ಹೂವಿನ ವ್ಯಾಪಾರಸ್ಥ ಮೂಲತಃ ಸಾಮೆತ್ತಡ್ಕ ನಿವಾಸಿಯಾಗಿದ್ದು ಪಾಂಗ್ಲಾಯಿ ನಿವಾಸಿ ಹರೀಶ್ ಯಾನೆ ಹರ್ಷ(47ವ)ರವರು ಅಲ್ಪಕಾಲದ ಅಸೌಖ್ಯದಿಂದಾಗಿ ಡಿ.31ರಂದು ಮಂಗಳೂರು ಆಸ್ಪತ್ರೆಯಲ್ಲಿ ನಿಧನರಾದರು. ಮೃತರು ಪತ್ನಿ ನಾಗರತ್ನ, ಮಗಳು ಸಿಂಚನ, ತಂದೆ ಕೊರಗಪ್ಪ, ತಾಯಿ ಪರಮೇಶ್ವರಿ,...
ವಿಟ್ಲ ಪೇಟೆಯ ಮಂಗಳೂರು ರಸ್ತೆಯಲ್ಲಿ, ಗಣೇಶ್ ಡ್ರೈವಿಂಗ್ ಸ್ಕೂಲ್ ಪಕ್ಕದಲ್ಲಿರುವ ಶ್ರೀ ಇಲೆಕ್ಟ್ರೋನಿಕ್ಸ್ ಅಂಗಡಿಗೆ ಇಂದು ಅಕಸ್ಮಾತ್ ಬೆಂಕಿ ತಗುಲಿರುವ ಘಟನೆ ನಡೆದಿದೆ. ಪ್ರಾಥಮಿಕ ಮಾಹಿತಿ ಪ್ರಕಾರ, ಶಾರ್ಟ್ ಸರ್ಕ್ಯೂಟ್ನಿಂದಲೇ ಬೆಂಕಿ ಉಂಟಾಗಿರಬಹುದೆಂದು ಶಂಕಿಸಲಾಗಿದೆ. ಅಂಗಡಿಯಲ್ಲಿ...
ಪುತ್ತೂರು: ಡಿ.31.ಶ್ರೀ ರಕ್ತೇಶ್ವರಿ ಶ್ರೀ ಚಾಮುಂಡೇಶ್ವರಿ ದೇವಸ್ಥಾನ ಮಿಷನ್ ಮೂಲೆ ಮೊಟ್ಟೆತ್ತಡ್ಕ ಪುತ್ತೂರು ನೂತನ ಶಿಲಾಮಯ ಗರ್ಭಗುಡಿಯ ಶಿಲಾನ್ಯಾಸ ಕಾರ್ಯಕ್ರಮ ಶುಭಾಶೀರ್ವಚನದೊಂದಿಗೆ ನೆರವೇರಲಿದ್ದು ಬಳಿಕ ಅನ್ನಸಂತರ್ಪಣೆ ಜರುಗಲಿದೆ. ಸ್ವಾಮೀಜಿಗಳನ್ನು ಪೂರ್ಣಕುಂಭ ಸ್ವಾಗತ ಮುಕ್ರಂಪಾಡಿ ಜಂಕ್ಷನ್ನಿಂದ ಮೊಟ್ಟೆತ್ತಡ್ಕ...
ಸುಳ್ಯ: ಬಾಡಿಗೆ ನೆಪದಲ್ಲಿ ಕರೆದುಕೊಂಡು ಹೋಗಿ ಮಾರಣಾಂತಿಕ ಹಲ್ಲೆ ನಡೆಸಿದ ಪರಿಣಾಮ ಆಸ್ಪತ್ರೆಗೆ ದಾಖಲಾದ ವ್ಯಕ್ತಿಯೊಬ್ಬರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಘಟನೆಯೊಂದು ಸುಳ್ಯದಿಂದ ವರದಿಯಾಗಿದ್ದು, ಈ ಸಂಬoಧ ಕೃತ್ಯಕ್ಕೆ ಬಳಸಿದ ಕಾರು ಸಹಿತ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ....
ಪುತ್ತೂರು: ನಿವೃತ್ತ ಪ್ರಾಂಶುಪಾಲರೊಬ್ಬರ ಮನೆಗೆ ದರೋಡೆ ಮಾಡಲು ಯತ್ನ ಮಾಡಿರುವ ಘಟನೆಗೆ ಸಂಬಂಧಪಟ್ಟಂತೆ ಪುತ್ತೂರು ನಗರ ಪೊಲೀಸರು ದಂಪತಿಯನ್ನು ಬಂಧನ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಘಟನೆ ವಿವರ: ಪ್ರಕರಣದ ಪಿರ್ಯಾದಿದಾರರಾದ ಪುತ್ತೂರು ಕಸಬಾ ನಿವಾಸಿ ಎ.ವಿ ನಾರಾಯಣ...
