ನಮ್ಮೊಂದಿಗೆ ಸಂಪರ್ಕ ಸಾಧಿಸಿ

ಆರೋಗ್ಯ

ವಿಶ್ವ ಬೆನ್ನುಹುರಿ ಅಪಘಾತ ದಿನಾಚರಣೆ: ರಾಜ್ಯ ಮಟ್ಟದ ರಿಹ್ಯಾಬ್ ಮೇಳ

Published

on

  • ಶಾಸಕ ಅಶೋಕ್ ರೈಯವರ ಬಡವರ ಮೇಲಿನ ಪ್ರೀತಿ ಅಪಾರವಾಗಿದೆ: ದಿನೇಶ್ ಗುಂಡೂರಾವ್

ಪುತ್ತೂರು: ಬಡವರ ಪರ ಕಾಳಜಿ ಇರುವ ಅನೇಕ ಮಂದಿಯನ್ನು ನೋಡಿದ್ದೇನೆ ಆದರೆ ಒಬ್ಬ ಶಾಸಕನಾಗಿ ಬಡವರ ಪರವೇ ಸದಾ ವಕಾಲತ್ತು ವಹಿಸಿ ಮಾತನಾಡುವ ಮತ್ತು ಬಡವರ ಬಗ್ಗೆ ಅಪಾರ ಪ್ರೀತಿಯನ್ನು ಹೊಂದಿರುವ ಪುತ್ತೂರು ಶಾಸಕ ಅಶೋಕ್ ರೈಯವರ ಗುಣವನ್ನು ನಾನು ಅಭಿನಂದಿಸುವುದಾಗಿ ಜಿಲ್ಲಾ ಉಸ್ತುವಾರಿ ಹಾಗೂ ಕರ್ನಾಟಕ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.

ಅವರು ಮಂಗಳೂರು ಮೋತಿಮಹಲ್ ಸಭಾಂಗಣದಲ್ಲಿ ನಡೆದ ವಿಶ್ವ ಬೆನ್ನುಹುರಿ ಅಪಘಾತ ದಿನಾಚರಣೆ ಪ್ರಯುಕ್ತ ಕನ್ಯಾಡಿ ಸೇವಾ ಭಾರತಿ ಸಂಸ್ಥೆ ಆಯೋಜಿಸಿದ ರಾಜ್ಯ ಮಟ್ಟದ ರಿಹ್ಯಾಬ್ ಮೇಳವನ್ನು ಉದ್ಘಾಟಿಸಿ ಮಾತನಾಡಿದರು.

ರಾಜ್ಯದಲ್ಲಿ ಒಟ್ಟು 25 ಸಾವಿರ ಮಂದಿ ಬೆನ್ನು ಮೂಲೆ ಮುರಿತಕ್ಕೊಳಗಾಗಿ ಬೆಡ್ ರೆಸ್ಟ್‌ನಲ್ಲಿದ್ದಾರೆ, ಅವರಿಗೆ ಸರಕಾರದ ವತಿಯಿಂದ ತಿಂಗಳಿಗೆ 1400 ರೂ ಮಾಸಾಶನ ನೀಡುತ್ತಿದೆ. ಬೆನ್ನು ಮೂಲೆ ಮುರಿತಕ್ಕೊಳಗಾಗಿ ಮಲಗಿದ್ದಲ್ಲೇ ಕಾಲಕಳೆಯುವ ಮಂದಿಯಲ್ಲಿ ಯುವಕರು, ಮಕ್ಕಳೂ ಇದ್ದಾರೆ ಇಂಥವರ ಪರ ವಿಧಾನಸಭೆಯಲ್ಲಿ ಧ್ವನಿ ಎತ್ತುವ ಮೂಲಕ ಪುತ್ತೂರು ಶಾಸಕರು ಆ ಕುಟುಂಬಕ್ಕೆ ಆಸರೆ ನೀಡುವಂತೆ ಸರಕಾರವನ್ನು ಒತ್ತಾಯ ಮಾಡಿದ್ದಾರೆ ಇದಕ್ಕೆ ನಾನು ಶಾಸಕರಿಗೆ ಅಭಿನಂದನೆಯನ್ನು ಸಲ್ಲಿಸುತ್ತೇನೆ. ನಾನು ಇಂದು ನಿಮ್ಮ ಸಮಸ್ಯೆಯನ್ನು ಆಲಿಸಿದ್ದೇನೆ, ನಿಮ್ಮನ್ನು ಕಂಡು ನನ್ನ ಮನಸ್ಸಿಗೂ ದುಖವಾಗಿದೆ. ಸರಕಾರದ ಜೊತೆ ಚರ್ಚಿಸಿಸಿ ನಿಮಗೆ ಸರಕಾರದಿಂದ ದೊರೆಯಬೇಕಾದ ಸೌಲಭ್ಯಗಳನ್ನು ವೃದ್ದಿಸುವಲ್ಲಿ ಕ್ರಮಕೈಗೊಳ್ಳುತ್ತೇನೆ ಎಂದು ಸಚಿವರು ಹೇಳಿದರು.

