ಇಂದಿನ ಕಾರ್ಯಕ್ರಮ ಇತ್ತೀಚಿನ ಸುದ್ದಿಗಳು ಊರಿನ ಸುದ್ದಿಗಳು ಕರ್ನಾಟಕ ಕಾನೂನು ಕ್ರೈಮ್ ನ್ಯೂಸ್ ಚರ್ಚೆಗಳು ಪ್ರಕಟಣೆ ಮಾಹಿತಿ ಮುಂದಿನ ಕಾರ್ಯಕ್ರಮ ಯೋಜನೆಗಳು ಸಾಮಾನ್ಯ ಸ್ಥಳೀಯ
ನಗರಸಭಾ ವ್ಯಾಪ್ತಿಯಲ್ಲಿ ಕುಡಿಯುವ ನೀರಿನಸಮಸ್ಯೆ ಜಲಸಿರಿ ಅಧಿಕಾರಿಗಳ ಸಭೆ ಕರೆದ ಶಾಸಕರು ಸಮಸ್ಯೆಗಳಿಗೆ ಸ್ಪಂದಿಸದಂತೆ ಅಧಿಕಾರಿಗಳ ತಡೆ: ಸಾರ್ವತ್ರಿಕ ಆಕ್ರೋಶ, ನೀತಿ ಸಂಹಿತೆ: ಸಾರ್ವಜನಿಕರ ಸಮಸ್ಯೆಗೆ ಸ್ಪಂದಿಸುವಲ್ಲಿ ಅಧಿಕಾರಿಗಳ ಅಡ್ಡಿ- ಎರಡು ದಿನದಲ್ಲಿ ಕುಡಿಯುವ ನೀರು ಸಮಸ್ಯೆ ಪರಿಹಾರ ಮಾಡದಿದ್ದಲ್ಲಿ ಕಚೇರಿಯಲ್ಲಿ ಧರಣಿ ಕೂರುವೆ: ಶಾಸಕ ಅಶೋಕ್ ರೈPublished
2 years agoon
By
Akkare News
ಬೆಂಗಳೂರು ಹೊಸ ವರ್ಷದ ಸಂಭ್ರಮಕ್ಕೆ ಬೆಂಗಳೂರು ಜಗಮಗಿಸುತ್ತಿದೆ. ಇದರ ನಡುವೆಯೇ ಯುವಕನ ಭೀಕರ ಕೊಲೆಯೊಂದು ರಾಜಧಾನಿಯಲ್ಲಿ ಸಂಭವಿಸಿದ್ದು, ಸಂಭ್ರಮವನ್ನೇ ಕದಡಿಬಿಟ್ಟಿದೆ.ಹೌದು, ಬೆಂಗಳೂರಿನ(Bengaluru) ಹನುಮಂತ ನಗರದ 80 ಅಡಿ ರಸ್ತೆಯ ನಡುರಸ್ತೆಯಲ್ಲಿ ಈ ಭೀಕರ ಹತ್ಯೆ ನಡೆದಿದ್ದು ಆಟೋದಲ್ಲಿ ಬಂದ ದುಷ್ಕರ್ಮಿಗಳು ಮಾರಾಕಾಸ್ತ್ರಗಳಿಂದ ಯುವಕನ ಕೊಚ್ಚಿಕೊಂದು ರಸ್ತೆ ಬದಿ ಎಸೆದು ಪರಾರಿಯಾಗಿದ್ದಾರೆ ಎಂದು ವರದಿಯಾಗಿದೆ.
ಅಂದಹಾಗೆ ಹತ್ಯೆಯಾದ ಯುವಕನನ್ನು ಬನಶಂಕರಿ ಮೂಲದ ವಿಜಯ(21) ಎಂದು ಗುರುತಿಸಲಾಗಿದೆ. ಈತನು ನಿನ್ನೆ ಹೊಸವರ್ಷಾಚರಣೆ ಹಿನ್ನಲೆ ಗಳೆಯರೊಂದಿಗೆ ಸೆಲೆಬ್ರೇಷನ್ ಗೆ ಬಂದಿದ್ದು ರಾತ್ರಿ ನ್ಯೂ ಇಯರ್ ಸೆಲೆಬ್ರೇಷನ್ ಮಾಡಿ ಕುಡಿದಿದ್ದಾರೆ. ಕಂಠಪೂರ್ತಿ ಕುಡಿದು ಮನೆಗೆ ಹೋಗುವಾಗ ವಿಜಯ್ ಹಾಗೂ ಗೆಳೆಯರ ಮಧ್ಯೆ ಜಗಳ ಶುರುವಾಗಿತ್ತು. ಆಟೋದಲ್ಲಿ ಹೋಗೋವಾಗ ಜಗಳ ಇನ್ನೂ ಜೋರಾಗಿ ವಿಜಯ್ ಎದೆಗೆ ಚಾಕು ಇರಿದು ಕೊಂದು ಬಿಸಾಕಿದ್ದಾರೆ.ಸದ್ಯ ಸ್ಥಳಕ್ಕಾಗಮಿಸಿದ ಹನುಮಂತನಗರ ಪೊಲೀಸರು ಸ್ಥಳ ಪರಿಶೀಲನೆ ನಡೆಸಿ ತನಿಖೆ ಶುರುಮಾಡಿದ್ದಾರೆ. ಸಿಸಿಟಿವಿ ಮೂಲಕ ಆರೋಪಿಗಳನ್ನು ಪತ್ತೆಹಚ್ಚಲು ಮುಂದಾಗಿದ್ದಾರೆ.