Published
1 year agoon
By
Akkare Newsಪ್ರಥಮ ಬಾರಿಗೆ ಪುತ್ತೂರಿನಲ್ಲಿ ರಾಜ್ಯಮಟ್ಟದ ಕ್ರೀಡಾಕೂಟ: ಹೇಮನಾಥ ಶೆಟ್ಟಿ
ಪುತ್ತೂರು: ಡಿಸೆಂಬರ್ ತಿಂಗಳ 1,2, 3 ಮತ್ತು 4 ರಂದು ಪುತ್ತೂರಿನ ಕೊಂಬೆಟ್ಟು ತಾಲೂಕು ಕ್ರೀಡಾಂಗಣದಲ್ಲಿ ರಾಜ್ಯ ಮಟ್ಟದ 17 ರ ವಯೋಮಾನದ ಕ್ರೀಡಾಕೂಟ ನಡೆಯಲಿದ್ದು ಪುತ್ತೂರಿನಲ್ಲಿ ಪ್ರಪ್ರಥಮ ಬಾರಿಗೆ ರಾಜ್ಯಮಟ್ಟದ ಕ್ರೀಡಾಕೂಟ ನಡೆಯಲಿದ್ದು ಬಹಳ ವಿಜೃಂಭಣೆಯಿAದ ಕ್ರೀಡಾಕೂಟ ನಡೆಯಲಿದೆ ಎಂದು ಕ್ರೀಡಾ ಕೂಟದ ಕಾರ್ಯಾಧ್ಯಕ್ಷರಾದ ಕಾವು ಹೇಮನಾಥ ಶೆಟ್ಟಿ ತಿಳಿಸಿದರು.
ಡಿ. 1 ರಂದು ಕ್ಷೇತ್ರದಾದ್ಯಂತ ಕ್ರೀಡಾ ಜ್ಯೋತಿ ಸಾಗಲಿದೆ. ಡಿ 2 ರಂದು ದರ್ಬೆಯಲ್ಲಿ ಕ್ರೀಡಾ ಜ್ಯೋತಿ ಸಮಾಪ್ತಿಯಾಗಲಿದ್ದು ಅಲ್ಲಿಂದ ಭವ್ಯ ಮೆರವಣಿಗೆ ಮೂಲಕ ಕ್ರೀಡಾ ಜ್ಯೋತಿಯನ್ನು ಕೊಂಬೆಟ್ಟು ಕ್ರೀಡಾಂಗಣಕ್ಕೆ ತರಲಾಗುವುದು ಬಳಿಕ ಕಾರ್ಯಕ್ರಮದ ಉದ್ಘಾಟನೆ ನಡೆಯಲಿದೆ. ಕ್ರೀಡಾ ಜ್ಯೋತಿಗೆ ಶಾಸಕರಾದ ಅಶೋಕ್ ರೈ ದೀಪ ಬೆಳಗಿಸುವ ಮೂಲಕ ಉದ್ಘಾಟನೆ ಮಾಡಲಿದ್ದಾರೆ. ಆ ಬಳಿಕ ಡಿ.3 ಮತ್ತು 4 ರಂದು ಕ್ರೀಡಾಕೂಟ ನಡೆಯಲಿದ್ದು ಕೊನೆಯ ದಿನ ಸಮಾರೋಪ ಸಮಾರಂಭ ನಡೆಯಲಿದೆ.
ಶಾಸಕ ನೇತೃತ್ವದಲ್ಲೇ ಕ್ರೀಡಾಕೂಟ
ಪುತ್ತೂರು ಶಾಸಕರಾದ ಅಶೋಕ್ ರೈ ನೇತೃತ್ವದಲ್ಲಿ ಕ್ರೀಡಾ ಕೂಟ ನಡೆಯಲಿದೆ. ಕ್ಷೇತ್ರದ ಎಲ್ಲಾ ಶಾಲೆಗಳ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸುವ ಉದ್ದೇಶದಿಂದ ಎಲ್ಲಾ ಶಾಲೆಗಳಿಗೂ ಕ್ರೀಡಾ ಜ್ಯೋತಿ ಸಂಚರಿಸಲಿದೆ.
