Connect with us

ಇಂದಿನ ಕಾರ್ಯಕ್ರಮ

ಲಿಟ್ಲ್ ಫ್ಲವರ್ ಶಾಲೆ ದರ್ಬೆ ಪುತ್ತೂರು ಇಲ್ಲಿ ಶಾಲಾ ಸ್ಕೌಟ್ ಗೈಡ್, ಕಬ್ ಮತ್ತು ಬುಲ್ ಬುಲ್ ಮಕ್ಕಳ ವಾರ್ಷಿಕ ಮೇಳ 2024

Published

on

ಲಿಟ್ಲ್ ಫ್ಲವರ್ ಹಿರಿಯ ಪ್ರಾಥಮಿಕ ಶಾಲೆ ದರ್ಬೆ ಪುತ್ತೂರು, ಇಲ್ಲಿನ ಶಾಲಾ ಸ್ಕೌಟ್, ಗೈಡ್, ಕಬ್ ಮತ್ತು ಬುಲ್ ಬುಲ್ ದಳದ ವಾರ್ಷಿಕ ಮೇಳವು ದಿನಾಂಕ 12.02.2024 ಮತ್ತು 13.02.2024 ರಂದು 352 ವಿದ್ಯಾರ್ಥಿಗಳ ಉಪಸ್ಥಿತಿಯೊಂದಿಗೆ ವಿಜೃಂಭಣೆಯಿಂದ ನೆರವೇರಿತು.
ಬೆಳಿಗ್ಗೆ 8.30 ಕ್ಕೆ ಸರಿಯಾಗಿ ಶಾಲಾ ಮುಖ್ಯಶಿಕ್ಷಕಿ ಭಗಿನಿ ವೆನಿಶಾ ಬಿ ಎಸ್, ಶಾಲಾ ರಕ್ಷಕ ಶಿಕ್ಷಕ ಸಂಘದ ಉಪಾಧ್ಯಕ್ಷರಾದ ಶ್ರೀಯುತ ರಾಮಚಂದ್ರ ಭಟ್, ಶಾಲಾ ಸುರಕ್ಷಾ ಸಮಿತಿಯ ಅಧ್ಯಕ್ಷರಾದ ಶ್ರೀಯುತ ಸತೀಶ್ ಆರ್, ಶಾಲಾ ಸ್ಕೌಟ್, ಗೈಡ್, ಕಬ್ ಮತ್ತು ಬುಲ್ ಬುಲ್ ದಳದ ನೇತೃತ್ವವಹಿಸಿಕೊಂಡ ಶಿಕ್ಷಕ ಶಿಕ್ಷಕಿಯರ ಉಪಸ್ಥಿತಿಯೊಂದಿಗೆ ಧ್ವಜಾರೋಹಣ ನೆರವೇರಿತು.