  • 5000 ಮಾಸಾಶನ ಕೊಡುವ ತನಕ ನನ್ನ ಹೋರಾಟ ಮುಂದುವರೆಯುತ್ತದೆ; ಶಾಸಕ ರೈ

ಬೆನ್ನುಮೂಲೆ ಮುರಿತಕ್ಕೊಳಗಾಗಿ ಬೆಡ್ ರೆಸ್ಟ್‌ನಲ್ಲಿರುವ ರಾಜ್ಯದ ಎಲ್ಲಾ ೨೫೦೦೦ ಮಂದಿಗೂ ತಿಂಗಳಿಗೆ ೫ ಸಾವಿರ ಮಾಸಾಶನವನ್ನು ಸರಕಾರ ಕೊಡಬೇಕು. ಮೂಲೆ ಮುರಿತಕ್ಕೊಳಗಾದವರ ಪ್ಯಕಿ ಬಹುತೇಕರು ಮನೆಯ ಯಜಮಾನರು, ಮನೆಯ ಯಜಮಾನ ಮಲಗಿದ್ದಲ್ಲೇ ಇದ್ದರೆ ಆ ಕುಟುಂಬವನ್ನು ಸಲಹುವವರು ಯಾರು? ಇಂಥವರ ಬಗ್ಗೆ ಸರಕರ ವಿಶೇಷ ಕಾಳಜಿ ವಹಿಸಬೇಕು. ಪ್ರಥಮ ವಿಧಾನಸಭಾ ಅವಧಿಯಲ್ಲೇ ಇವರ ಬಗ್ಗೆ ಮಾತನಾಡಿ ಸರಕಾರದ ಗಮನ ಸೆಳೆದಿದ್ದೇನೆ, ಮುಂದಿನ ದಿನಗಳಲ್ಲಿ ಇವರಿಗೆ ಖಂಡಿತವಾಗಿಯೂ ಸರಕಾರ ನೆರವು ನೀಡುತ್ತದೆ ಎಂಬ ಸಂಪೂರ್ಣ ವಿಶ್ವಾಸ ನನ್ನಲ್ಲಿದೆ ಎಂದು ಹೇಳಿದ ಪುತ್ತೂರು ಶಾಸಕರಾದ ಅಶೋಕ್ ರೈಯವರು ನಾನು ಸದಾ ನಿಮ್ಮ ಬೆಂಬಲಕ್ಕೆ ಇದ್ದೇನೆ ಎಂದು ಹೇಳಿದರು. ಕೆಲವು ಖಾಸಗಿ ಸಂಘ ಸಂಸ್ಥೆಗಳಿಗೂ ನಾನು ನಿಮ್ಮ ಕುಟುಂಬಕ್ಕೆ ನೆರವು ನೀಡುವಂತೆ ಸೂಚಿಸಿದ್ದೇನೆ ಎಂದು ಶಾಸಕರು ಹೇಳಿದರು.

ಕಣ್ಣೀರು ಹಾಕಿದ ಶಾಸಕರು
ಸಭಾ ಕಾರ್ಯಕ್ರಮ ಮುಗಿದ ಬಳಿಕ ಸಭೆಯಲ್ಲಿದ್ದ ಸುಮಾರು 200 ಕ್ಕೂ ಮಿಕ್ಕಿ ಬೆನ್ನುಮೂಲೆ ಮುರಿತಕ್ಕೊಳಗಾದ ಮಂದಿಯ ಬಳಿ ಬಂದು ಸಾಂತ್ವನ ಹೇಳಿದರು. ಈ ಪೈಕಿ ಇಬ್ಬರು ಪುಟ್ಟ ಮಕ್ಕಳ ಪರಿಸ್ಥಿತಿಯನ್ನು ಕಂಡು ಶಾಸಕರು ಕಣ್ಣೀರಾದರು. ಬೆನ್ನು ಮೂಲೆ ಮುರಿತಕ್ಕೊಳಗಾದವರ ಪೈಕಿ ಬಹುತೇಕ ಮಂದಿ ಯುವಕರೇ ಆಗಿದ್ದಾರೆ. ನಡೆಯಲು ಸಾದ್ಯವಾಗದೆ ವೀಲ್ ಚೆಯರ್ ಮೂಲಕವೇ ತೆರಳುವ ಈ ನರಕಯಾತನೆಯನ್ನು ಕಂಡು ಶಾಸಕರು ಕಣ್ಣೀರು ಹಾಕಿದ್ದಾರೆ. ಧೈರ್ಯ ಕಳೆದುಕೊಳ್ಳಬೇಡಿ ಖಂಡಿತವಾಗಿಯೂ ಸರಕಾರ ನಿಮ್ಮ ಜೊತೆ ಇದ್ದೇ ಇದೆ ಎಂದು ಶಾಸಕರು ಭರವಸೆಯನ್ನು ನೀಡಿದರು.ಮಂಗಳೂರಿಗೆ ಬಂದಿರುವ ಎಲ್ಲಾ ರೋಗಿಗಳಿಗೂ ವಾಸ್ತವ್ಯದ ವ್ಯವಸ್ಥೆಯನ್ನು ಶಾಶಕರೇ ಮಾಡಿಕೊಟ್ಟಿದ್ದರು.

ವೇದಿಕೆಯಲ್ಲಿ ವಿಧಾನಪರಿಷತ್ ಸದಸ್ಯ ಹರೀಶ್ ಕುಮಾರ್ ಮತ್ತು ಕನ್ಯಾಡಿ ಸೇವಾಭಾರತಿ ಸಂಸ್ಥೆಯ ಪ್ರಮುಖರು ಉಪಸ್ಥಿತರಿದ್ದರು.

Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version