ನಮ್ಮೊಂದಿಗೆ ಸಂಪರ್ಕ ಸಾಧಿಸಿ

ಸ್ಥಳೀಯ

ಬೇಡಿಕೆಯಾಗಿ ಉಳಿದು ಹೋದ ಆತೂರು ಎಲ್ಯoಗ ರಸ್ತೆ ..!!

Published

on

ಕಡಬ: ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಕೊಯಿಲ ಗ್ರಾಮದಲ್ಲಿ ಆತೂರು ಪೇಟೆ -ಹುಸೈನ್ ನಗರ – ಎಲ್ಯoಗ – ಆತೂರು ಶ್ರೀ ಸದಾಶಿವ ದೇವಸ್ಥಾನ ವೆಂಬ ರಸ್ತೆಯಲ್ಲಿ ಆತೂರು ಶ್ರೀ ಸದಾಶಿವ ದೇವಸ್ಥಾನ ದಿಂದ ಎಲ್ಯoಗದವರೆಗೂ ಕಾಂಕ್ರೀಟ್ ರಸ್ತೆಯಾಗಿದೆ. ಆದರೆ ಎಲ್ಯoಗ ದಿಂದ ಆತೂರು ಪೇಟೆ ವರೆಗೆ ಸರಿಯಾದ ರಸ್ತೆವಿರುವುದಿಲ್ಲ. ಆತೂರು ಪೇಟೆ ಯಿಂದ 250 ಮೀಟರ್ ಟಾರು ರಸ್ತೆಯಿದ್ದು, ಇದೀಗ ಟಾರು ಕೂಡಾ ಕಿತ್ತು ಹೋಗಿದೆ. ಕಿತ್ತು ಹೋದ ಕಾರಣದಿಂದ ವಾಹನ ಸವಾರರಿಗೆ ಹೋಗಲು ಕಷ್ಟವಾಗುತ್ತಿದೆ. ಹುಸೈನ್ ನಗರದಲ್ಲಿ 50 ಮೀಟರ್ ನಷ್ಟು ಕಾಂಕ್ರೀಟ್ ರಸ್ತೆಯಾಗಿದ್ದು, ಉಳಿದ ಸ್ಥಳದಲ್ಲಿ ಟಾರು ಅಥವಾ ಕಾಂಕ್ರೀಟ್ ರಸ್ತೆ ಆಗಲಿಲ್ಲ.

ಮಳೆಗಾಳದಲ್ಲಿ ಈ ರಸ್ತೆಯಲ್ಲಿ ಹೋಗಲು ಜನರು ಪರದಾಟ ನಡೆಸುತ್ತಿದ್ದು, ಮಳೆಗಾಲದಲ್ಲಿ ಕೆಲವೊಂದು ಸ್ಥಳದಲ್ಲಿ ರಸ್ತೆಯು ನೀರು ತುಂಬಿದ ಹೊಂಡವಾಗಿರುತ್ತದೆ. ಈ ರಸ್ತೆಯಲ್ಲಿ ನೂರಾರು ವಿದ್ಯಾರ್ಥಿಗಳು, ವಾಹನಗಳು ಹಾಗು ದಿನ ನಿತ್ಯ ಜನರು ಕೆಲಸಕ್ಕೆ ಹೋಗಲು ಅವಲಂಬನೆ ಮಾಡುತ್ತಾರೆ. ಅದು ಅಲ್ಲದೆ 50 ರಷ್ಟು ಅಲ್ಪಸಂಖ್ಯಾತ ಮನೆಗಳಿದ್ದು ಮತ್ತು 1 ಮಸೀದಿ ಇದೆ. ಈ ರಸ್ತೆಯು ಆತೂರು ಶ್ರೀ ಸದಾಶಿವ ದೇವಸ್ಥಾನ ಹಾಗು ಮುಹ್ಯುದ್ದೀನ್ ಜುಮಾ ಮಸೀದಿ ಆತೂರಿಗೆ ಪ್ರಾಮುಖ್ಯ ರಸ್ತೆಯಾಗಿದೆ.

ಶಾಸಕರಿಗೆ, ಅಲ್ಪಸಂಖ್ಯಾತ ಇಲಾಖೆಗೆ ಹಾಗು ಗ್ರಾಮ ಪಂಚಾಯತ್ ಗ್ಗೆ ಮನವಿ ಮಾಡಿದ್ದರೂ ಯಾವುದೇ ಪ್ರಯೋಜನೆ ವಿಲ್ಲದಂತಾಗಿದೆ. ಹಲವಾರು ವರ್ಷಗಳಿಂದ ಜನರು ಹಾಗು ವಿದ್ಯಾರ್ಥಿಗಳು ಸಮರ್ಪಕವಾದ ರಸ್ತೆ ಇಲ್ಲದೆ ತೊಂದರೆ ಅನುಭವಿಸುವಂತಾಗಿದೆ. ಪಂಚಾಯತ್ ಅಥವಾ ಸರಕಾರ ಯಾವಾಗ ರಸ್ತೆ ಅಭಿವೃದ್ಧಿ ಮಾಡುತ್ತೆ ಎಂಬುದು ಕಾದು ನೋಡಬೇಕಾಗಿದೆ.

Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version