ಬಳಿಕ ನಡೆದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ವಂದನೀಯ ಭಗಿನಿ ಪ್ರಶಾಂತಿ ಮಾನ್ಯ ಸಂಚಾಲಕರು ಲಿಟ್ಲ್ ಫ್ಲವರ್ ಶಾಲೆ ದರ್ಬೆ ಪುತ್ತೂರು ವಹಿಸಿದರು. ಶ್ರೀಮತಿ ಶಕುಂತಲಾ ಟಿ ಶೆಟ್ಟಿ, ಮಾಜಿ ಶಾಸಕಿ, ಮಾಜಿ ಮುಖ್ಯಮಂತ್ರಿಗಳ ಸಂಸದೀಯ ಕಾರ್ಯದರ್ಶಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ವೇದಿಕೆಯಲ್ಲಿ ಸುದ್ದಿ ಸಮೂಹ ಸಂಸ್ಥೆಯ ಆಡಳಿತ ನಿರ್ಧೇಶಕರಾದ ಡಾ ಯು ಪಿ ಶಿವಾನಂದ, ಪುತ್ತೂರು ನಗರ ಸಭೆಯ ಸ್ಥಳೀಯ ಸದಸ್ಯರಾದ ಶ್ರೀಮತಿ ಶಶಿಕಲಾ, ನಿವೃತ್ತ ಸೈನಿಕರ ಸಂಘದ ಗೌರವಾಧ್ಯಕ್ಷರಾದ ಕರ್ನಲ್ ಡಿ ಜಿ ಭಟ್, ನಿವೃತ್ತ ಶಿಕ್ಷಕಿ ಶ್ರೀಮತಿ ಮೇರಿ ಡಿಸಿಲ್ವ, ಶಾಲಾ ರಕ್ಷಕ ಶಿಕ್ಷಕ ಸಂಘದ ಉಪಾಧ್ಯಕ್ಷರಾದ ಶ್ರೀಯುತ ರಾಮಚಂದ್ರ ಭಟ್, ಶಾಲಾ ಸುರಕ್ಷಾ ಸಮಿತಿಯ ಅಧ್ಯಕ್ಷರಾದ ಶ್ರೀಯುತ ಸತೀಶ್ ಆರ್ ಉಪಸ್ಥಿತರಿದ್ದರು.
ಅಗ್ನಿಶಾಮಕ ದಳ ಕೆಮ್ಮಿಂಜೆ ವತಿಯಿಂದ ಅಗ್ನಿಶಾಮಕ ಪ್ರಾತ್ಯಕ್ಷಿಕೆ ಅಗ್ನಿಶಾಮಕ ದಳದ ಮುಖ್ಯಸ್ಥರಾಗಿರುವ ಶ್ರೀ ರುಕ್ಮಯ ಗೌಡ ಅವರ ನೇತೃತ್ವದಲ್ಲಿ ನೆರವೇರಿತು. ಬಳಿಕ ಪುತ್ತೂರು ಸ್ಕೌಟ್, ಗೈಡ್, ಸ್ಥಳೀಯ ಸಂಸ್ಥೆಯ ಸಂಘಟನಾ ಕಾರ್ಯದರ್ಶಿ ಶ್ರೀಮತಿ ವೇದಾವತಿ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ನಂತರ ಶಾಲಾ ಸ್ಕೌಟ್, ಗೈಡ್, ಕಬ್ ಮತ್ತು ಬುಲ್ ಬುಲ್ ಮಕ್ಕಳಿಂದ ಗೂಡುದೀಪ ರಚನೆ, ನಕ್ಷತ್ರ ರಚನೆ, ರಾಷ್ಟ್ರಧ್ವಜದ ಚಿತ್ರ ರಚನೆ, ಎಲೆಗಳಿಂದ ಆಕೃತಿ ತಯಾರಿ ನಡೆಯಿತು. ರಂಗಬೆಳಕು ತಂಡ ಪುತ್ತೂರು ವತಿಯಿಂದ ಕೃಷ್ಣಪ್ಪ ಬಂಬಿಲ ನೇತೃತ್ವದಲ್ಲಿ ಜಾಗೃತಿ ಗೀತೆಗಳ ಗಾಯನ ನಂತರ ಶಾಲಾ ರಕ್ಷಕ ಶಿಕ್ಷಕ ಸಂಘದ ಉಪಾಧ್ಯಕ್ಷರಾದ ಶ್ರೀಯುತ ರಾಮಚಂದ್ರ ಭಟ್ ಉದ್ಘಾಟನೆಯೊಂದಿಗೆ ದರ್ಬೆ ವೃತ್ತದ ಮೂಲಕ 352 ವಿದ್ಯಾರ್ಥಿಗಳು, ರಕ್ಷಕ ಶಿಕ್ಷಕ ಸಂಘದ ಪದಾಧಿಕಾರಿಗಳ ನೇತೃತ್ವದಲ್ಲಿ ಆಕರ್ಷಕ ಪಥಸಂಚಲನ ನೆರವೇರಿತು. ನಂತರ ಶಾಲಾ ಸ್ಕೌಟ್, ಗೈಡ್, ಕಬ್ ಮತ್ತು ಬುಲ್ ಬುಲ್ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಂದ ಕರೋಕೆ ಹಾಡುಗಳ ಸುಮಧುರ ಗಾಯನ ನೆರವೇರಿತು.





