Connect with us

ಇತರ

ಕೋಡಿಂಬಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಅರ್ಬಿ ಎಂಬಲ್ಲಿ ಕಸ ಬಿಸಾಡಿದ ಕಿಡಿಕೇಡಿಗಳ ಪತ್ತೆಗೆ ಸ್ವಚ್ಛತಾ ವಾಹಿನಿ ಸಜ್ಜು.. ಗ್ರಾಮ ಪಂಚಾಯತ್ ನಿಂದ ನಗರ ಪೊಲೀಸ್ ಠಾಣೆಗೆ ದೂರು.

Published

on

ಕೋಡಿಂಬಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಕೆಲವೊಂದು ಕಡೆ,ಬೇರೆ ಬೇರೆ ಊರಿನವರು ಕಸ ಬಿಸಾಡಿಕೊಂಡು ಹೋಗುವುದನ್ನು ತಡೆಹಿಡಿಯಲು, ಕೋಡಿಂಬಾಡಿ ಗ್ರಾಮ ಪಂಚಾಯತ್ ಅನೇಕ ಕಾರ್ಯಕ್ರಮವನ್ನು ಅನುಸರಿಸಿತು, ಇದರೊಂದಿಗೆ ಗ್ರಾಮಪಂಚಾಯಿತ್ ಗೆ ಗ್ರಾಮ ಗಾಂಧಿ ಪುರಸ್ಕಾರ ಪ್ರಶಸ್ತಿಯೂ ಲಭಿಸಿತು, ಅದರ ಜೊತೆಗೆ 5,00,000 ರೂ ಗಳ ವಿಶೇಷ ಅನುದಾನವು ಸರಕಾರದಿಂದ ದೊರೆಯಿತು.

ಇನ್ನು ಕೂಡ ಬೇರೆ ಊರಿನವರು ಕಸ ಬಿಸಾಡುವುದನ್ನು ತಡೆಯಬೇಕೆಂಬ ದಿಟ್ಟ ನಿರ್ಧಾರದಿಂದ ಕಸ ಬಿಸಾಡುವ ಪ್ಯಾಕೆಟಗಳನ್ನು ತೆಗೆದುಕೊಂಡು ಅದರಲ್ಲಿರುವ ಕುರುವು ಗಳನ್ನು ಪತ್ತೆ ಮಾಡುವ ಕಾರ್ಯವನ್ನು ಮುಂದುವರಿಸಿತು, ಇದೀಗ ಕಳೆದ ವಾರ ಒಬ್ಬರಿಗೆ 3000 ದಂಡ ವಿಧಿಸಿತು, ಇದೀಗ ದಾರಂದಕುಕ್ಕು ಪರಿಸರದ ಅಜ್ಜು ಮತ್ತು ಪುತ್ತೂರಿನ ಬ್ಯುಟಿ ಪಾರ್ಲರ್ ನ ಯಶೋದಾ ಗೌಡ ಎಂಬವರ ವಿಳಾಸ ಪತ್ತೆಹಚ್ಚಲಾಗಿದೆ, ಬ್ಯೂಟಿ ಪಾರ್ಲರ್ ಗೆ ಸಂಬಂಧಪಟ್ಟ ಕಸಗಳು ಕೂಡ ಅದರಲ್ಲಿ ಲಭ್ಯವಾಗಿದೆ,

ಸಂಪರ್ಕಕ್ಕೆ ಸಿಕ್ಕಿ ಸರಿಯಾಗಿ ಪಂಚಾಯಿತ್ ಗೆ ಸ್ಪಂದನೆ ಕೊಡದ ಕಾರಣ ಪುತ್ತೂರು ನಗರ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ. ಮುಂದೆ ಇದಕ್ಕೆ ತಕ್ಕ ಕ್ರಮವನ್ನು ತೆಗೆದುಕೊಳ್ಳುವುದಾಗಿ ಮತ್ತು ಕಸ ಬಿಸಾಡಿದವರ ಮನೆಗೆ ಅಥವಾ ಅಂಗಡಿಗೆ ಒಂದು ಪಿಕಪ್ ಕಸವನ್ನು ತೆಗೆದುಕೊಂಡು ಹಾಕಲಾಗುವುದು ಎಂದು ಪಂಚಾಯತ್ ಉಪಾಧ್ಯಕ್ಷರಾದ ಜಯಪ್ರಕಾಶ್ ಬದಿನಾರ್ ಅವರು ತಿಳಿಸಿದರು. ದೂರು ಕೊಡುವ ಸಂದರ್ಭದಲ್ಲಿ ಕೋಡಿಂಬಾಡಿ ಗ್ರಾಮ ಪಂಚಾಯತ್ ಕಾರ್ಯದರ್ಶಿಯನ್ನು ಅಣ್ಣು ಉಪಸ್ಥಿತರಿದ್ದರು.

 

Continue Reading
Click to comment

Leave a Reply

Your email address will not be published. Required fields are marked *

Advertisement