ಒಲಿಂಪಿಕ್ ಚಿನ್ನದ ಪದಕ ವಿಜೇತ ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ ಮತ್ತು ಅವರ ಪತ್ನಿ ಹಿಮಾನಿ ಮೋರ್ ದಂಪತಿಗಳು ಮದುವೆಯಾಗಿ ಸುಮಾರು 11 ತಿಂಗಳುಗಳ ಬಳಿಕ ಭವ್ಯ ವಿವಾಹ ಆರತಕ್ಷತೆ (ರಿಸೆಪ್ಷನ್) ಆಯೋಜಿಸಿದ್ದಾರೆ. ಈ ಕಾರ್ಯಕ್ರಮದಲ್ಲಿ...
ರಾಜ್ಯದ ಎಲ್ಲಾ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಜನನ-ಮರಣ ಪ್ರಮಾಣ ಪತ್ರಗಳನ್ನು 21 ದಿನಗಳೊಳಗೆ ಉಚಿತವಾಗಿ ವಿತರಿಸುವಂತೆ ಸರ್ಕಾರ ಕಟ್ಟುನಿಟ್ಟಿನ ಆದೇಶ ಹೊರಡಿಸಿದೆ. 2025ರ ಅಂಕಿ-ಅಂಶಗಳ ಪ್ರಕಾರ, ಶೇ.79.49ರಷ್ಟು ಜನನ ಮತ್ತು ಶೇ.79.24ರಷ್ಟು ಮರಣಗಳು ನಿಗದಿತ...
ಮಂಗಳೂರು : ಕಂಬಳದ ಬೀಷ್ಮ ಎಂದೇ ಖ್ಯಾತರಾಗಿರುವ ಕಂಬಳದ ಹಿರಿಯ ತೀರ್ಪುಗಾರ ಕಾರ್ಕಳದ ಗುಣಪಾಲ ಕಡಂಬ ಅವರಿಗೆ ಕಳೆದ ಶನಿವಾರ ಮಂಗಳೂರು ಕಂಬಳ ಸಮಿತಿ ವತಿಯಿಂದ ಬಂಗ್ರಕೂಳೂರಿನ ಗೋಲ್ಡ್ ಫಿಂಚ್ ಸಿಟಿಯಲ್ಲಿ ಸಂಸದ ಬ್ರಿಜೇಶ್ ಚೌಟ...
ಮಂಗಳೂರು, ಡಿಸೆಂಬರ್ 30, 2025 : 2026ರ ಹೊಸ ವರ್ಷಾಚರಣೆ ಬಗ್ಗೆ ಈಗಾಗಲೇ ಪೆÇಲೀಸ್ ಇಲಾಖೆಯ ವತಿಯಿಂದ ಮಾರ್ಗ ಸೂಚಿಗಳನ್ನು ಹೊರಡಿಸಲಾಗಿದ್ದು, ಎಲ್ಲಾ ಕಾರ್ಯಕ್ರಮಗಳ ಆಯೋಜಕರು, ಸಾರ್ವಜನಿಕರು ನೀಡಲಾದ ಸೂಚನೆಗಳನ್ನು ಕಡ್ಡಾಯವಾಗಿ ಪಾಲಿಸುವುವಂತೆ ಪೊಲೀಸ್ ಇಲಾಖೆ...
ತಮಿಳುನಾಡಿನ ತಿರುವಳ್ಳೂರಿನಲ್ಲಿ 3 ಕೋಟಿ ರೂ. ವಿಮೆ ಹಣಕ್ಕಾಗಿ ಮಕ್ಕಳೇ ತಂದೆಗೆ ಹಾವು ಕಚ್ಚಿಸಿ ಕೊಲೆ ಮಾಡಿದ್ದಾರೆ. ಸರ್ಕಾರಿ ನೌಕರ ಗಣೇಶ್ ಅವರನ್ನು ಉದ್ದೇಶಪೂರ್ವಕವಾಗಿ ಹಾವು ಕಡಿತಕ್ಕೆ ಗುರಿಪಡಿಸಿ ಕೊಲೆ ಮಾಡಲಾಗಿದೆ. ಆರಂಭದಲ್ಲಿ ಆಕಸ್ಮಿಕವೆಂದು ನಂಬಲಾಗಿತ್ತು,...
