ನಮ್ಮೊಂದಿಗೆ ಸಂಪರ್ಕ ಸಾಧಿಸಿ

ಇಂದಿನ ಕಾರ್ಯಕ್ರಮ

ಕೆಯ್ಯೂರಿನಲ್ಲಿ ಕಾಂಗ್ರೆಸ್ ಚುನಾವಣಾ ಪ್ರಚಾರ ಸಭೆ 8 ತಿಂಗಳಲ್ಲಿ ಪ್ರತೀ ಕುಟುಂಬಕ್ಕೆ 30 ಸಾವಿರ ಬಂದಿದೆ: ಹೇಮನಾಥ ಶೆಟ್ಟಿ

Published

on

ಪುತ್ತೂರು: ರಾಜ್ಯದಲ್ಲಿ‌ಕಾಂಗ್ರೆಸ್ ಅಧಿಕಾರಕ್ಕೆ ಬಂದ ಬಳಿಕ ಪ್ರತೀ ಕುಟುಂಬಕ್ಕೆ ತಲಾ 30 ಸಾವಿರ ಹಣ ವಿವಿಧ ರೂಪದಲ್ಲಿ ದೊರಕಿದೆ ಎಂದು ಕೆಪಿಸಿಸಿ ಸಂಯೋಜಕರಾದ ಕಾವು ಹೇಮನಾಥ ಶೆಟ್ಟಿ ಹೇಳಿದರು.
ಅವರು ಕೆಯ್ಯೂರು ಗ್ರಾಮದಲ್ಲಿ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದರು.
ಕಾಂಗ್ರೆಸ್ ಎಂದಿಗೂ ಜನತೆಗೆ ದ್ರೋಹ ಮಾಡಿಲ್ಲ, ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟ ಪಕ್ಷ ಕಾಂಗ್ರೆಸ್ ಎಂದಿಗೂ ಬಡವರ ಹಾಗೂ ನೊಂದವರ ಪರವಾಗಿಯೇ ಕೆಲಸ ಮಾಡಲಿದೆ. ಗ್ಯಾರಂಟಿ ಯೋಜನೆಯನ್ನು ಅಧಿಕಾರಕ್ಕೆ ಬಂದ ಒಂದೇ ತಿಂಗಳಲ್ಲಿ ಜಾರಿ ಮಾಡಿದ್ದೇವೆ. ಗ್ಯಾರಂಟಿ ಫಲಾನುಭವಿಗಳು ಕಾಂಗ್ರೆಸ್ ಗೆ ವೋಟು ಹಾಕುತ್ತಾರೆ ಎಂಬ ಪೀರ್ಣ ನಂಬಿಕೆ ನಮ್ಮಲ್ಲಿದೆ ಎಂದು ಅವರು ಹೇಳಿದರು.


ಬಿಜೆಪಿಯವರು ಹೇಳುವುದೆಲ್ಲವೂ ಸುಳ್ಳು: ಅಶೋಕ್ ರೈ
ಪ್ರತೀ ಭಾರಿ ಚುನಾವಣೆ ಬಂದಾಗ ಹಿಂದುತ್ವದ ಮಂತ್ರ ಜಪಿಸುವ ಬಿಜೆಪಿ ಚುನಾವಣೆ ಬಳಿಕ ತನ್ನ ದಾರಿ ತನ್ನದೆಂದು ಸಾಗುತ್ತದೆ, ಬಿಜೆಪಿಯವರ ಹಿಂದುತ್ವ ನಕಲಿ ಹಿಂದುತ್ವವಾಗಿದೆ ಎಂದು ಪುತ್ತೂರು ಶಾಸಕರಾದ ಅಶೋಕ್ ರೈ ಹೇಳಿದರು.





ಯಾವುದೇ ಅಭಿವೃದ್ದಿ ಅಜೆಂಡಾ ಇಲ್ಲದ ಬಿಜೆಪಿಗರು ಮೋದಿಗಾಗಿ ವೋಟು ಕೊಡಿ ಎಂದು ಹೇಳುತ್ತಾರೆ . ಮೋದಿಗಾಗಿ ವೋಟು ಕೊಟ್ಟು ಈ ಹಿಂದೆ ಗೆದ್ದವರು ಇಲ್ಲಿ ಏನು‌ಮಾಡಿದ್ದಾರೆ ಎಂಬುದನ್ನು‌ನಾವು ತಿಳಿದುಕೊಳ್ಳಬೇಕು. ಬಡವರು ನೆಮ್ಮದಿಯಾಗಿ ಬದುಕಬೇಕಿದ್ದರೆ ಕಾಂಗ್ರೆಸ್ ಅಧಿಕಾರಜ್ಕೆ ಬರಲೇಬೇಕು ಇಲ್ಲವಾದರೆ ಬಹಳ ಕಷ್ಟವಿದೆ‌ಎಂದು ಶಾಸಕರು ಹೇಳಿದರು. ನಮ್ಮ‌ಒಂದು ವೋಟು ನಮ್ಮ‌ಬದುಕನ್ನೇ‌ಬದಲಿಸಬಹುದು.‌ಬಡವರ ಪರ ಮತ್ತು ಅಭಿವೃದ್ದಿ ಪರ ಇರುವ ಕಾಂಗ್ರೆಸ್ಸನ್ನು ಬೆಂಬಲಿಸಿ ಎಂದು‌ಮನವಿ ಮಾಡಿದರು.

ವೇದಿಕೆಯಲ್ಲಿ‌ಕೆಯ್ಯೂರು ವಲಯಾಧ್ಯಕ್ಷರಾದ ಎ ಕೆ ಜಯರಾಮ ರೈ, ಉಸ್ತುವಾರಿಗಳಾದ ಕೃಷ್ಣಪ್ರಸಾದ್ ಅಳ್ವ, ಮಹೇಶ್ ರೈ ಅಂಕೊತ್ತಿಮಾರ್, ಮುರಳೀಧರ್ ರೈ ಮಠಂತಬೆಟ್ಟು ಉಪಸ್ಥಿತರಿದ್ದರು.

Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version