Published
8 months agoon
By
Akkare Newsಬೆಳ್ತಂಗಡಿ: ಇಲ್ಲಿನ ಶಿರ್ಲಾಲು ನೆಲ್ಲಿಗುಡ್ಡೆ ಶ್ರೀ ಕೊಡಮಣಿತ್ತಾಯ, ಸತ್ಯಸಾರಮುಪ್ಪಣ್ಯ ದೈವಸ್ಥಾನ, ಬ್ರಹ್ಮಬೈದರ್ಕಳ ಗರಡಿಗೆ ಲೋಕಸಭಾ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್. ಪೂಜಾರಿ ಭೇಟಿ ನೀಡಿ, ಪ್ರಾರ್ಥನೆ ಸಲ್ಲಿಸಿದರು.
ಆಡಳಿತ ಮಂಡಳಿ ಗೌರವಾಧ್ಯಕ್ಷ ರಮಾನಂದ ಗುಡ್ಡಾಜೆ, ಅಧ್ಯಕ್ಷ ವಿಶ್ವನಾಥ್ ಸಾಲ್ಯಾನ್ ಪುದ್ದರಬೈಲು, ಉಪಾಧ್ಯಕ್ಷ ಕೃಷ್ಫಪ್ಪ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು.