Published
1 year agoon
By
Akkare Newsಪುತ್ತೂರಿನ ಮಹಾಲಿಂಗೇಶ್ವರ ದೇವಸ್ಥಾನದ ಎದುರಿನ ದೇವರಮಾರು ಗದ್ದೆಯಲ್ಲಿ ಡಿ.24 ಮತ್ತು 25 ರಂದು ಜರಗುವ ಶ್ರೀನಿವಾಸ ಕಲ್ಯಾಣೋತ್ಸವ ಹಾಗೂ ಸನಾತನ ಸಮಾಗಮದ ಆಮಂತ್ರಣ ಪತ್ರ ವಿತರಣೆ ಡಿ.22ರಂದು ಪುತ್ತೂರು ಪೇಟೆಯಲ್ಲಿ ಜರಗಲಿದೆ.
ಡಿ.22. ಶುಕ್ರವಾರದಂದು ಸಂಜೆ 4.30 ಕ್ಕೆ ದರ್ಬೆ ವೃತ್ತದಿಂದ ಪುತ್ತೂರು ಪೇಟೆಯಲ್ಲಿ ಆಮಂತ್ರಣ ವಿತರಣೆ ಜರುಗಲಿದೆ.ಹೆಚ್ಚಿನ ಸಂಖ್ಯೆಯಲ್ಲಿ ಹಿಂದೂ ಬಂಧುಗಳು ಆಮಂತ್ರಣ ಪತ್ರ ವಿತರಣೆಯಲ್ಲಿ ಪಾಲ್ಗೊಳ್ಳುವಂತೆ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.