ನಮ್ಮೊಂದಿಗೆ ಸಂಪರ್ಕ ಸಾಧಿಸಿ

ಇಂದಿನ ಕಾರ್ಯಕ್ರಮ

ಮಂಗಳೂರಿನ ವೈಭವ ಮರುಕಳಿಸಲು ಕಾಂಗ್ರೆಸ್ ಗೆಲ್ಲಿಸಿ ತೋಡಾರಿನಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ ಪದ್ಮರಾಜ್ ಆರ್. ಪೂಜಾರಿ

Published

on

ಮೂಡುಬಿದರೆ: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ತೋಡಾರಿನಲ್ಲಿ ಕಾರ್ಯಕರ್ತರ ಸಭೆ ನಡೆಯಿತು.
ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್. ಪೂಜಾರಿ ಮಾತನಾಡಿ, ಕಾಂಗ್ರೆಸ್ ಯಾವತ್ತೂ ಜಾತಿ, ಧರ್ಮದ ವಿಚಾರದಲ್ಲಿ ಚುನಾವಣೆ ಎದುರಿಸಿಲ್ಲ. ಅಭಿವೃದ್ಧಿ ವಿಚಾರವಾಗಿ ಮಾತ್ರ ಚುನಾವಣೆ ಎದುರಿಸಿ, ಉತ್ತಮ ಆಡಳಿತವನ್ನು ನೀಡಿದೆ. ನಮ್ಮ ಭವಿಷ್ಯ, ಮಕ್ಕಳ ಜೀವನವನ್ನು ನಿರ್ಧರಿಸುವ ಚುನಾವಣೆ ಮತ್ತೊಮ್ಮೆ ಬಂದಿದೆ. ವೈಭವದಿಂದ ಮೆರೆಯುತ್ತಿದ್ದ ಮಂಗಳೂರನ್ನು ಮತ್ತೆ ಅದೇ ವೈಭವಕ್ಕೆ ಕೊಂಡೊಯ್ಯುವ ಅಗತ್ಯವಿದೆ ಎಂದರು.



ಮಾಜಿ ಸಚಿವ ಅಭಯಚಂದ್ರ ಜೈನ್ ಮಾತನಾಡಿ, ನಾನು ಶಾಸಕನಾಗಿದ್ದಾಗಲೇ ಹೊಸಬರಿಗೆ ಅವಕಾಶ ಕೊಡಿ ಎಂದು ಕೇಳಿಕೊಂಡಿದ್ದೆ. ಇದೀಗ ಯುವಕನಿಗೆ, ವಕೀಲನಿಗೆ ಅವಕಾಶ ನೀಡಲಾಗಿದೆ. ಸಮರ್ಥ ಅಭ್ಯರ್ಥಿ ಮಾತ್ರವಲ್ಲ, ನಾವು ಗೌರವಿಸುವಂತಹ ಅಭ್ಯರ್ಥಿ ಪದ್ಮರಾಜ್ ಆರ್. ಪೂಜಾರಿ. ಅವರನ್ನು ಗೆಲ್ಲಿಸಿಕೊಡಬೇಕು ಎಂದು ಮನವಿ ಮಾಡಿಕೊಂಡರು.








ಮಿಥುನ್ ರೈ ಮಾತನಾಡಿ, ಹಿಂದುಳಿದ ವರ್ಗದ ಧ್ವನಿಯಾಗಿರುವ ಪದ್ಮರಾಜ್ ಆರ್. ಪೂಜಾರಿ ಅವರ ಗೆಲುವಿಗಾಗಿ ಈಗ ನಾವೆಲ್ಲಾ ಧ್ವನಿಯಾಗಬೇಕು ಎಂದರು.

ಜಿಲ್ಲಾ ವಕ್ಫ್ ಅಧ್ಯಕ್ಷ ಅಬ್ದುಲ್ ಸಲಾಂ ತೋಡಾರ್, ರಾಜೇಶ್ ಅಡ್ಲಕೆರೆ, ಚಂದ್ರಹಾಸ್ ಸಾಧು ಸನಿಲ್, ಮೂಡುಬಿದರೆ ಉಸ್ತುವಾರಿ, ಗುರುರಾಜ್, ಬ್ಲಾಕ್ ಅಧ್ಯಕ್ಷ ವಲೇರಿಯನ್ ಸಿಕ್ವೇರಾ, ನಜೀರ್, ಇಸಾಕ್ ಹಾಜಿ, ಲತೀಫ್, ಆಸೀಫ್ ಮೊದಲಾದವರು ಉಪಸ್ಥಿತರಿದ್ದರು.

Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version