Published
1 year agoon
By
Akkare Newsಪುತ್ತೂರು: ಉಪ್ಪಿನಂಗಡಿ ಹೋಬಳಿಯ ಕಂದಾಯ ನಿರೀಕ್ಷಕರಾಗಿ ಪಂಜ ಹೋಬಳಿಯಿಂದ ವರ್ಗಾವಣೆಗೊಂಡಿರುವ ಚಂದ್ರ ನಾಯ್ಕ್ ಡಿ.4ರಂದು ಅಧಿಕಾರ ಸ್ವೀಕರಿಸಿದ್ದಾರೆ.
ಕೋಡಿಂಬಾಡಿ, ಬೆಳ್ಳಿಪ್ಪಾಡಿ, ಉಪ್ಪಿನಂಗಡಿ, ಕಡಬ ತಾಲೂಕಿನ ಸವಣೂರು, ಪುಣ್ಚಪ್ಪಾಡಿ ಗ್ರಾಮಗಳಲ್ಲಿ ಗ್ರಾಮಕರಣಿಕರಾಗಿದ್ದ ಚಂದ್ರ ನಾಯ್ಕ ಆಹಾರ ನಿರೀಕ್ಷಕರಾಗಿ ಭಡ್ತಿಹೊಂದಿ ಕಡಬಕ್ಕೆ ವರ್ಗಾವಣೆಗೊಂಡಿದ್ದರು. ನಂತರ ವರ್ಗಾವಣೆಗೊಂಡು ಸುಳ್ಯ ತಾಲೂಕಿನ ಪಂಜ ಹೋಬಳಿಯ ಕಂದಾಯ ನಿರೀಕ್ಷಕರಾಗಿ ಕರ್ತವ್ಯ ನಿರ್ವಹಿಸಿ ಇದೀಗ ಉಪ್ಪಿನಂಗಡಿ ಹೋಬಳಿಗೆ ವರ್ಗಾವಣೆಗೊಂಡಿದ್ದಾರೆ.