Published
1 year agoon
By
Akkare Newsಪುತ್ತೂರು: ಪುತ್ತೂರು ನಗರದ ಬೈಪಾಸ್ಸಿನಲ್ಲಿರುವ ತೆಂಕಿಲದ ವಿವೇಕಾನಂದ ಶಾಲೆ ಬಳಿ ಪಾನಮತ್ತ ಚಾಲಕನೊಬ್ಬ ಶಾಲಾ ಬಸ್ಸನ್ನು ಯದ್ವಾತದ್ವಾ ಚಲಾಯಿಸಿ ಸರಣಿ ಅಪಘಾತ ನಡೆಸಿದ ಘಟನೆ ಬುಧವಾರ ಮಧ್ಯಾಹ್ನ ನಡೆದಿದೆ. ಅಪಘಾತದಲ್ಲಿ ಒಟ್ಟು 3 ವಾಹನಗಳಿಗೆ ಹಾನಿಯಾಗಿರುವುದಾಗಿ ತಿಳಿದು ಬಂದಿದ್ದು ಇದರಲ್ಲಿ ಮಾಜಿ ಶಾಸಕಿ ಶಕುಂತಳಾ ಟಿ ಶೆಟ್ಟಿಯವರ ಪುತ್ರ ಬಿಪಿನ್ ರವರ ಒಂದು ಕಾರು ಸೇರಿದೆ.
ತೆಂಕಿಲದಲ್ಲಿ ವಿವೇಕಾನಂದ ವಿದ್ಯಾಸಂಸ್ಥೆಗೆ ಸೇರಿದ ಎರಡು ಶಾಲೆಗಳಿದ್ದು ಅದರಲ್ಲಿ ಒಂದು ಶಾಲೆಗೆ ಸೇರಿದ ಬಸ್ಸು ಅಪಘಾತ ನಡೆಸಿದ ಬಸ್ಸು ಎಂದು ಸ್ಥಳೀಯರು ತಿಳಿಸಿದ್ದಾರೆ. ಸಂಚಾರಿ ಪೊಲೀಸರು ಕೂಡ ಅದು ವಿವೇಕಾನಂದ ವಿದ್ಯಾಸಂಸ್ಥೆಗೆ ಸೇರಿದ ಬಸ್ಸು ಎಂದು ಖಚಿತ ಪಡಿಸಿದ್ದಾರೆ. ಈ ಬಸ್ಸನ್ನು ಬೆಳ್ತಂಗಡಿ ಮೊಗ್ರು ಮೂಲದ ಜನಾರ್ದನ ಎಂಬವರು ಚಲಾಯಿಸುತ್ತಿದ್ದರು. ಬಸ್ಸಿನಲ್ಲಿ ಹಲವು ಮಕ್ಕಳು ಪ್ರಯಾಣಿಸುತ್ತಿದ್ದು ಅದೇ ಬಸ್ಸಿನ ಚಾಲಕ ಪಾನಮತ್ತನಾಗಿದದ್ದು ಆತಂಕಕಾರಿ ವಿಚಾರವಾಗಿದೆ