Published
1 year agoon
By
Akkare Newsಮಂಗಳೂರು: ಮುಂಬರುವ ಲೋಕಸಭಾ ಚುನಾವಣೆ ಸಜ್ಜಾಗುತ್ತಿರುವ ದ.ಕ. ಜಿಲ್ಲಾ ಕಾಂಗ್ರೆಸ್ ಸಮಿತಿಯು ಈಗಾಗಲೇ ವಿಧಾನಸಭಾ ಕ್ಷೇತ್ರ ಹಾಗೂ ಬ್ಲಾಕ್ ಕಾಂಗ್ರೆಸ್ ವ್ಯಾಪ್ತಿಗೆ ನೂತನ ವೀಕ್ಷಕರನ್ನು ನೇಮಿಸಿ ಆದೇಶ ಹೊರಡಿಸಿದೆ.
ನಿಯೋಜಿತ ವೀಕ್ಷಕರು ಈ ಕೂಡಲೇ ತಮಗೆ ವಹಿಸಲಾಗಿರುವ ವಿಧಾನಸಭಾ ಕ್ಷೇತ್ರ ಮತ್ತು ಬ್ಲಾಕ್ ಕಾಂಗ್ರೆಸ್ ವ್ಯಾಪ್ತಿಗಳಿಗೆ ತೆರಳಿ ಸ್ಥಳೀಯ ಶಾಸಕರು, ಮಾಜಿ ಶಾಸಕರು, 2023ರ ವಿಧಾನಸಭಾ ಅಭ್ಯರ್ಥಿಗಳು, ಬ್ಲಾಕ್ ಅಧ್ಯಕ್ಷರು ಹಾಗೂ ಸ್ಥಳೀಯ ಮುಖಂಡರೊಂದಿಗೆ ಸಭೆ ನಡೆಸಿ ಬೂತ್ ಮಟ್ಟದಲ್ಲಿ ಕಾರ್ಯಕ್ರಮ ನಡೆಸಬೇಕು. ಈ ನಿಟ್ಟಿನಲ್ಲಿ ಚುನಾವಣೆ ಮುಗಿಯುವವರೆಗೂ ಅಲ್ಲಿಯೇ ಹಾಜರಿದ್ದು, ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯ ಗೆಲುವಿಗೆ ಶ್ರಮಿಸಲು ದ.ಕ. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ.ಹರೀಶ್ ಕುಮಾರ್ ಸೂಚಿಸಿದ್ದಾರೆ.
ವಿಧಾನ ಸಭಾಕ್ಷೇತ್ರ:
ಬೆಳ್ತಂಗಡಿ – ಎಂ.ಎಸ್.ಮಹಮ್ಮದ್
ಮೂಡಬಿದ್ರೆ – ಮಹಾಬಲ ಮಾರ್ಲ
ಮಂಗಳೂರು ನಗರ ಉತ್ತರ – ಕೆ.ಶುಭೋದಯ ಆಳ್ವ
ಮಂಗಳೂರು ನಗರ ದಕ್ಷಿಣ – ಪ್ರತಿಭಾ ಕುಳಾಯಿ
ಮಂಗಳೂರು – ಎ.ಸಿ. ವಿನಯರಾಜ್
ಬಂಟ್ವಾಳ – ಆರ್.ಕೆ. ಪೃಥ್ವಿರಾಜ್
ಪುತ್ತೂರು – ಶಶಿಧರ್ ಹೆಗ್ಡೆ
ಸುಳ್ಯ – ದುರ್ಗಪ್ರಸಾದ್ ರೈ ಕುಂಬ್ರ
ಬ್ಲಾಕ್ ಕಾಂಗ್ರೆಸ್ ವ್ಯಾಪ್ತಿ:
ಬೆಳ್ತಂಗಡಿ ನಗರ ಬ್ಲಾಕ್ – ಮೊಹಮ್ಮದ್ ಅಲಿ ಪುತ್ತೂರು
ಬೆಳ್ತಂಗಡಿ ಗ್ರಾಮೀಣ ಬ್ಲಾಕ್ – ಸತೀಶ್ ಕುಮಾರ್ ಕೆಡಿಂಜೆ
ಮೂಡಬಿದ್ರೆ ಬ್ಲಾಕ್ – ಅನಿಲ್ ಕುಮಾರ್
ಮುಲ್ಕಿ ಬ್ಲಾಕ್ – ಪ್ರವೀಣ್ ಚಂದ್ರ ಆಳ್ವ
ಸುರತ್ಕಲ್ ಬ್ಲಾಕ್ – ಗಿರೀಶ್ ಶೆಟ್ಟಿ
ಗುರುಪುರ ಬ್ಲಾಕ್ – ಪುರಂದರ ದೇವಾಡಿಗ
ಮಂಗಳೂರು ನಗರ ಬ್ಲಾಕ್ – ಮೊಹಮ್ಮದ್ ಕುಂಜತ್ತಬೈಲ್
ಮಂಗಳೂರು ದಕ್ಷಿಣ ಬ್ಲಾಕ್ – ಚಿತ್ತರಂಜನ್ ಶೆಟ್ಟಿ ಬೊಂಡಾಲ
ಉಳ್ಳಾಲ ಬ್ಲಾಕ್ – ಟಿ.ಕೆ.ಸುಧೀರ್
ಮುಡಿಪು ಬ್ಲಾಕ್ – ನೀರಜ್ ಚಂದ್ರಪಾಲ್
ಬಂಟ್ವಾಳ ಬ್ಲಾಕ್ – ಮಹೇಶ್ ರೈ ಕಾವು
ಪಾಣೆಮಂಗಳೂರು ಬ್ಲಾಕ್ – ಗಣೇಶ್ ಪೂಜಾರಿ
ಪುತ್ತೂರು ಬ್ಲಾಕ್ – ಜಯಪ್ರಕಾಶ್ ರೈ
ವಿಟ್ಲ ಉಪ್ಪಿನಂಗಡಿ ಬ್ಲಾಕ್ – ಉಮ್ಮರ್ ಫಾರೂಕ್ ಪುದು
ಸುಳ್ಯ ಬ್ಲಾಕ್ – ಭಾಸ್ಕರ್ ಗೌಡ ಕೋಡಿಂಬಾಳ
ಕಡಬ ಬ್ಲಾಕ್ – ಉಮನಾಥ್ ಶೆಟ್ಟಿ