ನಮ್ಮೊಂದಿಗೆ ಸಂಪರ್ಕ ಸಾಧಿಸಿ

ಇಂದಿನ ಕಾರ್ಯಕ್ರಮ

ಕಾರು ಬಿಟ್ಟು ರಿಕ್ಷಾ ಹತ್ತಿ ಗಮನ ಸೆಳೆದ ಅಭ್ಯರ್ಥಿ ಪದ್ಮರಾಜ್ ಆರ್. ಪೂಜಾರಿ ಉಳ್ಳಾಲ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಿಂದ ಬಿರುಸಿನ ಪ್ರಚಾರ ಗಮನ ಸೆಳೆದ ರೋಡ್ ಶೋ; ಧಾರ್ಮಿಕ ಕ್ಷೇತ್ರಗಳಲ್ಲಿ ವಿಶೇಷ ಪ್ರಾರ್ಥನೆ

Published

on

ಮಂಗಳೂರು: ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್. ಪೂಜಾರಿ ಅವರ ಪರವಾಗಿ ಉಳ್ಳಾಲ ವಿಧಾನಸಭಾ ಕ್ಷೇತ್ರದ ವಿವಿದೆಡೆ ಪ್ರಚಾರ ಕಾರ್ಯ ನಡೆಯಿತು.ಪದ್ಮರಾಜ್ ಆರ್. ಪೂಜಾರಿ ಸೇರಿದಂತೆ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಮನೆ, ಅಂಗಡಿಗಳಿಗೆ ತೆರಳಿ, ಮತ ಯಾಚನೆ ನಡೆಸಿದರು.

ಕೋಟೆಕಾರ್, ಕಾಪಿಕಾಡ್, ತಲಪಾಡಿಯ ಕೆ.ಸಿ. ರೋಡ್ ಜಂಕ್ಷನ್, ಕುಂಪಲಕ್ರಾಸ್, ಕುಂಪಲ ಆಶ್ರಯ ಕಾಲನಿ, ಪಿಲಾರು, ಕುತ್ತಾರು, ಅಂಬ್ಲಮೊಗರು, ಅಸೈಗೋಳಿ, ಕೊಣಾಜೆ, ಗ್ರಾಮಚಾವಡಿ ಮೊದಲಾದೆಡೆ ಪ್ರಚಾರ ಕಾರ್ಯ ನಡೆಸಲಾಯಿತು.ತಲಪಾಡಿ ಟೋಲ್ ಗೇಟ್ ಬಳಿಯಿಂದ ದೇವಿಪುರದವರೆಗೆ ಬೃಹತ್ ರೋಡ್ ಶೋ ನಡೆಯಿತು. ಚೆಂಡೆ ವಾದನದೊಂದಿಗೆ ನಡೆದ ರೋಡ್ ಶೋ ಗಮನ ಸೆಳೆಯಿತು.

ರಿಕ್ಷಾ ಹತ್ತಿ ಪ್ರಚಾರ ನಡೆಸಿದ ಪದ್ಮರಾಜ್:
ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್. ಪೂಜಾರಿ ಅವರು ಆಟೋ ರಿಕ್ಷಾ ಹತ್ತಿ ಪ್ರಚಾರ ನಡೆಸಿ, ಗಮನ ಸೆಳೆದರು. ಕುತ್ತಾರು ಬಳಿ ಆಟೋ ಹತ್ತಿದ ಅಭ್ಯರ್ಥಿ, ಆಸುಪಾಸಿನ ಪ್ರದೇಶಗಳಿಗೆ ಆಟೋದಲ್ಲೇ ತೆರಳಿ ಮತ ಯಾಚನೆ ನಡೆಸಿದರು.

ಧಾರ್ಮಿಕ ಕ್ಷೇತ್ರಗಳ ಭೇಟಿ:
ಕೋಟೆಕಾರಿನ ಕಾಪಿಕಾಡ್ ಶ್ರೀ ಉಮಾಮಹೇಶ್ವರ ದೇವಸ್ಥಾನದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿ, ಭಾನುವಾರದ ಪ್ರಚಾರ ಕಾರ್ಯಕ್ಕೆ ಚಾಲನೆ ನೀಡಲಾಯಿತು. ಬಳಿಕ ಕೋಟೆಕಾರು ಕೊಂಡಾಣ ಶ್ರೀ ಪಿಲಿಚಾಮುಂಡಿ, ಬಂಟ, ಮುಂಡ್ಯತ್ತಾಯ ದೈವಸ್ಥಾನ, ತಲಪಾಡಿ ಶ್ರೀ ರಾಮ ಭಜನಾ ಮಂದಿರ, ಕುಂಪಲ ಶಿವಪುರ ಶ್ರೀ ದುರ್ಗಾಪರಮೇಶ್ವರ ಕ್ಷೇತ್ರ ಕುಂಪಲ ಶಿವಪುರ ಶ್ರೀ ಆದಿಶಕ್ತಿ ಚಾಮುಂಡೇಶ್ವರಿ ದೇವಸ್ಥಾನ, ಕುಂಪಲ ಆಶ್ರಯ ಕಾಲನಿಯಲ್ಲಿರುವ ಶ್ರೀ ಕೊರಗಜ್ಜ ಗುಳಿಗ ಕಟ್ಟೆ ಹಾಗೂ ಅಂಬ್ಲಮೊಗರು ಕೋಟಗುತ್ತು ಶ್ರೀ ಲಕ್ಷ್ಮೀ ನರಸಿಂಹ ದೇವಸ್ಥಾನ, ಅಂಬ್ಲಮೊಗರು ಶ್ರೀ ಕೋರ್ದಬ್ಬು ದೈವಸ್ಥಾನ, ಹರೇಕಳ ವರೇಕಳ ಶ್ರೀ ಕ್ಷೇತ್ರ ವರೇಕಳ ನಾಗಬ್ರಹ್ಮ ಮೂಲಸ್ಥಾನ ಹಾಗೂ ಧೂಮಾವತಿ ಬಂಟ ಮತ್ತಿತರ ಪರಿವಾರ ದೈವಸ್ಥಾ‌ನಕ್ಕೆ ತೆರಳಿ ಪ್ರಸಾದ ಸ್ವೀಕರಿಸಲಾಯಿತು. ಇದೇ ಸಂದರ್ಭ ಕುತ್ತಾರು ಶ್ರೀ ಕೊರಗತನಿಯ ದೈವದ ಆದಿಸ್ಥಳ ಕ್ಷೇತ್ರಕ್ಕೆ ತೆರಳುವ ಸಂದರ್ಭ ಆಡಳಿತ ಕಚೇರಿಯಲ್ಲಿ ಸನ್ಮಾನಿಸಿ, ಗೆಲುವಿಗೆ ಹಾರೈಸಲಾಯಿತು.







