Connect with us

ಇತ್ತೀಚಿನ ಸುದ್ದಿಗಳು

ಸುಳ್ಯ ಮರಳು ಮಾಫಿಯಾ: ಅಕ್ರಮ ಮರಳುಗಾರಿಕೆಗೆ ಪೊಲೀಸ್ ರೈಡ್, ಟಿಪ್ಪರ್ ವಶ.. ಚಾಲಕ ಪರಾರಿ..!!

Published

on

ಸುಳ್ಯ: ಅಕ್ರಮ ಮರಳುಗಾರಿಕೆಗೆ ಸುಳ್ಯ ಪೊಲೀಸರು ದಾಳಿ ನಡೆಸಿ ಮರಳು ಸಮೇತ ಟಿಪ್ಪರ್ ಲಾರಿಯನ್ನು ವಶಕ್ಕೆ ಪಡೆದಿರುವ ಘಟನೆ ಅರಂತೋಡು ಪೇಟೆ ಬಳಿಯ ನೂಜಿಕಲ್ಲು ಎಂಬಲ್ಲಿ ನಡೆದಿದೆ.ಜ. 30ರಂದು ಸುಳ್ಯ ಎಸ್‌ಐ ಅವರು ಸಿಬ್ಬಂದಿ ಜೊತೆಗೆ ಅರಂತೋಡು ಪೇಟೆ ಬಳಿ ನೂಜಿಕಲ್ಲು ಎಂಬಲ್ಲಿ ತೋಡಿನಿಂದ ಮರಳನ್ನು ಕಳ್ಳತನ ನಡೆಸುವ ಉದ್ದೇಶದಿಂದ ಅಕ್ರಮವಾಗಿ ಟಿಪ್ಪರ್ ಲಾರಿಗೆ ಲೋಡ್ ಮಾಡುತ್ತಿರುವುದು ಪತ್ತೆಯಾಗಿದೆ.





ಪೊಲೀಸರನ್ನು ಕಂಡ ಚಾಲಕ ಪರಾರಿಯಾದನು. ಪರಿಶೀಲನೆ ವೇಳೆ ಯಾವುದೇ ಪರವಾನಿಗೆ ಇಲ್ಲದೇ ಮರಳು ತೆಗೆಯುವುದು ಪತ್ತೆಯಾಗಿದ್ದು, ಪೊಲೀಸರು ಮರಳು ಸಮೇತ ಟಿಪ್ಪರ್ ಲಾರಿಯನ್ನು ವಶಕ್ಕೆ ಪಡೆದರು. ಟಿಪ್ಪರ್ ಲಾರಿ ಮೌಲ್ಯ 5 ಲಕ್ಷ ರೂ. ಹಾಗೂ ಮರಳಿನ ಮೌಲ್ಯ 5 ಸಾವಿರ ರೂ. ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ಸುಳ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version