Published
17 hours agoon
By
Akkare News
ಬೆಂಗಳೂರು: ಗೋವಾದಲ್ಲಿ ಶಿಕ್ಷಣ ಸಂಸ್ಥೆ ಸ್ಥಾಪಿಸಲು ಜಮೀನು ಕೊಡಿಸುವುದಾಗಿ ನಂಬಿಸಿ ಯುವ ಕಾಂಗ್ರೆಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಕ್ಷಾ ರಾಮಯ್ಯ ಅವರಿಗೆ ₹8.13 ಕೋಟಿ ವಂಚಿಸಿರುವ ಪ್ರಕರಣ ಬೆಳಕಿಗೆ ಬಂದಿದೆ.
ಈ ಸಂಬಂಧ ರಕ್ಷಾ ರಾಮಯ್ಯ ಅವರ ಕಂಪನಿ ಪ್ರತಿನಿಧಿ ದರ್ಶನ್ ನೀಡಿರುವ ದೂರಿನನ್ವಯ ಪ್ರಕರಣ ದಾಖಲಿಸಿಕೊಂಡಿರುವ ಸದಾಶಿವನಗರ ಠಾಣೆ ಪೊಲೀಸರು, ಗೋವಾದ ಮಪುಸಾ ನಗರಸಭೆ ಕಾರ್ಪೊರೇಟರ್ ತಾರಕ್ ಮಂಗೇಶ್ ಅರೋಲ್ಕರ್ (47) ಎಂಬಾತನನ್ನು ಬಂಧించి ವಿಚಾರಣೆ ನಡೆಸಿದ್ದಾರೆ.



ಬಾಡಿ ವಾರೆಂಟ್ ಮೇಲೆ ವಶಕ್ಕೆ: ಮತ್ತೊಂದು ₹40 ಲಕ್ಷ ವಂಚನೆ ಪ್ರಕರಣದಲ್ಲಿ ಗೋವಾ ಪೊಲೀಸರಿಂದ ಬಂಧನಕ್ಕೊಳಗಾಗಿ ಅಲ್ಲಿನ ಜೈಲಿನಲ್ಲಿದ್ದ ತಾರಕ್ ಮಂಗೇಶ್ನನ್ನು ಸದಾಶಿವನಗರ ಪೊಲೀಸರು ಬಾಡಿ ವಾರೆಂಟ್ (Body Warrant) ಆಧಾರದ ಮೇಲೆ ಕಸ್ಟಡಿಗೆ ಪಡೆದು ಸುದೀರ್ಘ ವಿಚಾರಣೆ ನಡೆಸಿದ್ದಾರೆ. ವಿಚಾರಣೆ ಮುಗಿದ ಬಳಿಕ ಆತನನ್ನು ಮತ್ತೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಈ ಜಮೀನು ವಂಚನೆ ಪ್ರಕರಣದಲ್ಲಿ ಭಾಗಿಯಾಗಿರುವ ಮತ್ತೊಬ್ಬ ಪ್ರಮುಖ ಆರೋಪಿ ಯೋಗೇಶ್ ಎಂಬಾತನಿಗಾಗಿ ಪೊಲೀಸರು ಶೋಧ ಕಾರ್ಯ ತೀವ್ರಗೊಳಿಸಿದ್ದಾರೆ. 