ಹಸಿರುವಾಣಿ ಸಂಗ್ರಹ
ತಾಲೂಕಿನ ಹಾಗೂ ಹೊರತಾಲೂಕಿನ ಶಾಲೆಗಳಿಂದ ಹಸಿರುವಾಣಿ ಸಂಗ್ರಹ ನಡೆಯಲಿದೆ. ಕ್ರೀಡಾಪಟುಗಳಿಗೆ ಊಟೋಪಚಾರದ ವ್ಯವಸ್ಥೆಗಾಗಿ ಹಸಿರುವಾಣಿ ಯೋಜನೆ ಹಮ್ಮಿಕೊಳ್ಳಲಾಗಿದೆ.
36 ಜಿಲ್ಲೆಗಳ ವಿದ್ಯಾರ್ಥಿಗಳು ಭಾಗಿ
ರಾಜ್ಯಮಟ್ಟದ ಕ್ರೀಡಾಕೂಟವಾಗಿರುವ ಕಾರಣ ರಾಜ್ಯದ ೩೬ ಜಿಲ್ಲೆಗಳ ಕ್ರೀಡಾಳುಗಳು ಭಾಗವಹಿಸಲಿದ್ದಾರೆ. ಕ್ರೀಡಾಳುಗಳಿಗೆ ಊಟ, ವಸತಿ ಮತ್ತು ಇತರೆ ವ್ಯವಸ್ಥೆಯಲ್ಲಿ ಯಾವುದೇ ಲೋಪವಾಗದಂತೆ ಕ್ರಮಕೈಗೊಳ್ಳಲಾಗುವುದು ಎಂದು ಹೇಮನಾಥ ಶೆಟ್ಟಿ ತಿಳಿಸಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಲೇಕೋಶ್ ಎಸ್ ಆರ್ ಮಾತನಾಡಿ ಒಟ್ಟು 2500 ಕ್ರೀಡಾಪಟುಗಳು ಭಾಗವಹಿಸಲಿದ್ದಾರೆ ಜೊತೆಗೆ ಶಿಕ್ಷಕರೂ ಬರಲಿದ್ದಾರೆ. ಕ್ರೀಡಾಳು ವಿದ್ಯಾರ್ಥಿಗಳಿಗೆ ಸರ್ವ ವ್ಯವಸ್ಥೆಯನ್ನು ಮಾಡಲಾಗಿದೆ. ವಿವಿಧ ಜಿಲ್ಲೆಗಳ ಮಕ್ಕಳಿಗೆ ವಿವಿಧ ಶಾಲೆಯಲ್ಲಿ ವ್ಯವಸ್ಥೆ ಮಾಡಲಾಗಿದೆ. ಶಾಸಕರ ಸಂಪೂರ್ಣ ಸಹಕಾರ ಕಾರ್ಯಕ್ರಮಕ್ಕೆ ಇರುವ ಕಾರಣ ನಾವು ಧೈರ್ಯವಾಗಿ ಈ ಕ್ರೀಡಾಕೂಟವನ್ನು ಒಪ್ಪಿಕೊಂಡಿದ್ದೇವೆ.
17 ವಿವಿಧ ಕ್ರೀಡೆಗಳು ನಡೆಯಲಿದೆ. ಆರೋಗ್ಯ ಇಲಾಖೆ, ಪೊಲೀಸ್ ಮತ್ತು ನಗರಸಭೆ ಅಧಿಕಾರಿಗಳ ಸಭೆಯನ್ನು ಕರೆಯಲಾಗಿದೆ. ಶಿಕ್ಷಕ ಶಿಕ್ಷಕಿಯರು ಸಂಪೂರ್ಣವಾಗಿ ಕಾರ್ಯಕ್ರಮದಲ್ಲಿ ತಮ್ಮನ್ನು ತೊಡಗಿಸಿಕೊಳ್ಳಲಿದ್ದಾರೆ ಎಂದು ಹೇಳಿದರು.
