Published
16 hours agoon
By
Akkare News
ಪುತ್ತೂರು: ನ.8 ರಂದು ದೀಪಾವಳಿ ಪ್ರಯುಕ್ತ ರೈ ಎಸ್ಟೇಟ್ಸ್ ಎಜುಕೇಶನಲ್ ಆಂಡ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಪುತ್ತೂರಿನ ಕೊಂಬೆಟ್ಟು ತಾಲೂಕು ಕ್ರೀಡಾಂಗಣದಲ್ಲಿ ನಡೆಯುವ ಅಶೋಕ ಜನಮನ 2026 ರ ಕಾರ್ಯಕ್ರಮಕ್ಕೆ ಪುತ್ತೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಪ್ರತೀ ಮನೆಗೂ ಆಮಂತ್ರಣವನ್ನು ನೀಡುತ್ತಿದ್ದೇನೆ, ಕಾರ್ಯಕ್ರಮದಲ್ಲಿ ಪ್ರತೀಯೊಬ್ಬರೂ ಭಾಗವಹಿಸುವ ಮೂಲಕ ಕಾರ್ಯಕ್ರಮವನ್ನು ಯಸಸ್ಸುಗೊಳಿಸಬೇಕು, ಟ್ರಸ್ಟ್ನ ಸದಸ್ಯರು ಗ್ರಾಮಗಳಿಗೆ ತೆರಳಿ ಪ್ರತೀ ಕುಟುಂಬಕ್ಕೂ ಆಹ್ವಾನ ನೀಡಲಿದ್ದಾರೆ ಎಂದು ಶಾಸಕ ಅಶೋಕ್ ರೈ ತಿಳಿಸಿದರು.

ಅಶೋಕ ಜನಮನ ಕಾರ್ಯಕ್ರಮದ ಪ್ರಯುಕ್ತ ಶಾಸಕರ ಕಚೇರಿ ಸಭಾ ಭವನದಲ್ಲಿ ಅ.5 ರಂದು ನಡೆದ ಪೂರ್ವಭಾವಿ ಸಭೆಯಲ್ಲಿ ಈ ವಿಷಯ ತಿಳಿಸಿದರು. ಕಳೆದ 14 ವರ್ಷದಿಂದ ದೀಪಾವಳಿ ಪ್ರಯುಕ್ತ ನಮ್ಮ ಟ್ರಸ್ಟ್ ವತಿಯಿಂದ ಈ ಕಾರ್ಯಕ್ರಮವನ್ನು ಆಯೋಜನೆ ಮಾಡುತ್ತಿದ್ದೇವೆ. ಸಣ್ಣ ಮಟ್ಟದಲ್ಲಿ ಪ್ರಾರಂಭವಾದ ಈ ಕಾರ್ಯಕ್ರಮ ಇಂದು ಲಕ್ಷಾಂತರ ಮಂದಿ ಸೇರುವ ಕಾರ್ಯಕ್ರಮವಾಗಿ ಮೂಡಿಬರುತ್ತಿದೆ. ಕಾರ್ಯಕ್ರಮದಲ್ಲಿ ಭಾಗವಹಿಸುವ ಪ್ರತೀಯೊಬ್ಬರ ಆಶೀರ್ವಾದ ಮತ್ತು ಸಲಹೆ ಸಹಕಾರವೇ ಕಾರ್ಯಕ್ರಮ ಯಶಶ್ವಿಯತ್ತ ಸಾಗಲು ಕಾರಣವಾಗಿದೆ ಎಂದು ಹೇಳಿದರು. ಪ್ರತೀ ವರ್ಷದಂತೆ ಈ ವರ್ಷವೂ ನಮ್ಮ ಟ್ರಸ್ಟ್ ಸದಸ್ಯರು ಗ್ರಾಮ ಗ್ರಾಮಕ್ಕೆ ತೆರಳಿ ಕಾರ್ಯಕ್ರಮಕ್ಕೆ ಗ್ರಾಮಸ್ಥರನ್ನು ಆಹ್ವಾನಿಸಲಿದ್ದಾರೆ ಇದಕ್ಕಗಿ ಪ್ರತೀ ಗ್ರಾಮದಲ್ಲೂ ಸಮಿತಿಯನ್ನು ರಚನೆ ಮಾಡಲಾಗಿದೆ ಎಂದು ಹೇಳಿದರು.