ನನ್ನ ಪತ್ನಿ ಭವ್ಯ ಅಪಘಾತದಲ್ಲಿ ತಲೆಗೆ ಗಂಭೀರ ಗಾಯಗೊಂಡು ಮಂಗಳೂರಿನ ಫಸ್ಟ್ ನ್ಯೂರೋ ಆಸ್ಪತ್ರೆಯಲ್ಲಿ ಕೋಮಾ ಸ್ಥಿತಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕಳೆದ 14 ದಿನಗಳಿಂದ ನಿರಂತರ ಚಿಕಿತ್ಸೆ ನೀಡಲಾಗುತ್ತಿದ್ದು, ಇದುವರೆಗೆ ಸುಮಾರು 12 ಲಕ್ಷ ರೂಪಾಯಿ...
ಬೆಂಗಳೂರು: 2026ರ ಸಾರ್ವತ್ರಿಕ ರಜೆ ಪಟ್ಟಿಗೆ ಕರ್ನಾಟಕ ಸರ್ಕಾರ ಅನುಮೋದನೆ ನೀಡಿದೆ. ರಾಷ್ಟ್ರೀಯ ಹಬ್ಬಗಳು, ನಾಡ ಹಬ್ಬ ಸೇರಿದಂತೆ ಮುಂದಿನ ವರ್ಷ ಒಟ್ಟು 20 ದಿನಗಳು ಸರ್ಕಾರಿ ರಜೆ ಇರಲಿದೆ. ಗುರುವಾರ ಬೆಂಗಳೂರಿನ ವಿಧಾನಸೌಧದಲ್ಲಿ ನಡೆದ...
ಮಂಗಳೂರು: ಪುತ್ತೂರು ಡೆಲಿವರಿ ಪ್ರಕರಣದಲ್ಲಿ ಆರೋಪಿ ಶ್ರೀಕೃಷ್ಣನ ಕುಟುಂಬದವರು ವಿಧಿಸಲಾಗಿರುವ ಷರತ್ತುಗಳು ಒಪ್ಪಿಕೊಳ್ಳಲೂ ಸಾಧ್ಯವಿಲ್ಲದ ಮಟ್ಟದಲ್ಲಿವೆ. ಹಿರಿಯ ವಕೀಲರೊಂದಿಗೆ ಚರ್ಚೆ ನಡೆಸಿದ ಬಳಿಕ ಕೆಲವೇ ದಿನಗಳಲ್ಲಿ ಆ ಕಂಡೀಷನ್ಗಳನ್ನು ದಾಖಲೆ ಸಮೇತ ಬಹಿರಂಗಪಡಿಸಲಾಗುವುದು ಎಂದು ಅಖಿಲ...
ಕರ್ನಾಟಕದ ಅತೀ ದೊಡ್ಡ ಪುಸ್ತಕ ಮಳಿಗೆ ಎಸ್ ಎಲ್ ವಿ ಬುಕ್ ಹೌಸ್ ಕಳೆದ ತಿಂಗಳು ಪುತ್ತೂರಿನ ನೆಹರೂ ನಗರದಲ್ಲಿ ಶುಭಾರಂಭಗೊಂಡಿತ್ತು. ಪುತ್ತೂರಿನ ಜನರ ಬೇಡಿಕೆಯ ಮೇರೆಗೆ ಪುತ್ತೂರಿನಲ್ಲಿ ಪುಸ್ತಕ ಮತ್ತು ಸ್ಟೇಷನರಿ ಮತ್ತು ಗಿಫ್ಟ್...
ಪುತ್ತೂರು: ರಸ್ತೆಯಿಲ್ಲದೆ ಪರದಾಡುತ್ತಿದ್ದ ನರಿಮೊಗರು ಗ್ರಾಮದ ಅಲಂಗ- ಶಿಬರ-ನಡುವಾಲ್ ನಿವಾಸಿಗಳಿಗ ೨೫ ವರ್ಷಗ ಹಿಂದಿನ ಬೇಡಿಕೆ ಈಡೇರಿದೆ, ರಸ್ತೆ ಸಂಪರ್ಕವೇ ಇಲ್ಲದ ಈ ಪ್ರದೇಶಕ್ಕೆ ಸ್ಥಳೀಯರ ಜೊತೆ ಮಾತುಕತೆ ನಡೆಸಿ ರಸ್ತೆ ನಿರ್ಮಿಸಿಕೊಟ್ಟಿದ್ದಾರೆ. ಈ ರಸ್ತೆ...