ದೈಹಿಕ ಶಿಕ್ಷಣ ಪರಿವೀಕ್ಷಕ ಸುಂದರ ಗೌಡ ಮಾತನಾಡಿ ಕ್ರೀಡಾ ಕೂಟಕ್ಕೆ 18 ವಿವಿಧ ಸಮಿತಿಗಳನ್ನು ಮಾಡಲಾಗಿದೆ. ಸಮಿತಿಗೆ ಮುಖ್ಯಸ್ಥರನ್ನು ನೇಮಿಸಲಾಗಿದೆ. ಕ್ರೀಡಾ ಕೂಟದ ಅಧಿಕಾರಿಗಳಿಗೂ ಮಾಹಿತಿ ಕಾರ್ಯಾಗಾರ ಮಾಡಲಾಗಿದೆ. 200 ಮಿಕ್ಕಿ ನಿರ್ಣಾಯಕರು ಭಾಗವಹಿಸಲಿದ್ದಾರೆ. ರಾಜ್ಯದ ೩೬ ಜಿಲ್ಲೆಗಳ ಕ್ರೀಡಾಳುಗಳ ಪಥ ಸಂಚಲನ ನಡೆಯಲಿದೆ. ಕಾರ್ಯಕ್ರಮದಲ್ಲಿ ಸಚಿವರುಗಳು ಭಾಗವಹಿಸಲಿದ್ದು. ೧೭ ಶಾಲೆಗಳ ಬ್ಯಾಂಡ್ ಸೆಟ್ ಕಾರ್ಯಕ್ರಮದಲ್ಲಿ ಭಾಗವಹಿಸಲಿದೆ ಎಂದು ಹೇಳಿದರು.
ಕ್ರೀಡಾಳುಗಳ ಪ್ರಯಾಣಕ್ಕೆ ೨೬ ಶಾಲಾ ಬಸ್ಸುಗಳನ್ನು ಬಳಸಲಾಗುತ್ತದೆ ಎಂದು ಸುಂದರ ಗೌಡ ತಿಳಿಸಿದರು.
ಪ್ರಥಮ/ ದ್ಬಿತೀಯ ಸ್ಥಾನಿಗಳು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಲಿದ್ದಾರೆ. ತಾಲೂಕು ಕೇಂದ್ರದಲ್ಲಿ ಮೊದಲ ಬಾರಿಗೆ ರಾಜ್ಯ ಮಟ್ಟದ ಕ್ರಿಡಾ ಕೂಟ ನಡೆಯುತ್ತಿದೆ. ಶಾಸಕರಾದ ಅಶೋಕ್ ರೈ ಮತ್ತು ಕಾವು ಹೇಮನಾಥ ಶೆಟ್ಟಿ ನೇತೃತ್ವದಲ್ಲಿ ಅತ್ಯಂತ ವೈಭವದಿಂದ ಕ್ರೀಡಾ ಕೂಟ ನಡೆಯಲಿದೆ ಎಂದು ಸುಂದರ ಗೌಡ ತಿಳಿಸಿದರು.
ಮಣ್ಣಿನಕ್ರೀಡಾಂಗಣದಲ್ಲಿ ಕ್ರೀಡಾಕೂಟ: ದಯಾನಂದ ರೈ ಕೊರ್ಮಂಡ
ಕೊAಬೆಟ್ಟು ತಾಲೂಕು ಕ್ರೀಡಾಂಗಣದಲ್ಲಿ ಮಣ್ಣಿನ ಕ್ರೀಡಾಂಗಣದಲ್ಲಿ ಕ್ರೀಡಾ ಕೂಟ ನಡೆಯಲಿದೆ.ಈಗಾಗಲೇ ಕ್ರೀಡಾಂಗಣ ಸಿದ್ದತೆ ಕಾರ್ಯಗಳು ನಡೆಯುತ್ತಿದೆ. ಕ್ರೀಡಾಕೂಟ ಯಶಸ್ವಿಯಾಗಿ ನಡೆಯಲು ಈಗಾಗಲೇ ವಿವಿಧ ಸಮಿತಿಗಳನ್ನು ರಚನೆ ಮಾಡಲಾಗಿದೆ ಎಂದು ದಯಾನಂದ ರೈ ಕೊರ್ಮಂಡ ತಿಳಿಸಿದರು.
ಆಯಾ ಜಿಲ್ಲೆಯವರಿಗೆ ಆಯಾ ಆಹಾರಗಳು
ರಾಜ್ಯದ ವಿವಿಧ ಜಿಲೆಗಳ ಕ್ರೀಡಾಳುಗಳು ಭಾಗವಹಿಸುವ ಕಾರಣ ವಿವಿಧ ಬಗೆಯ ಆಹಾರದ ತಯಾರಿಕೆ ನಡೆಯಲಿದೆ. ರಾಗಿಮುದ್ದೆ, ಜೋಳದ ರೊಟ್ಟಿಯೂ ಆಹಾರದ ಪಟ್ಟಿಯಲ್ಲಿದೆ ಎಂದು ಕ್ರೀಡಾಕೂಟದ ಕಾರ್ಯಾಧ್ಯಕ್ಷರಾದ ಕಾವು ಹೇಮನಾಥ ಶೆಟ್ಟಿ ತಿಳಿಸಿದರು.