ಶಾಲಾ ಸಂಚಾಲಕಿ ವಂದನೀಯ ಭಗಿನಿ ಪ್ರಶಾಂತಿ ಬಿ ಎಸ್ ಅಧ್ಯಕ್ಷತೆಯಲ್ಲಿ, ಪುತ್ತೂರು ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳು ಮಾನ್ಯ ಲೋಕೇಶ್ ಎಸ್ ಆರ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. ವೇದಿಕೆಯಲ್ಲಿ ಪುತ್ತೂರು ಸ್ಕೌಟ್, ಗೈಡ್, ಸ್ಥಳೀಯ ಸಂಸ್ಥೆಯ ಅಧ್ಯಕ್ಷರಾದ ವಿದ್ಯಾಆರ್ ಗೌರಿ, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆ ಪಾಪೆಮಜಲು ಇಲ್ಲಿನ ಶಿಕ್ಷಕಿ ಶ್ರೀಮತಿ ಮೇಬಲ್ ಡಿಸೋಜ, ಪುತ್ತೂರು ಕ್ಲಸ್ಟರಿನ ಸಮೂಹ ಸಂಪನ್ಮೂಲ ವ್ಯಕ್ತಿ ಶ್ರೀಮತಿ ಶಶಿಕಲಾ, ಅಮರ್ ಅಕ್ಬರ್ ಅಂತೋನಿ ಸೌಹಾರ್ದ ರೋಲಿಂಗ್ ಟ್ರೋಫಿಯ ಸ್ಥಾಪಕಾಧ್ಯಕ್ಷರಾದ ರಝಾಕ್ ಬಪ್ಪಳಿಗೆ, ಶಾಲಾ ದಾನಿಗಳಾದ ಶ್ರೀಮತಿ ಸುನೀತಾ ದಲ್ಮೇಡಾ ರಕ್ಷಕ ಶಿಕ್ಷಕ ಸಂಘದ ನಿಕಟಪೂರ್ವ ಉಪಾಧ್ಯಕ್ಷಾರಾದ ಶ್ರೀಯುತ ರಘುನಾಥ ರೈ, ಪುತ್ತೂರು ಸ್ಕೌಟ್, ಗೈಡ್, ಸ್ಥಳೀಯ ಸಂಸ್ಥೆಯ ಸಂಘಟನಾ ಕಾರ್ಯದರ್ಶಿ ಶ್ರೀಮತಿ ವೇದಾವತಿ, ಪುತ್ತೂರು ಸ್ಕೌಟ್ ಗೈಡ್ ಸ್ಥಳೀಯ ಸಂಸ್ಥೆಯ ಉಪಾಧ್ಯಕ್ಷರಾದ ಶ್ರೀಮತಿ ಡೋರತಿ ಮೇರಿ ಡಿಸೋಜ, ನಿವೃತ್ತ ಶಿಕ್ಷಕಿಯರಾದ ಶ್ರೀಮತಿ ಮೇರಿ ಡಿಸಿಲ್ವ, ಶ್ರೀಮತಿ ಲಿಡಿಯಾ ಮರಿಯಾ ರಸ್ಕೀನ್ಹ, ಶ್ರೀಮತಿ ಐರಿನ್ ವೇಗಸ್, ಹಿರಿಯ ವಿದ್ಯಾರ್ಥಿ ಡಾ ಶ್ರೀಪ್ರಕಾಶ್, ಪೋಷಕರಾದ ಶ್ರೀಮತಿ ಡಾ ವಿಜಯ ಸರಸ್ವತಿ, ಶಾಲಾ ರಕ್ಷಕ ಶಿಕ್ಷಕ ಸಂಘದ ಉಪಾಧ್ಯಕ್ಷರಾದ ಶ್ರೀಯುತ ರಾಮಚಂದ್ರ ಭಟ್, ಶಾಲಾ ಸುರಕ್ಷಾ ಸಮಿತಿಯ ಅಧ್ಯಕ್ಷರಾದ ಶ್ರೀಯುತ ಸತೀಶ್ ಆರ್, ಹಾಗೂ ಭಗಿನಿ ಫೆಲ್ಸಿ ಡಿಸೋಜ ಉಪಸ್ಥಿತರಿದ್ದರು.




