Connect with us

ತಾಜಾ ಸುದ್ದಿ

ಪುತ್ತೂರು : ಅಖಿಲ ಭಾರತ ಪೆಟ್ರೋಲಿಯಂ ವಿತರಕರ ಸಂಘದ ಕಾರ್ಯದರ್ಶಿಯಾಗಿ ಕೆ.ವಿಶ್ವಾಸ್ ಶೆಣೈಯವರು ಅವಿರೋಧವಾಗಿ ಆಯ್ಕೆ.

Published

on

ನವದೆಹಲಿ(ಎಐಪಿಡಿಎ) ಮಂಗಳೂರಿನಲ್ಲಿ ನಡೆದ KSFPD (ಕರ್ನಾಟಕ ರಾಜ್ಯ ಪೆಟ್ರೋಲಿಯಂ ಡೀಲರ್ಸ್ ಫೆಡರೇಶನ್, ಬೆಂಗಳೂರು)ನ ವಾರ್ಷಿಕ ಸರ್ವ ಸದಸ್ಯರ ಸಭೆಯಲ್ಲಿ ಅಖಿಲ ಭಾರತ ಪೆಟ್ರೋಲಿಯಂ ವಿತರಕರ ಸಂಘದ ಅಧ್ಯಕ್ಷರಾದ ಅಜಯ್ ಬನ್ಸಾಲ್ ಅವರು ಮಂಡಳಿಯ ನಿರ್ಧಾರದಂತೆ ಅಧಿಕೃತವಾಗಿ ಘೋಷಿಸಿದರು.

ಕೆ.ವಿಶ್ವಾಸ್ ಶೆಣೈ ಅವರು ಕರ್ನಾಟಕ ಒಕ್ಕೂಟದ ಹಾಲಿ ಉಪಾಧ್ಯಕ್ಷರೂ ಆಗಿದ್ದಾರೆ. ಮರೀಲು ಹೊರ ವಲಯದಲ್ಲಿರುವ ದ ಪುತ್ತೂರು ಕ್ಲಬ್ ಕಾರ್ಯದರ್ಶಿಯಾಗಿ, ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನ ಅಧ್ಯಕ್ಷರಾಗಿ, ಪುತ್ತೂರು ಸಹಕಾರಿ ಟೌನ್ ಬ್ಯಾಂಕ್‌ಉ ಪಾಧ್ಯಕ್ಷರಾಗಿ, ಪುತ್ತೂರು ವೆಂಕಟರಮಣ ದೇವಸ್ಥಾನದ ಟ್ರಸ್ಟಿಯೂ ಆಗಿದ್ದಾರೆ. ಅಲ್ಲದೆ ರೋಟರಿ ಕ್ಲಬ್ ಪುತ್ತೂರು ಈಸ್ಟ್ ಇದರ ಮಾಜಿ ಅಧ್ಯಕ್ಷರಾಗಿ ರೋಟರಿ ಕ್ಲಬ್ ಪುತ್ತೂರು ಯುವದ ಉದಯಕ್ಕೂ ಕಾರಣರಾಗಿದ್ದಾರೆ.

ರೋಟರಿ ಜಿಲ್ಲೆ 3181 ಇದರ ಎ.ಕೆ.ಎಸ್ ರೊಟೇರಿಯನ್ ಆಗಿ ಗುರುತಿಸಿಕೊಂಡಿದ್ದು ಪ್ರಸ್ತುತ ಪಬ್ಲಿಕ್ ಇಮೇಜ್ ಡಿಸ್ಟ್ರಿಕ್ಟ್ ಚೇರ್ ಮ್ಯಾನ್ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಕೆ.ವಿಶ್ವಾಸ್ ಶೆಣೈಯವರು ರೋಟರಿ ಭೀಷ್ಮಕೆ.ಆರ್ ಶೆಣೈ ಹಾಗೂ ಶಾಂತಿ ಆರ್.ಶೆಣೈ ದಂಪತಿ ಪುತ್ರರಾಗಿದ್ದು ಪತ್ನಿ ಶಾಂತಿ, ಪುತ್ರ ವಿನೀತ್, ಪುತ್ರಿ ತನ್ವಿರವರನ್ನು ಹೊಂದಿರುತ್ತಾರೆ.

Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version