ರಾಣಿಪುರ ಮರಿ ವಿಶ್ವರಾಣಿ ಇಗರ್ಜ್ ಹಾಗೂ ಕೆ.ಸಿ. ರೋಡ್ ಮಸೀದಿ, ರೆಂಜಾಡಿ ಬೆಳ್ಮಾ ಕೇಂದ್ರ ಜುಮ್ಮಾ ಮಸೀದಿಗೆ ತೆರಳಿ ಪ್ರಾರ್ಥಿಸಲಾಯಿತು.

ಎಲ್ಲೆಡೆ ಭವ್ಯ ಸ್ವಾಗತ:
ಪದ್ಮರಾಜ್ ಆರ್. ಪೂಜಾರಿ ಅವರು ಮತದಾರರನ್ನು ಭೇಟಿಯಾಗಲು ಬರುವಾಗಲೇ ಕಾರ್ಯಕರ್ತರು, ಮತದಾರರು ಭವ್ಯ ಸ್ವಾಗತ ಕೋರಿದರು. ಕೆಲವೆಡೆ ಪಟಾಕಿ ಸಿಡಿಸಿ ಸಂಭ್ರಮಿಸಿದರು. ಕಾರ್ಯಕರ್ತರು, ಮತದಾರರ ಉತ್ಸಾಹಕ್ಕೆ ಪೂರಕವೆಂಬಂತೆ ಪದ್ಮರಾಜ್ ಆರ್ ಪೂಜಾರಿ ಅವರು ಪ್ರತಿಯೊಬ್ಬ ನಾಗರಿಕರನ್ನು ಮಾತನಾಡಿಸುತ್ತಾ ತೆರಳಿದರು.

ಗೇರು ನಿಗಮ ಅಧ್ಯಕ್ಷೆ ಮಮತಾ ಗಟ್ಟಿ, ಮೂಡಾ ಅಧ್ಯಕ್ಷ ಸದಾಶಿವ ಉಳ್ಳಾಲ್, ರಾಜೀವ್ ಗಾಂಧಿ ವಿವಿ ಸಿಂಡಿಕೇಟ್ ಸದಸ್ಯ ಡಾ. ಯು.ಟಿ. ಇಫ್ತಿಕಾರ್ ಆಲಿ, ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ಸುರೇಶ್ ಭಟ್ನಗರ, ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಶೆಟ್ಟಿ, ಕಾರ್ಯದರ್ಶಿ ಮನ್ಸೂರ್ ಆಲಿ, ಮಾಜಿ ಅಧ್ಯಕ್ಷ ಈಶ್ವರ್ ಉಳ್ಳಾಲ್, ಕಣಚೂರು ಮೋನಿ, ಪಾವೂರು ಮೋನಿ, ಟಿ.ಎಸ್. ಅಬ್ದುಲ್ಲಾ, ದೀಪಕ್ ಪಿಲಾರ್, ಪುರುಷೋತ್ತಮ ಶೆಟ್ಟಿ, ದಿನೇಶ್ ಕುಂಪಲ, ಸುರೇಖಾ ಚಂದ್ರಹಾಸ್, ಚಂದ್ರಿಕಾ ರೈ, ಕುಮಾರಿ ಅಪ್ಪಿ, ಲತಾ ತಲಪಾಡಿ, ಇಬ್ರಾಹಿಂ ಕೆ.ಸಿ. ರೋಡ್, ಸಲಾಂ ಉಚ್ಚಿಲ, ನಾಸೀರ್ ಕೆ.ಸಿ. ರೋಡ್, ಪ್ರಕಾಶ್ ಕುಂಪಲ, ಭಾಸ್ಕರ್ ಕುಲಾಲ್, ವಿಲ್ಫ್ರೆಡ್ ಡಿಸೋಜಾ, ಆರ್.ಕೆ.ಸಿ. ಅಜೀಜ್, ನವೀನ್ ಡಿಸೋಜಾ, ಮ್ಯಾಕ್ಸಿಂ ಡಿಸೋಜಾ, ವಿಲ್ಫ್ರೆಡ್ ಡಿಸೋಜಾ, ವಿಲ್ಮಾ ಡಿಸೋಜಾ, ಟಿ.ಎಸ್. ನಾಸೀರ್ ಮೊದಲಾದವರು ಉಪಸ್ಥಿತರಿದ್ದರು.

Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version