ಬಳಿಕ 352 ವಿದ್ಯಾರ್ಥಿಗಳ ಭಾಗವಹಿಸುವಿಕೆಯೊಂದಿಗೆ ಸಾಂಸ್ಕೃತಿಕ ಕಾರ್ಯಕ್ರಮ ನೆರವೇರಿತು.
ದಿನಾಂಕ 13.02.2024 ನೇ ಮಂಗಳವಾರದಂದು ಬಿ ಪಿ ಸಿಕ್ಸ್ ವ್ಯಾಯಾಮ, ಸರ್ವಧರ್ಮ ಪ್ರಾರ್ಥನೆ ನಡೆಯಿತು. ಉಪಾಹಾರದ ಬಳಿಕ ಬೆಂಕಿ ಬಳಸದ ಅಡುಗೆ ಗಮನ ಸೆಳೆಯಿತು. ವರ್ಣಕುಟೀರ ಕಲಾ ಶಿಕ್ಷಣ ಸಂಸ್ಥೆಯ ಸಂಚಾಲಕರಾದ ಶ್ರೀ ಪ್ರವೀಣ್ ವರ್ಣಕುಟೀರ ಅವರಿಂದ ಮುಖವಾಡ ತಯಾರಿ, ಗೊಂಬೆ ತಯಾರಿ, ಕರಕುಶಲ ವಸ್ತುಗಳ ಪ್ರಾತಕ್ಷಿಕೆ ನೆರವೇರಿತು.
ನಂತರ ನಡೆದ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಶಾಲಾ ಮುಖ್ಯಶಿಕ್ಷಕಿ ಭಗಿನಿ ವೆನಿಶಾ ಬಿ ಎಸ್ ವಹಿಸಿದರು. ಶಾಲಾ ರಕ್ಷಕ ಶಿಕ್ಷಕ ಸಂಘದ ಉಪಾಧ್ಯಕ್ಷರಾದ ಶ್ರೀಯುತ ರಾಮಚಂದ್ರ ಭಟ್, ಶಾಲಾ ಸ್ಕೌಟ್, ಗೈಡ್, ಕಬ್ ಮತ್ತು ಬುಲ್ ಬುಲ್ ದಳದ ವಾರ್ಷಿಕ ಮೇಳದ ನಾಯಕಿ ಶ್ರೀಮತಿ ವಿಲ್ಮಾ ಫೆರ್ನಾಂಡಿಸ್, ಸ್ಕೌಟ್ಸ್ ಶಿಕ್ಷಕರಾದ ಬಾಲಕೃಷ್ಣ ಪೊರ್ದಾಲ್, ಸ್ಕೌಟ್ ಶಿಕ್ಷಕಿ ಶ್ರೀಮತಿ ಭವ್ಯ, ಬುಲ್ ಬುಲ್ ಶಿಕ್ಷಕಿಯರಾದ ಶ್ರೀಮತಿ ಜೋಸ್ಲಿನ್ ಪೈಸ್, ಶ್ರೀಮತಿ ಮಮತಾ ಮತ್ತು ದೀಕ್ಷಾ, ಕಬ್ ಶಿಕ್ಷಕಿಯರಾದ ಶ್ರೀಮತಿ ಸುಶ್ಮಿತಾ ಮತ್ತು ಶ್ರೀಮತಿ ದಿವ್ಯ, ಗೈಡ್ ಶಿಕ್ಷಕಿ ಶ್ರೀಮತಿ ನಳಿನಾಕ್ಷಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version