ತಟ್ಟೆ-ಸೀರೆ-ಬೆಡ್ಶೀಟ್ ಆಯ್ಕೆ ನಿಮ್ಮದು ಕಾರ್ಯಕ್ರಮದಲ್ಲಿ ಭಾಗವಹಿಸುವ ಪ್ರತೀಯೊಬ್ಬರಿಗೂ ದೀಪಾವಳಿ ಉಡುಗೋರೆಯನ್ನು ನೀಡಲಾಗುವುದು. ಈ ಬಾರಿ ಮೂರು ಬಗೆಯ ಉಡುಗೋರೆಗಳನ್ನು ನಿಮ್ಮ ಆಯ್ಕೆಗೆ ನೀಡಲಾಗಿದೆ. ತಟ್ಟೆ, ಸೀರೆ ಮತ್ತು ಬೆಡ್ ಶೀಟ್ಗಳನ್ನು ನೀಡಲಾಗುತ್ತಿದ್ದು ಇದರಲ್ಲಿ ಯಾವುದು ಬೇಕಾದರೂ ಒಂದು ಐಟಂನ್ನು ಪಡೆದುಕೊಳ್ಳಬಹುದಾಗಿದೆ. ನಮ್ಮ ಕಾರ್ಯಕ್ರಮಕ್ಕೆ ಪ್ರೀತಿಯಿಂದ ಆಶೀರ್ವಾದ ಮಾಡಲು ಬರುವ ಬಂಧುಗಳಿಗೆ ಸಣ್ಣ ಉಡುಗೋರೆಯನ್ನಾಗಿ ನೀಡಲಾಗುತ್ತದೆ. ಕಾರ್ಯಕ್ರಮಕ್ಕೆ ಬರುವ ಪ್ರತೀಯೊಬ್ಬರೂ ಇದನ್ನು ವಿನಯಪೂರ್ವಕವಾಗಿ ಸ್ವೀಕರಿಸಬೇಕು ಎಂದು ಶಾಸಕರು ಮನವಿ ಮಾಡಿದರು. 
ವೇದಿಕೆಯಲ್ಲಿ ಟ್ರಸ್ಟ್ ಸದಸ್ಯರಾದ ಮುರಳೀಧರ್ ರೈ ಮಟಂತಬೆಟ್ಟು, ಮಹಮ್ಮದ್ ಬಡಗನ್ನೂರು, ಪದ್ಮನಾಭ ಪೂಜಾರಿ ಸಣ್ಣಗುತ್ತು, ನಿಹಾಲ್ ಪಿ ಶೆಟ್ಟಿ, ಡಾ. ರಾಜಾರಾಮ್ ಕೆ ಬಿ, ಕೃಷ್ಣಪ್ರಸಾದ್ ಆಳ್ವ, ಜಯಪ್ರಕಾಶ್ ಬದಿನಾರ್, ರಾಮಣ್ಣ ಪಿಲಿಂಜ, ಯೋಗೀಶ್ ಸಾಮಾನಿ ಹಾಗೂ ಟ್ರಸ್ಟ್ ಸದಸ್ಯರು ಸಭೆಯಲ್ಲಿ ಉಪಸ್ಥಿತರಿದ್ದರು.
ಅಶೋಕಜನಮನ 2026 ರ ಕಾರ್ಯಕ್ರಮದ ಬಗ್ಗೆ ಪ್ರತೀ ಗ್ರಾಮಕ್ಕೆ ತೆರಳಿ ನಾವು ಪ್ರಚಾರ ಕಾರ್ಯವನ್ನು ಮಾಡಲಿದ್ದೇವೆ. ಪ್ರತೀಯೊಬ್ಬರೂ ಭಾಗವಹಿಸಬೇಕು ಎಂಬುದು ನಮ್ಮ ಉದ್ದೇಶವಾಗಿದೆ. ಇದು ದೀಪಾವಳಿ ಪ್ರಯುಕ್ತ ಶಾಸಕರು ನಡೆಸುವ ಕಾರ್ಯಕ್ರಮ ಇದರಲ್ಲಿ ಜಾತಿ, ಮತ ಬೇಧವಿಲ್ಲದೆ ಎಲ್ಲರೂ ಭಾಗವಹಿಸುವ ಮೂಲಕ ಆಶೀರ್ವದಿಸುವ ಕಾರ್ಯವನ್ನು ಮಾಡಬೇಕು, ಇದು ಎಲ್ಲರ ಕಾರ್ಯಕ್ರಮವಾಗಿದೆ. ಸುದೇಶ್ ಶೆಟ್ಟಿ, ಕಾರ್ಯಾದ್ಯಕ್ಷರು ರೈ ಚಾರಿಟೇಬಲ್ ಟ್ರಸ್ಟ್



